ರಾಧಿಕಾ ಪಂಡಿತ್ 
ಸಿನಿಮಾ ಸುದ್ದಿ

ಸ್ಯಾಂಡಲ್ ವುಡ್ ನನಗೆ ಹೆಸರು, ಖ್ಯಾತಿ ಮತ್ತು ಜೀವನ ಸಂಗಾತಿಯನ್ನು ನೀಡಿದೆ: ರಾಧಿಕಾ ಪಂಡಿತ್

ರಾಧಿಕಾ ಪಂಡಿತ್ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಸ್ಥಾನ ಗಳಿಸಿಕಿಒಂಡಿದ್ದಾರೆ. ಹತ್ತು ವರ್ಷಗಳಲ್ಲಿ ’ಮೊಗ್ಗಿನ ಮನಸು’ ಚಿತ್ರದಿಂದ ಪ್ರಾರಂಭವಾಗಿ 20 ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ರಾಧಿಕಾ....

ಬೆಂಗಳೂರು: ರಾಧಿಕಾ ಪಂಡಿತ್ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಸ್ಥಾನ ಗಳಿಸಿಕಿಒಂಡಿದ್ದಾರೆ. ಹತ್ತು ವರ್ಷಗಳಲ್ಲಿ ’ಮೊಗ್ಗಿನ ಮನಸು’ ಚಿತ್ರದಿಂದ ಪ್ರಾರಂಭವಾಗಿ 20 ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ರಾಧಿಕಾ  "ನಾಯಕಿಯ ಸ್ಥಾನ ಎನ್ನುವುದು ಅತ್ಯಂತ ಅಲ್ಪ್ಪ ಸಮಯಾವಕಾಶವಿರುವ ಸ್ಥಾನ ಹಾಗೂ ಕೆಲವರು ಉದ್ಯಮದಲ್ಲಿ 15 ವರ್ಷಗಳಿಗೂ ಹೆಚ್ಚಿನ ಕಾಲ ಇದ್ದು ಇನ್ನೂ ನಾಯಕಿಯರು ಎಂದು ಹೇಳಿಕೊಳ್ಳುತಾರೆ. ಆದರೆ ನಾಯಕಿ ಸ್ಥಾನದಲ್ಲಿದ್ದವರು ಕಠಿಣ ಪರಿಶ್ರಮ, ಅದೃಷ್ಟವಂತರಾಗಿರಬೇಕು." ರಾಧಿಕಾ ಹೇಳಿದ್ದಾರೆ.
ಶಾಲೆ, ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ರಾಧಿಕಾ ಥಿಯೇಟರ್ ಅನ್ನು ಪ್ರೀತಿಸುತ್ತಿದ್ದರು. ಮುಂದೆ ಚಿತ್ರ ಜೀವನವನ್ನು ಸಹ ಅವರು ಅಷ್ಟೇ ಸಹಜವಾಗಿ ತೆಗೆದುಕೊಂಡಿದ್ದರು.ಇದುವೇ ಅವರ ಯಶಸ್ಸಿನ ಗುಟ್ಟು.ಮುಂಗಾಪು ಮಳೆ ಚಿತ್ರ ನಿರ್ಮಾಪಕ ಕೃಷ್ಣಪ್ಪ, ನಿರ್ದೇಶಕ ಶಶಾಂಕ್ ಸೇರಿ ತಯಾರಿಸಿದ ಮೊಗ್ಗಿನ ಮನಸು ಮಾಡುವ ವೇಳೆ ಅವರು ನಮ್ಮ ರಾಜ್ಯದ ನಟ ನಟಿಯರು, ತಂತ್ರಜ್ಞರನ್ನು ಆಯ್ಕೆ ಮಾಡಿಕೊಂಡಿದ್ದರು. ಇದರಿಂದಾಗಿಯೇ ನಮಗೆ ಅವಕಾಶ ದೊರಕಿತ್ತು ಎಂದು ರಾಧಿಕಾ ಹೇಳುತ್ತಾರೆ.  ಓರ್ವ ಕಲಾವಿದನಾಗಿ, ರಾಧಿಕಾ ಯಾವಾಗಲೂ ತನ್ನದೃಷ್ಟುಇಓನವನ್ನು ಸ್ಪಷ್ಟವಾಗಿಸಿಕೊಂಡಿದ್ದಾರೆ."ನನ್ನಲ್ಲಿ ಪ್ರತಿಭೆ ಇದೆ.ಉತ್ತಮ ಅಭಿನಯ ನೀಡುವುದು ನನ್ನ ಉದ್ದೇಶ. ನನ್ನ ಪ್ರತಿಭೆಗೆ ನ್ಯಾಯ ನೀಡಿದ್ದ ಮತ್ತು ನನ್ನ ಗುರಿಗಳಿಗೆ ಅನುಗುಣವಾಗಿರುವ ಚಲನಚಿತ್ರಗಳಲ್ಲಿ ನಾನು ನಟಿಸಿದ್ದೇನೆ..ಉದಾಹರಣೆಗೆ ಉತ್ತಮ ತಂಡಗಳೊಂದಿಗೆ ಕೆಲಸ ಮಾಡಿರುವುದರಿಂದ ಉದ್ಯಮದಲ್ಲಿ ಬಲವಾಗಿ ಉಳಿಯಲು ಸಾಧ್ಯವಾಯಿತು ಯಾವುದೇ ವಿವಾದಕ್ಕೆ ಒಳಗಾಗದೆ ನಾನು ಈ ಉದ್ಯಮವನ್ನು ಸಂಪೂರ್ಣವಾಗಿಸಿಕೊಂಡಿದ್ದೇನೆ.ಸ್ಯಾಂಡಲ್ ವುಡ್ ನನಗೆ ಎಲ್ಲವನ್ನೂ ನನ್ನ ಜೀವನದ ಪಾಲುದಾರ (ಓಯಶ್) ಸೇರಿ ನನಗೆ ಬೇಕಾದುದಕ್ಕಿಂತ ಹೆಚ್ಚಿನದನ್ನೇ ನಿಡಿದೆ." 
ರಾಕ್ ಲೈನ್ ಪ್ರೊಡಕ್ಷನ್ ಅಡಿಯಲ್ಲಿ ವಿ. ಪ್ರಿಯಾ ನಿರ್ದೇಶನದ ಹೆಸರಿಡದ ಚಿತ್ರದಲ್ಲಿ ರಾಧಿಕಾ ನಟಿಸುತ್ತಿದ್ದಾರೆ. ಇದು ರಾಧಿಕಾ-ಯಶ್ ವಿವಾಹದ ಬಳಿಕ ಅವರ ಮೊದ ಚಿತ್ರವಾಗಿದೆ."ನನ್ನ ವೃತ್ತಿಜೀವನ ಹಾಗೂ ಖಾಸಗಿ ಬದುಕು ಎರಡನ್ನೂ ನಾನು ಸರೆಇದೂಗಿಸುತ್ತೇನೆ. ಆದರೆ ಚಲನಚಿತ್ರ ವೃತ್ತಿಜೀವನವು ನನ್ನ ಜೀವನದ ಒಂದು ಅವಿಭಾಜ್ಯ ಭಾಗವಾಗಿದ್ದರೂ, ಅದಕ್ಕೆ ಹೊರತಾಗಿಯೂ ನಾನು ಮಗಳು, ಸಹೋದರಿ, ಪತ್ನಿ, ಸೊಸೆ ಆಗಿದ್ದೇನೆ.ನಾನು ಮುಂದೆ ಸಹ ನನ್ನ ವೈಯಕ್ತಿಕ ಜೀವನ, ವೃತ್ತಿಜೀವನವನ್ನು ಸಮತೋಲನ ಕಾಪಾಡಿಕೊಂಡೇ ಹೋಗುವೆ."
"ನಾನು ಪ್ರೇಕ್ಷಕರು ಅಥವಾ ನನ್ನ ಸಹೋದ್ಯೋಗಿಗಳು ಯಾವಾಗಲೂ ಮೆಚ್ಚುಗೆಯನ್ನು ಮತ್ತು ಗೌರವದೊಂದಿಗೆ ನನ್ನ ಕಡೆಗೆ ನೋಡುವುದನ್ನು ಕಂಡಿದ್ದೇನೆ.ಇದು ಒಳ್ಳೆಯದೇ ಆಗಿದೆ.ಇಂತಹಾ ಹೆಸರು ಗಳಿಸುವುದು ಕಷ್ಟಕರ. ನನ್ನ ಹೆಸರನ್ನು ಅವರ ಕೈಯಲ್ಲಿ ಹಚ್ಚೆ ಹಾಕಿರುವ ಅಭಿಮಾನಿಗಳನ್ನು ನಾನು ನೋಡಿದ್ದೇನೆ.  ನನ್ನ ಜನ್ಮದಿನವನ್ನು ಆಚರಿಸಲು ದೊಡ್ಡ ಸಂಖ್ಯೆಯಲ್ಲಿ  ಸೇರುವ ಜನರನ್ನು ನೋಡೊದ್ದಾಗ ಇದನ್ನು ಸಾಧನೆಯಾಗಿ ನಾನು ಭಾವಿಸುತ್ತೇನೆ"
"ನಾನು ಇನ್ನೂ ಯಾವುದೇ ಐತಿಹಾಸಿಕ ಪಾತ್ರಗಳಲ್ಲಿ ಕಾಣಿಸಿಕೊಂಡಿಲ್ಲ, ಜತೆಗೆ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಬೇಕೆನ್ನುವು ದು ನನ್ನ ಬಯಕೆ. ಹೀಗಾಗಿ ಪ್ರೇಕ್ಷಕರಿಗೆ ರೋಮಾಂಚನ ನಿಡಬಲ್ಲ ಇನ್ನಷ್ಟು ವಿಶೇಷ ಪಾತ್ರಗಳಲ್ಲಿ ಣಾನು ಕಾಣಿಸಿಕೊಳ್ಳಬೇಕೆಂದು ಬಯ್ಸುತ್ತೇನೆ. ನಾನಿನ್ನೂ ಬಹ:ಳಷ್ಟು ಸಾಧಿಸಬೇಕಿದೆ."
"ಯಶ್ ಸಹ ಬೆಳ್ಳಿ ಚಮಚವನ್ನಿಟ್ಟುಕೊಂಡು ಬಂದವರಲ್ಲ. ಅವರು ಸಹ ಸಣ್ಣ್ ಅಪುಟ್ಟ ಪಾತ್ರಗಳನ್ನು ಮಾಡುತ್ತಲೇ ಇಂದು ಸೂಪರ್ ಸ್ಟಾರ್ ಆಗಿ ಬೆಳೆದವರು,.ಮೊಗ್ಗಿನ ಮನಸು ಚಿತ್ರದಲ್ಲಿ ರಾಧಿಕಾ ಒಡನೆ ಅಭಿನಯಿಸಿದ ನಟ ಯಶ್ನಿರ್ದೇಶಕ ಶಶಾಂಕ್ ನನಗೆ ಕಥೆಯನ್ನು ವಿವರಿಸಿದ್ದರು.  ಏಳು ಸ್ಕ್ರಿಪ್ಟುಗಳನ್ನು ತಿರಸ್ಕರಿಸಿದ ನಂತರ ಅದನ್ನು ನಾನು ಒಕೆ ಮಾಡಿದ್ದೆ.ನಾನು ಹೊಸಬರಾಗಿರುವುದರಿಂದ ಕೆಲವರು ನನಗೆ ಸ್ಕ್ರಿಪ್ಟ್ ಅನ್ನು ವಿವರಿಸಲು ಬಯಸಿರಲಿಲ್ಲ. ಶಶಾಂಕ್, ಇ ಕೃಷ್ಣಪ್ಪ ಮತ್ತು ಗಂಗಾಧರ್ ನನ್ನ ಪ್ರತಿಭೆಯನ್ನು ಗುರುತಿಸಿದ್ದರು.ಅವರು ದೂರದರ್ಶನದಲ್ಲಿ ಪ್ರಸಾರವಾಗಿದ್ದ ಧಾರಾವಾಹಿಯಲ್ಲಿ ನನ್ನ ಅಭಿನಯವನ್ನು ನೋಡಿದ್ದರು.ಮತ್ತು ನನಗೆ ಅವಕಾಶವನ್ನು ನೀಡಲು ನಿರ್ಧರಿಸಿದರು " ಯಶ್ ಹೇಳಿದ್ದಾರೆ.
ಬಾಲ್ಯದಲ್ಲಿಯೇ  ತಾನು ನಟರಾಗಬೇಕೆಂದು ಬಯಸಿದ್ದ ಯಶ್  ಚಲನಚಿತ್ರೋದ್ಯಮಕ್ಕೆ ಸೇರ್ಪಡೆಯಾಗಿರುವುದು ಅಚ್ಚರಿಯೇನಲ್ಲ ಎನ್ನುವುದು ಅವರ ಭಾವನೆ. "ನಾನು ಕಲೆಯನ್ನು ಪ್ರೀತಿಸುತ್ತೇನೆ. ಅದನ್ನೇ  100 ಪ್ರತಿಶತದಷ್ಟು ನಿಡುತ್ತೇನೆ" ರಾಕಿಂಗ್ ಸ್ಟಾರ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

SCROLL FOR NEXT