ಕವಿತಾ ಲಂಕೇಶ್ ಮತ್ತು ಚಿತ್ರದಲ್ಲಿ ನಟಿಸಿದ ಮಕ್ಕಳು 
ಸಿನಿಮಾ ಸುದ್ದಿ

ಸ್ಟಾರ್ ನಟರಿಗಿಂತ ಮಕ್ಕಳ ಜೊತೆ ಸಿನಿಮಾ ಮಾಡುವುದು ಸುಲಭ: ಕವಿತಾ ಲಂಕೇಶ್

ಕವಿತಾ ಲಂಕೇಶ್ ಅವರ 'ಸಮ್ಮರ್ ಹಾಲಿಡೇ' ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಇದರಲ್ಲಿ ಅವರ ಪುತ್ರಿ ಇಶಾ ...

ಕವಿತಾ ಲಂಕೇಶ್ ಅವರ 'ಸಮ್ಮರ್ ಹಾಲಿಡೇ' ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಇದರಲ್ಲಿ ಅವರ ಪುತ್ರಿ ಇಶಾ ಮತ್ತು ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್, ಸೋನಿಯಾ ಹೆಗ್ಡೆ ಮತ್ತು ಅನೀಶ್ ಅಂಗ್ರೆ ನಟಿಸಿದ್ದಾರೆ.

ದ್ವಿಭಾಷೆ ಚಿತ್ರ ಇದಾಗಿದ್ದು ಕವಿತಾ ಲಂಕೇಶ್ ಅವರು ಮೊದಲು ಇಂಗ್ಲಿಷ್ ಭಾಷೆಯಲ್ಲಿ ಮತ್ತು ನಂತರ ಕನ್ನಡ ಭಾಷೆಯ ಚಿತ್ರವನ್ನು ಬಿಡುಗಡೆ ಮಾಡಲು ಯೋಜಿಸುತ್ತಿದ್ದಾರೆ. ಬೇಸಿಗೆಯಲ್ಲಿ ಬಿಡುಗಡೆಯಾಗಬೇಕಿದ್ದ ಚಿತ್ರ ತಾತ್ವಿಕ ಕಾರಣಗಳಿಂದಾಗಿ ತಡವಾಯಿತು, ಆದರೆ ಈ ಚಿತ್ರವನ್ನು ಮಕ್ಕಳು ಯಾವಾಗ ಬೇಕಾದರೂ ನೋಡಬಹುದು ಎನ್ನುತ್ತಾರೆ ಕವಿತಾ ಲಂಕೇಶ್.

ಸಾಹಸ ಮಾಡಲು ಹೊರಟ ಮಕ್ಕಳು ನಿಗೂಢತೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಸಂರಕ್ಷಣೆ ಬಗ್ಗೆ ಸಂದೇಶದೊಂದಿಗೆ ಕಥೆ ಕೊನೆಯಾಗುತ್ತದೆ. ಸರಳವಾಗಿ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಕಥೆ ಸಾಗುತ್ತದೆ, ಬೋಧಿಸಲು ನಾನು ಈ ಚಿತ್ರದಲ್ಲಿ ಹೊರಟಿಲ್ಲ ಮತ್ತು ಎಲ್ಲಿ ಕೂಡ ಬೋರ್ ಹೊಡೆಸುವುದಿಲ್ಲ ಎನ್ನುತ್ತಾರೆ ಕವಿತಾ.

ಚಿತ್ರದಲ್ಲಿ ಪ್ರಕಾಶ್ ರಾಜ್ ಮತ್ತು ಸುಮನ್ ನಗರ್ ಕರ್ ಮುಖ್ಯ ಪಾತ್ರ ಮಾಡಿದ್ದಾರೆ. ನನ್ನ ಸೋದರಿ ಗೌರಿ ಲಂಕೇಶ್ ಕೂಡ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ ಎಂದರು. ಚಿತ್ರದಲ್ಲಿ ಎಲ್ಲಿಯೂ ಮಕ್ಕಳು ಒತ್ತಾಯವಾಗಿ, ಒತ್ತಡದಿಂದ ನಟಿಸಿದ್ದಿಲ್ಲ. ಅವರ ಮುಂದೆ ಕ್ಯಾಮರಾ ಇದೆ ಎಂದು ನಟಿಸುವಾಗ ನೆನಪು ಮಾಡಬೇಕಾಗಿತ್ತು. ಮಕ್ಕಳಲ್ಲಿ ಮುಗ್ಧತೆ ಮತ್ತು ಪರಿಶುದ್ಧ ಮನಸ್ಸು ಇರುವುದರಿಂದ ಅವರನ್ನು ನಿಭಾಯಿಸುವುದು ದೊಡ್ಡ ಸ್ಟಾರ್ ಗಳಿಗಿಂತ ಸುಲಭ. ಈ ಚಿತ್ರದಲ್ಲಿ ಮಕ್ಕಳಿಗೆ ಇದೊಂದು ಬೇಸಿಗೆ ರಜೆಯಂತೆ ಭಾಸವಾಯಿತು ಎಂದರು.

ರೋಹಿತ್ ಗಾಂಧಿ ಅವರ ಸಂಗೀತ, ಎಸಿ ಮಹೇಂದರ್ ಅವರ ಛಾಯಾಗ್ರಹಣ ಮತ್ತು ಜಾನಿ ಹರ್ಷ ಅವರ ಸಂಕಲನವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಅಸಹ್ಯ, ಅತಿರೇಕ'.. 'ನಿಮ್ಮನ್ನು ಈರೀತಿ ನೋಡಲು ಇಚ್ಛಿಸುವುದಿಲ್ಲ, BiggBoss ಶೋ ಬಿಟ್ಟು ಹೊರಬನ್ನಿ'; Kichcha Sudeepಗೆ ಪತ್ರ

'ಆಶ್ರಮಕ್ಕೆ ಬರಲು ಹಣ ಪಡೆದ ಕೊಹ್ಲಿ' ಆರೋಪ: ಉಲ್ಟಾ ಹೊಡೆದ Falahari Maharaj, ಕ್ಷಮೆಯಾಚನೆ! video

26 ಸೆಕೆಂಡ್ ನಲ್ಲೇ ಗ್ರೇಟ್ ಎಸ್ಕೇಪ್; ಮೃಗಾಲಯ ವೀಕ್ಷಣೆಗೆ ಬಂದ ಜೋಡಿ, ಗಂಡ ಬೈಕ್ ಪಾರ್ಕ್ ಮಾಡೋ ಗ್ಯಾಪಲ್ಲಿ 'ಲವರ್ ಜೊತೆ ಪತ್ನಿ ಪರಾರಿ'! Video ವೈರಲ್!