ನಿರ್ದೇಶಕ ವಿಜಯ್ ನಾಗೇಂದ್ರ, ಸಂತೋಷ್ ಆನಂದ್ ರಾಮ್ ಜೊತೆಗೆ ನಟ ಗಣೇಶ್, ನಿರ್ಮಾಪಕ ಸೈಯದ್ ಸಲಾಮ್ 
ಸಿನಿಮಾ ಸುದ್ದಿ

'ಗೀತಾ' ನನ್ನ ವೃತ್ತಿ ಜೀವನದ ವಿಶೇಷ ಚಿತ್ರ: ಗಣೇಶ್

2006ರಲ್ಲಿ 'ಮುಂಗಾರು ಮಳೆ' ಚಿತ್ರದ ಮೂಲಕ ಯಶಸ್ಸು ಕಂಡ ಗಣೇಶ್ ನಂತರ ಅಭಿಮಾನಿಗಳ ಪಾಲಿಗೆ ಗೋಲ್ಡನ್ ...

2006ರಲ್ಲಿ 'ಮುಂಗಾರು ಮಳೆ' ಚಿತ್ರದ ಮೂಲಕ ಯಶಸ್ಸು ಕಂಡ ಗಣೇಶ್ ನಂತರ ಅಭಿಮಾನಿಗಳ ಪಾಲಿಗೆ ಗೋಲ್ಡನ್ ಸ್ಟಾರ್ ಅನಿಸಿಕೊಂಡದ್ದು ಇತಿಹಾಸ.

ಕಳೆದ ವರ್ಷ ಚಮಕ್ ಎಂಬ ಮತ್ತೊಂದು ಯಶಸ್ವಿ ಚಿತ್ರ ಕೊಟ್ಟ ನಟ ಗಣೇಶ್ ಅವರ ಕೈಯಲ್ಲಿ ಈ ವರ್ಷ ಕೆಲವು ಉತ್ತಮ ಆಸಕ್ತಿಕರ ಸಿನಿಮಾಗಳಿವೆ. ಪ್ರಶಾಂತ್ ರಾಜ್ ನಿರ್ದೇಶನದ ಆರೆಂಜ್, ನಿರ್ದೇಶಕ ನಾಗಣ್ಣ ಜೊತೆ ಹಾರರ್-ಕಾಮಿಡಿ ಚಿತ್ರ ಮಾಡಲು ಕೂಡ ಸಜ್ಜಾಗಿದ್ದಾರೆ. ಅವರು ಈ ಸಿನಿಮಾ ಮಾಡುತ್ತಿರುವುದು ತಮ್ಮ ಮಗಳು ಚಾರಿತ್ರ್ಯ ಆಸೆಯನ್ನು ಈಡೇರಿಸುವುದಕ್ಕೋಸ್ಕರವಂತೆ.

ಆ ನಂತರದ್ದು ಇದೀಗ ಹೆಚ್ಚು ಸದ್ದು ಮಾಡುತ್ತಿರುವ ಚಿತ್ರವೇ ಗೀತಾ. ಚೊಚ್ಚಲ ನಿರ್ದೇಶಕ ವಿಜಯ್ ನಾಗೇಂದ್ರ ನಿರ್ದೇಶನದ ಚಿತ್ರವಿದು. ಗೋಲ್ಡನ್ ಮೂವೀಸ್ ನಡಿ ತಯಾರಾಗಲಿರುವ ಈ ಚಿತ್ರಕ್ಕೆ ಸೈಯದ್ ಸಲಾಮ್ ಕೂಡ ಬಂಡವಾಳ ಹೂಡಲಿದ್ದಾರೆ.

ಗೋಲ್ಡನ್ ಸ್ಟಾರ್ ಹುಟ್ಟುಹಬ್ಬದ ದಿನವಾದ ಇಂದು ಅಧಿಕೃತವಾಗಿ ಚಿತ್ರ ಸೆಟ್ಟೇರಲಿದೆ. ಈ ಮಧ್ಯೆ ಆರೆಂಜ್ ಚಿತ್ರದ ಟೀಸರ್ ನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿ ಪ್ರಶಾಂತ್ ರಾಜ್ ಇದ್ದಾರೆ. ಇನ್ನು ನಾಗಣ್ಣ ಕೂಡ ತಮ್ಮ ಚಿತ್ರದ ಹೆಸರನ್ನು ಘೋಷಿಸಲಿದ್ದಾರೆ.

ಗೀತಾ ಚಿತ್ರದ ಮೊದಲ ನೋಟ ಈಗಾಗಲೇ ಬಿಡುಗಡೆಯಾಗಿ ಹೆಚ್ಚು ಸದ್ದು ಮಾಡಿದೆ. ಅದರಲ್ಲಿ ಗಣೇಶ್ ತಮ್ಮ ಪಾಕೆಟ್ ಗೆ ಕರ್ನಾಟಕ ಧ್ವಜವನ್ನು ಅಂಟಿಸಿಕೊಂಡಿದ್ದಾರೆ. ಪಾತ್ರದ ರೆಟ್ರೊ ಲುಕ್ ನಲ್ಲಿ ಕಾಣಿಸಿಕೊಳ್ಳಲು ಕಳೆದೊಂದು ತಿಂಗಳಿನಿಂದ ಶ್ರಮ ಪಡುತ್ತಿದ್ದು ಜೂನ್ 22ರಂದು ಫೋಟೋಶೂಟ್ ಮಾಡಿಸಿದ್ದೇವೆ. ಪ್ರತಿವರ್ಷ ನನ್ನ ಗೋಲ್ಡನ್ ಮೂವಿಸ್ ನಡಿ ಒಂದು ಚಿತ್ರವಾದರೂ ತಯಾರಿಸಲಿದ್ದೇವೆ, ಈ ವರ್ಷ ಗೀತಾವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಗೀತಾ ಚಿತ್ರ 1980ರ ದಶಕದ ಶಂಕರ್ ನಾಗ್ ಅವರ ಗೀತಾ ಚಿತ್ರದ ಶೀರ್ಷಿಕೆಯನ್ನು ಹೊಂದಿರುವುದರಿಂದ ನನ್ನ ವೃತ್ತಿ ಜೀವನದಲ್ಲಿ ಇದು ವಿಶೇಷ ಸಿನೆಮಾ ಎನ್ನುತ್ತಾರೆ ಗಣೇಶ್.

ಈ ಚಿತ್ರದಲ್ಲಿ ಶಂಕರ್ ನಾಗ್ ಅವರ ಪಾತ್ರದ ಛಾಯೆ ಸ್ವಲ್ಪ ಮಟ್ಟಿಗೆ ಗಣೇಶ್ ಅವರಲ್ಲಿ ಕಾಣಿಸಿಕೊಳ್ಳುವುದು ಬಿಟ್ಟರೆ ಎರಡೂ ಚಿತ್ರಗಳ ವಿಷಯಗಳು ಸಂಪೂರ್ಣ ಭಿನ್ನ. ಶೂಟಿಂಗ್ ಆರಂಭವಾದ ನಂತರ ಹೆಚ್ಚಿನ ವಿವರಣೆ ನೀಡಲಿದ್ದೇವೆ. ಆರೆಂಜ್ ಚಿತ್ರದ ಹಾಡು ಮತ್ತು ಕ್ಲೈಮಾಕ್ಸ್ ಚಿತ್ರೀಕರಣ ಬಾಕಿಯಿರುವುದರಿಂದ ಅದಕ್ಕೆ 18ರಿಂದ 20 ದಿನಗಳು ಬೇಕಾಗಬಹುದು. ನಂತರ ನಾಗಣ್ಣ ಅವರ ಜೊತೆ ಸಿನಿಮಾ ಆರಂಭಿಸಿ ಗೀತಾ ಚಿತ್ರದ ಚಿತ್ರೀರಣ ಸೆಪ್ಟೆಂಬರ್ ನಲ್ಲಿ ಆರಂಭವಾಗಲಿದೆ ಎಂದರು.

ವಿಜಯ್ ನಾಗೇಂದ್ರ ಅವರ ನಿರ್ದೇಶನದ ಬಗ್ಗೆ ಗಣೇಶ್ ಅವರಿಗೆ ನಂಬಿಕೆಯಿದೆ. ಒಂದು ವರ್ಷ ಹಿಂದೆಯೇ ಅವರು ಕಥೆ ಹಿಡಿದುಕೊಂಡು ಬಂದಿದ್ದರಂತೆ. ಅವರು ನಿರ್ದೇಶಕ ಸಂತೋಷ್ ಆನಂದ್ ರಾಮ್ ಜೊತೆಗೆ ಕೆಲಸ ಮಾಡಿದವರು. ಸಂತೋಷ್ ಆನಂದ್ ರಾಮ್ ಅವರೇ ವಿಜಯ್ ಅವರನ್ನು ಗಣೇಶ್ ಗೆ ಪರಿಚಯ ಮಾಡಿಸಿದ್ದಂತೆ.

ಗೀತಾ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ, ಶ್ರೀಶ ಕುಡುವಳ್ಳಿ ಛಾಯಾಗ್ರಹಣ ನೀಡಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT