ಸರ್ಕಾರಿ ಹಿ.ಪ್ರಾ. ಶಾಲೆ ಕಾಸರಗೋಡು: ಕೊಡುಗೆ ರಾಮಣ್ಣ ರೈ ಚಿತ್ರದ ಒಂದು ದೃಶ್ಯ
ಬೆಂಗಳೂರು: ನಿರ್ದೇಶಕ ರಿಷಬ್ ಶೆಟ್ಟಿ ತನ್ನ ಮುಂದಿನ ಚಿತ್ರ ’ಸರ್ಕಾರಿ ಹಿ.ಪ್ರಾ.. ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ’ ಚಿತ್ರದ ಆಡಿಯೋ ಲಾಂಚ್ ಗೆ ಸಕಲ ಸಿದ್ದತೆ ನಡೆಸಿದ್ದಾರೆ. ಶನಿವಾರ ಈ ಚಿತ್ರದ ಆಡಿಯೋ ಬಿಡುಗಡೆಯಾಗಿತ್ತಿದ್ದು ಹಿರಿಯ ನಟ ಅನಂತ್ ನಾಗ್ ಸೇರಿ ಅನೇಕ ಮಕ್ಕಳು ಇದರಲ್ಲಿ ನಟಿಸಿದ್ದಾರೆ. ಇನ್ನೂ ವಿಶೇಷವೆಂದರೆ ಕಿಚ್ಚ ಸುದೀಪ್ ಈ ಆಡಿಯೋ ಬಿಡುಗಡೆಗೊಳಿಸುತ್ತಿದ್ದಾರೆ.
ವಾಸುಕಿ ವೈಭವ್ ಸಂಯೋಜಿಸಿರುವ ಒಟ್ಟು ಒಂಭತ್ತು ಹಾಡುಗಳು ಚಿತ್ರದಲ್ಲಿದೆ. ಅಜನೀಶ್ ಲೋಕನಾಥ್ ಚಿತ್ರಕ್ಕೆ ಹಿನ್ನೆಲೆ ಸಂಗೀತ ಒದಗಿಸಿದ್ದು ಚಿತ್ರತಂಡ ಇದಾಗಲೇ ಮೂರು ಹಾಡುಗಳನ್ನು ಬಿಡುಗಡೆಗೊಳಿಸಿದ್ದು ಪ್ರತಿಯೊಂದು ಸಹ ಮಿಲಿಯನ್ ಸಂಖ್ಯೆಯ ಹಿಟ್ ಗಳೊಂದಿಗೆ ವೈರಲ್ ಆಗಿದೆ. ಇಂದಿನ ಕಾರ್ಯಕ್ರಮದಲ್ಲಿ ಚಿತ್ರದ ಮಿಕ್ಕ ಹಾಡುಗಳನ್ನು ಬಿಡುಗಡೆಗೊಳಿಸಲು ರಿಷಬ್ ಯೋಜನೆ ರೂಪಿಸಿದ್ದಾರೆ.
ರಂಜನ್, ಸಂಪತ್, ಪ್ರಮೋದ್ ಶೆಟ್ಟಿ, ಸಪ್ತ, ಮಹೇಂದ್ರ, ಸೋಹನ್ ಶೆಟ್ಟಿ ಇನ್ನೂ ಮೊದಲಾದವರು ನಟಿಸಿರುವ ಈ ಚಿತ್ರದ ಸೆನ್ಸಾರ್ ಮುಗಿದ ಬಳಿಕ ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಲು ಚಿತ್ರತಂಡ ನಿರ್ಧರಿಸಿದೆ. ಆದರೆ ಬಲ್ಲ ಮೂಲಗಳ ಪ್ರಕಾರ ಈ ವರ್ಷದ ಸ್ವಾತಂತ್ರ ದಿನಾಚರಣೆ ವೇಳೆಗೆ ಚಿತ್ರ ತೆರೆಗೆ ಬರುವ ನಿರೀಕ್ಷೆ ಇದೆ.