ಬೆಂಗಳೂರು: ಹರ್ಷ ನಿರ್ದೇಶಿಸಿ, ನಿಖಿಲ್ ಕುಮಾರ್ , ರಚಿತಾ ರಾಮ್ ಅಭಿನಯದ ಸೀತಾರಾಮ ಕಲ್ಯಾಣ ಟೀಸರ್ ಜುಲೈ 31 ರಂದು ರಾಮನಗರದಲ್ಲಿ ಬಿಡುಗಡೆಯಾಗಲಿದೆ.
ರಾಮನಗರದಲ್ಲಿ ಕರಗ ಮತ್ತು ಚಾಮುಂಡೇಶ್ವರಿ ಹಬ್ಬ ನಡೆಯಲಿದ್ದು, ನಿಖಿಲ್ ಮತ್ತು ಅವರ ಪೋಷಕರು ರಾಮನಗರದ ಹಬ್ಬದಲ್ಲಿ ಪಾಲ್ಗೋಳ್ಳಲಿದ್ದಾರೆ, ಇದೇ ವೇಳೆ ರಾಮನಗರದಲ್ಲಿ ಟೀಸರ್ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ಸುಮಾರು 2 ಲಕ್ಷ ಜನ ಸಮಾರಂಭಕ್ಕೆ ಸೇರಲಿದ್ದಾರೆ ಎಂದು ಕಾರ್ಯಕಾರಿ ನಿರ್ಮಾಪಕ ಸುನಿಲ್ ಗೌಡ ತಿಳಿಸಿದ್ದಾರೆ.
ಚನ್ನಾಂಬಿಕಾ ಪ್ರೊಡಕ್ಷನ್ ಅಡಿಯಲ್ಲಿ ಅನಿತಾ ಕುಮಾರ ಸ್ವಾಮಿ ಸಿನಿಮಾ ನಿರ್ಮಾಣ ಮಾಡಿದ್ದಾರೆ, ಶರತ್ ಕುಮಾರ್ , ಮಧೂ, ರವಿ ಶಂಕರ್ ಚಿಕ್ಕಣ್ಣ ಮತ್ತಿತರರು ನಟಿಸಿದ್ದಾರೆ.