ವಿಜಯ್ ಸೇತುಪತಿ ಮತ್ತು ವಸಂತ್ ವಿಷ್ಣು 
ಸಿನಿಮಾ ಸುದ್ದಿ

ಕನ್ನಡದಲ್ಲಿ ವಿಜಯ್ ಸೇಥುಪತಿ ನಟನೆಯ ಚೊಚ್ಚಲ ಸಿನಿಮಾ 'ಅಖಾಡ' ಆಗಸ್ಟ್ ನಲ್ಲಿ ರಿಲೀಸ್

ವಸಂತ್ ವಿಷ್ಣು ಮತ್ತು ವಿಜಯ್ ಸೇಥುಪತಿ ನಟನೆಯ ದ್ವಿಭಾಷಾ ಚಿತ್ರ ಅಖಾಡ ಸಿನಿಮಾವನ್ನು ಜಿಗರ್ ಥಂಡ ಖ್ಯಾತಿಯ ಶಿವ ಗಣೇಶ್ ನಿರ್ದೇಶಿಸುತ್ದಿದ್ದು...

ಬೆಂಗಳೂರು: ವಸಂತ್ ವಿಷ್ಣು ಮತ್ತು ವಿಜಯ್ ಸೇಥುಪತಿ ನಟನೆಯ ದ್ವಿಭಾಷಾ ಚಿತ್ರ ಅಖಾಡ ಸಿನಿಮಾವನ್ನು ಜಿಗರ್ ಥಂಡ ಖ್ಯಾತಿಯ ಶಿವ ಗಣೇಶ್ ನಿರ್ದೇಶಿಸುತ್ದಿದ್ದು, ತಮಿಳು ಮತ್ತು ಕನ್ನಡದಲ್ಲಿ ಚಿತ್ರ ತಯಾರಾಗಿದೆ.
ಕಳೆದ ಮೂರವರೆ ವರ್ಷಗಳಿಂದ ಸಿನಿಮಾ ಕೆಲಸ ನಡೆಯುತ್ತಿದ್ದು ಮೊದಲ ಬಾರಿಗೆ ವಿಜಯ್ ಸೇತುಪತಿ ಕನ್ನಡದಲ್ಲಿ ನಟಿಸುತ್ತಿದ್ದಾರೆ. ಸೆನ್ಸಾರ್ ಮಂಡಳಿ ಅನುಮತಿ ಪಡೆದ ಕೂಡಲೇ ಮೊದಲ ಪ್ರಮೋಷನ್ ಆರಂಭವಾಗಲಿದೆ, ಸಿನಮಾ ಚಿತ್ರೀಕರಣ ಕೆಲಕಾಲ ಸ್ಥಗಿತಗೊಂಡಿತ್ತು.
ಸಿನಿಮಾದ ಕೆಲ ಭಾಗಗಳನ್ನು ಮತ್ತೆ ಶೂಟಿಂಗ್ ಮಾಡಿದ್ದೇವೆ, ಮೊದಲು ಬುಕ್ ಮಾಡಿದ್ದ ಕಲಾವಿದರ ಡೇಟ್ಸ್ ಹೊಂದಾಣಿಕೆ ಸಾಧ್ಯವಾಗದ ಕಾರಣ ಹೊಸ ಕಲಾವಿದರೊಂದಿಗೆ ಸಿನಿಮಾ ಶೂಟಿಂಗ್ ಮುಗಿಸಿದ್ದೇವೆ, ವಿಜಯ್ ಮೊದಲಿು ಬೋರ್ಡ್ ಗೆ ಬಂದರು. ಸೇತುಪತಿ ನಂತರ ಅವರು ಈ ಸಿನಿಮಾಗೆ ಬಂದರು ಎಂದು  ವಸಂತ್ ವಿಷ್ಣು ತಿಳಿಸಿದ್ದಾರೆ.,
ಕನ್ನಡದಲ್ಲಿ ಅಖಾಡ ತಮಿಳಿನಲ್ಲಿ ಎಡಕು ಎಂದು ಟೈಟಲ್ ಇಡಲಾಗಿದೆ, ಸೋಷಿಯಲ್ ಮೀಡಿಯಾ ಇರದ ಸಮಯದಲ್ಲಿನ ಚಿತ್ರೀಕರಣ ಮಾಡಲಾಗಿದೆ ಎಂದು ಹೇಳಿದ್ದಾರೆ,
ಆಗಸ್ಟ್ ನಲ್ಲಿ ಕನ್ನಡ ವರ್ಸನ್ ರಿಲೀಸ್ ಆಗುವ ಸಾಧ್ಯತೆಯಿದೆ, ನಂತರ ತಮಿಳಿನಲ್ಲಿ ಬಿಡುಗಡೆ ಮಾಡಲಾಗುವುದು, ನಯನ, ಅವಿನಾಶ್ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೇರಳಂನ ತ್ರಿಶೂರ್‌ನಲ್ಲಿ ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿ: ತಮಿಳು ನಾಡಿನ ಎಂಟು ಮಂದಿ ಸಾವು, 7 ಎಂಜಿನಿಯರಿಂಗ್ ವಿದ್ಯಾರ್ಥಿಗಳು; Video

ಮತ್ತೊಂದು ಮಹಾಯುದ್ಧದ ಭೀತಿ: ಇರಾನ್‌ನ 'Pickaxe Mountain' ಧ್ವಂಸಕ್ಕೆ ಅಮೆರಿಕ ಸ್ಕೆಚ್, "ಶೀಘ್ರದಲ್ಲೇ ದಾಳಿ" ಎಂದ ಡೊನಾಲ್ಡ್ ಟ್ರಂಪ್..!

China ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅಮೆರಿಕಕ್ಕೆ; ಸೆ.24ರಂದು ಶ್ವೇತಭವನದಲ್ಲಿ ಔತಣಕೂಟ, Iran ಸಂಘರ್ಷವನ್ನು ‘ಸಣ್ಣ ವಿಚಾರ’ ಎಂದ Trump

ಒಬ್ಬ ರಾಜಿನಾಮೆ ಕೊಟ್ಟರೇನು? ನಮ್ಮ ಸರ್ಕಾರದಲ್ಲಿ 100 ನಾಗೇಂದ್ರ ಇದ್ದಾರೆ; ಸಿಎಂ ಡಿಕೆ ಶಿವಕುಮಾರ್

Park Billiಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆಕ್ಷೇಪ: ಸ್ಪಷ್ಟನೆ ಕೋರಿ ಸರ್ಕಾರಕ್ಕೆ ವಾಪಸ್..!