ಸಿನಿಮಾ ಸುದ್ದಿ

ವಿಷ್ಣುವರ್ಧನ್ ಅಭಿನಯದ 'ನಾಗರಹಾವು' ಜುಲೈ 20ಕ್ಕೆ ಮರು ಬಿಡುಗಡೆ

Shilpa D
ಬೆಂಗಳೂರು: ಡಾ. ವಿಷ್ಣುವರ್ಧನ್ ಮತ್ತು ರೆಬೆಲ್ ಸ್ಟಾರ್ ಅಂಬರೀಷ್ ಅವರನ್ನು ಕನ್ನಡ ಸಿನಿಮಾ ರಂಗಕ್ಕೆ ಪರಿಚಯಿಸಿದ ನಾಗರಹಾವು ಸಿನಿಮಾ ಜುಲೈ 20ರಂದು ಮರು ಬಿಡುಗಡೆಯಾಗಲಿದೆ. 
ಪುಟ್ಟಣ್ಣ ಕಣಗಾಲ್ ನಿರ್ದೇಶನದ ಈ ಚಿತ್ರವನ್ನು  ​​ರವಿಚಂದ್ರನ್​​ ತಂದೆ ಎನ್​. ವೀರಾಸ್ವಾಮಿ ನಿರ್ಮಾಣ ಮಾಡಿದ್ದರು. ನಾಗರಹಾವು  ಸಿನಿಮಾ ಈಗ ಸರೌಂಡ್​ ಸೌಂಡ್​ 7.1 ಹಾಗೂ ಡಿಜಿಟಲ್​ ಇಮೇಜಿಂಗ್​​ ಜೊತೆಗೆ 2ಕೆ ರೆಸ್ಲ್ಯೂಷನ್​ನಲ್ಲಿ ಮರುನಿರ್ಮಾಣಗೊಂಡಿದ್ದು, ವಿಷ್ಣು ಅಭಿಮಾನಿಗಳಿಗೆ ಮತ್ತೆ ರಾಮಾಚಾರಿಯನ್ನ‘ ಹೊಸ ರೂಪದಲ್ಲಿ ತೋರಿಸಲಾಗುತ್ತಿದೆ.
1973ರಲ್ಲಿ ಈ ಸಿನಿಮಾ ನಿರ್ಮಾಣವಾಗಿತ್ತು ಆರತಿ, ಕೆ.ಎಸ್ ಅಶ್ವತ್, ಮತ್ತಿತರರು ಸಿನಿಮಾದಲ್ಲಿ ನಟಿಸಿದ್ದರು ವಿಜಯ್ ಭಾಸ್ಕರ್ ಸಂಗೀತ್ ನಿರ್ದೇಶಿಸಿದ್ದು, ಚಿಟ್ಟಿಬಾಬು ಸಿನಿಮಾಟೋಗ್ರಾಫ್ ಮಾಡಿದ್ದಾರೆ.
SCROLL FOR NEXT