ಬೆಂಗಳೂರು: ರವಿ ರಾಮ್ ನಿರ್ದೇಶನದ 'ರಾಜಸಿಂಹ' ಈ ವಾರ ತೆರೆಗೆ ಬರುತ್ತಿದೆ. ಇದರಲ್ಲಿ ಅನಿರುದ್ದ ನಾಯಕನಾಗಿರುವುದು ಸೇರಿದಂತೆ ಹಲವು ಕಾರಣಕ್ಕಾಗಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.
ವಿಷ್ಟುವರ್ಧನ್ ತ್ರಿಪಾತ್ರದಲ್ಲಿ ಕಾಣಿಸಿಕೊಂಡಿದ್ದ 'ಸಿಂಹಾದ್ರಿಯ ಸಿಂಹ' ಚಿತ್ರದ ಮುಂದುವರಿದ ಭಾಗವಾಗಿರುವ ಈ ಚಿತ್ರದಲ್ಲಿ ಅನಿರುದ್ದ ತಂದೆಯ ಪಾತ್ರವನ್ನು ಮುಂದುವರಿಸಲಿದ್ದಾರೆ. "ನಾನು ನರಸಿಂಹ ಗೌಡನ ಪಾತ್ರವನ್ನು ಮಾಡುತ್ತಿದ್ದು ಇದು ಸಿಂಹಾದ್ರಿಯ ಸಿಂಹದ ನರಸಿಂಹ ಗೌಡನ ಪಾತ್ರದ ಮುಂದುವರಿಕೆಯಾಗಿರುತ್ತದೆ. ಸಿಂಹಾದ್ರಿಯ ಸಧದಲ್ಲಿ ಈ ಪಾತ್ರವನ್ನು ನನ್ನ ಮಾವ (ವಿಷ್ಣುವರ್ಧನ್) ಮಾಡಿದ್ದರು" ಅಂಬರೀಶ್ ಹಾಗೂ ಭಾರತಿ ವಿಷ್ಣುವರ್ಧನ್ ರಂತಹಾ ಹಿರ್ಯ ನಟರೊಡನೆ ತೆರೆ ಹಂಚಿಕೊಳ್ಳಲು ಸಿದ್ದರಾದ ಅನಿರುದ್ದ ಹೇಳಿದ್ದಾರೆ.
"ಇದೇ ಮೊದಲ ಬಾರಿಗೆ ನಾನು ನನ್ನ ಅತ್ತೆ (ಭಾರತಿ ವಿಷ್ಣುವರ್ಧನ್) ಅವರೊಡನೆ ಕೆಲಸ ಮಾಡುತ್ತಿದ್ದೇನೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನಟಿ, ಗೌರವ ಡಾಕ್ಟರೇಟ್ ಹೊಂದಿದ, ಅನುಭವಿ ಹಿರಿಯ ಕಲಾವಿದೆಯೊಡನೆ ನಟಿಸುವುದರಿಂದ ನಾನೂ ಸಾಕಷ್ಟು ಕಲಿಯಲು ಸಾದ್ಯವಾಗಿದೆ. ಇನ್ನು ಅಂಬರೀಶ್ ಅವರೊಡನೆ ನಟಿಸುವುದು ಒಂದು ಗೌರವ ಎಂದು ನಾನು ಬಾವಿಸುತ್ತೇನೆ." ನಟ ಅನಿರುದ್ದ ಹೇಳಿದ್ದಾರೆ.
ರಾಜಸಿಂಹವು ವಾಣಿಜ್ಯ ಉದ್ದೇಶದ ಚಿತ್ರವಾಗಿದ್ದರೂ ಕಥೆಯು ವಾಸ್ತವಕ್ಕೆ ಹತ್ತಿರವಾಗಿದೆ ಎಂದು ನಟ ತಿಳಿಸಿದರು."ಚಿತ್ರವು ನನ್ನ ಮತ್ತು ನನ್ನ ಕುಟುಂಬಕ್ಕೆ ಹತ್ತಿರವಿದ್ದು ಅಭಿಮಾನಿಗಳು ಸಹ ಅಷ್ಟೇ ಇಷ್ಟಪಡುತ್ತಾರೆ ಎಂದು ನಾನು ಭಾವಿಸುತ್ತೇನೆ.
"ನನ್ನ ಮಾವ ನಿಧನರಾಗಿ ಎಂಟು ವರ್ಷಗಳಾದವು, ಆದರೆ ಅವರು ಇಂದಿಗೂ ನಮ್ಮೊಂದಿಗೆ ಇದ್ದಂತೆ ನಾವು ಭಾವಿಸುತ್ತೇವೆ ಮತ್ತು ಇಂದು ನಾವು ಮಾಡುತ್ತಿರುವ ಎಲ್ಲಾ ಕೆಲಸದ ಹಿಂದೆ ಅವರೊಂದು ಚಾಲನಾ ಶಕ್ತಿಯಾಗಿದ್ದಾರೆ." ಚಿತ್ರದಲ್ಲಿ ನಿಖಿತಾ ತುಕ್ರಾಲ್ ಹಾಗೂ ಸಂಜನಾನಾ ನಾಯಕಿಯರಾಗಿದ್ದು ಜಿಸ್ಸಿ ಗಿಫ್ಟ್ ಸಂಗೀತ ನಿರ್ದೇಶನವಿದೆ