ಬಟರ್ ಫ್ಲೈ ಸೆಟ್ ನಲ್ಲಿ ಪಾರುಲ್ ಯಾದವ್, ರಮೇಶ್ ಅರವಿಂದ್ 
ಸಿನಿಮಾ ಸುದ್ದಿ

'ಕ್ವೀನ್' ಚಿತ್ರದ ಕನ್ನಡ ರೀಮೇಕ್ 'ಬಟರ್‏ಫ್ಲೈ': ಯೂರೋಪ್ ನಲ್ಲಿ ಚಿತ್ರೀಕರಣ ಅಂತ್ಯ

ಹಿಂದಿಯ ಯಶಸ್ವಿ ಚಿತ್ರ 'ಕ್ವೀನ್'ನ ರಿಮೇಕ್ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಒಟ್ಟಿಗೆ ತಯಾರಾಗುತ್ತಿದ್ದು...

ಹಿಂದಿಯ ಯಶಸ್ವಿ ಚಿತ್ರ 'ಕ್ವೀನ್'ನ ರಿಮೇಕ್ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಒಟ್ಟಿಗೆ ತಯಾರಾಗುತ್ತಿದ್ದು, ಕೊನೆಯ ಹಂತದ ಶೂಟಿಂಗ್ ನ್ನು ಯುರೋಪ್ ನಲ್ಲಿ ಮುಗಿಸಿದೆ.
ಕಾಜಲ್ ಅಗರ್ವಾಲ್, ತಮನ್ನಾ ಭಾಟಿಯಾ, ಪಾರುಲ್ ಯಾದವ್ ಮತ್ತು ಮಂಜಿಮಾ ಮೋಹನ್ ನಾಯಕಿಯರ ಪಾತ್ರದಲ್ಲಿ ಅಭಿನಯಿಸಿದ್ದು ಇದೇ ಅಕ್ಟೋಬರ್ ನಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯಿದೆ. ಚಿತ್ರೀಕರಣ ಸೆಟ್ ನ ಫೋಟೋ ಸಿಟಿ ಎಕ್ಸ್ ಪ್ರೆಸ್ ಗೆ ಲಭ್ಯವಾಗಿದೆ.

ಪ್ಯಾರಿಸ್ ಪ್ಯಾರಿಸ್, ಬಟರ್ ಫ್ಲೈ,ಜಮ್ ಜಮ್ ಮತ್ತು ದಟ್ ಈಸ್ ಮಹಾಲಕ್ಷ್ಮಿ ಶೀರ್ಷಿಕೆಯಿರುವ ಚಿತ್ರಗಳಿಗೆ ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ರಮೇಶ್ ಅರವಿಂದ್, ಮಲಯಾಳಂನಲ್ಲಿ ನೀಲಕಂಠ ಮತ್ತು ತೆಲುಗಿನಲ್ಲಿ ಪ್ರಶಾಂತ್ ವರ್ಮ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಅಮಿತ್ ತ್ರಿವೇದಿ ಅವರ ಸಂಗೀತವಿದೆ. ಎಲ್ಲಾ ಹಾಡುಗಳ ಚಿತ್ರೀಕರಣ ಮುಗಿದಿದೆ. ಹಾಡುಗಳಿಗೆ ಕೊರಿಯೊಗ್ರಫಿ ಮಾಡಿದವರು ಬೊಸ್ಕೊ ಸೀಸರ್ ಮತ್ತು ಗಣೇಶ್ ಆಚಾರ್ಯ.ಮನು ಕುಮಾರನ್ ಬಂಡವಾಳ ಹೂಡಿದ್ದಾರೆ.

ನಾಲ್ಕು ಭಾಷೆಗಳಲ್ಲಿ ಏಕಕಾಲಕ್ಕೆ ಪ್ರಾಜೆಕ್ಟ್ ಇಷ್ಟೊಂದು ಸುಲಭವಾಗಿ ಅಡೆತಡೆಗಳಿಲ್ಲದೆ ಮುಗಿಯುತ್ತದೆ ಎಂದು ಭಾವಿಸಿರಲಿಲ್ಲ ಎನ್ನುತ್ತಾರೆ ಚಿತ್ರದ ಸಹ ನಿರ್ಮಾಪಕಿಯಾಗಿರುವ ಬಟರ್ ಫ್ಲೈಯ ನಾಯಕಿ ಪಾರುಲ್ ಯಾದವ್.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT