ಕುರುಕ್ಷೇತ್ರ ಸಿನಿಮಾ ಸ್ಟಿಲ್
ಬೆಂಗಳೂರು: ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಸಿನಿಮಾ ಡಬ್ಬಿಂಗ್ ಪೂರ್ಣಗೊಳಿಸಿರುವ ನಟ ದರ್ಶನ್ ಒಂದಿಷ್ಟು ಸಮಯ ವ್ಯರ್ಥ ಮಾಡದೇ, ತಮ್ಮ ಯಜಮಾನ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ.
ಈಗಾಗಲೇ ಸಿನಿಮಾದ ಸಂಭಾಷಣೆಯ ಭಾಗ ಪೂರ್ಣಗೊಂಡಿದೆ, ಹಾಡಿನ ಶೂಟಿಂಗ್ ಗಾಗಿ ದರ್ಶನ್ ತೆರಳಿದ್ದಾರೆ, ಚಿತ್ರದ ಪ್ರಮೋಷನ್ ಮತ್ತು ಬಿಡುಗಡೆಗಾಗಿ ಸಿದ್ಧತೆ ನಡೆಸಿಕೊಳ್ಳವಂತೆ ಚಿತ್ರತಂಡಕ್ಕೆ ದರ್ಶನ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಕೊನೆಯ ಹಂತದ ಚಿತ್ರೀಕರಣ ಮುಗಿದ ನಂತರ ಆಗಸ್ಟ್ 4 ರಂದು ಚಿತ್ರದ ಫೋಟೋಶೂಟ್ ಗಾಗಿ ಯೋಜಿಸಲಾಗಿದೆ, ಅದಾದ ನಂತರ ಚಿತ್ರದ ಪ್ರಮೋಷನ್ ಗಾಗಿ ತಂಡ ಪ್ಲಾನ್ ರೂಪಿಸಿದೆ, ಸೆಪ್ಟಂಬರ್ ಮೊದಲ ವಾರದಲ್ಲಿ ಸಿನಿಮಾ ಡಬ್ಬಿಂಗ್ ನಲ್ಲಿ ಪಾಲ್ಗೋಳ್ಳುವುದಾಗಿ ಹಾಗೂ ಬಾಕಿ ಉಳಿದಿರುವ ಹಾಡಿನ ಶೂಟಿಂಗ್ ನಲ್ಲಿ ಪಾಲ್ದೋಳ್ಳುವುದಾಗಿ ದರ್ಶನ್ ಹೇಳಿದ್ದಾರೆ,
ಯಜಮಾನ ಸಿನಿಮಾಗೂ ಮುಂಚೆಯೇ ಕುರುಕ್ಷೇತ್ರ ಬಿಡುಗಡೆಯಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ದರ್ಶನ್, ಇರಬಹುದು, ನಿಮಗೆ ಪ್ರಾಮಾಣಿಕವಾಗಿ ಹೇಳುತ್ತೇನೆ, ಮುನಿರತ್ನ ಕುರುಕ್ಷೇತ್ರದ ರಿಲೀಸ್ ಬಗ್ಗೆ ನನಗೆ ಸ್ಪಷ್ಟ ಮಾಹಿತಿಯಿಲ್ಲ, ಯಾವಾಗ ರಿಲೀಸ್ ಆಗಬಹುದು ಎಂದು ಹೇಳಲು ನನಗೆ ತಿಳಿದಿಲ್ಲ, ಹೀಗಾಗಿ ನಾನು ಯಜಮಾನ ನಿರ್ಮಾಪಕರಿಗೆ ಚಿತ್ರ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ,
ಚಿತ್ರ ಬಿಡುಗಡೆಗೆ ನನ್ನ ಕಡೆಯಿಂದ ಯಾವುದೇ ವಿಳಂಬವಿಲ್ಲ, 2017ರ ಸೆಪ್ಟಬರ್ ನಲ್ಲಿ ತಾರಕ್ ಬಿಡುಗಡೆಯಾಯಿತು, ಅದಾದ ನಂತರ ನನ್ನ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ, ನನ್ನಿಂದಾಗಿ ಬೇರೆ ನಿರ್ಮಾಪಕರ ಸಮಯ ವ್ಯರ್ಥ ಮಾಡಲು ನಾನು ಬಯಸುವುದಿಲ್ಲ ಹೀಗಾಗಿ ಸಿನಿಮಾ ಪ್ರಮೋಷನ್ ಗಾಗಿ ನಾನು ತೆರಳುತ್ತಿದ್ದೇನೆ, ಯಾವುದು ಮೊದಲು ಪೂರ್ಣಗೊಳ್ಳುವುದೋ ಆ ಸಿನಿಮಾ ರಿಲೀಸ್ ಆಗುತ್ತದೆ ಎಂದು ವಿವರಿಸಿದ್ದಾರೆ.
ಇನ್ನೂ ದರ್ಶನ್ ಪ್ರಜ್ವಲ್ ದೇವರಾಜ್ ನಟನೆಯ ಇನ್ಸ್ ಪೆಕ್ಟರ್ ವಿಕ್ರಮ್ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ, ಆ ಸಿನಿಮಾ ಆಗಸ್ಟ್ 6 ರಿಂದ ಶೂಟಿಂಗ್ ಆರಂಭಿಸಲಿದೆ. ಆಗಸ್ಟ್ 16 ರಿಂದ ಎಂ ಡಿ ಶ್ರೀಧರ್ ನಿರ್ದೇಶನದ ಒಡೆಯರ್ ಸಿನಿಮಾ ಪ್ರಾರಂಭವಾಗಲಿದೆ.
ಇದೆಲ್ಲದರ ಮದ್ಯೆ ಆಗಸ್ಟ್ ತಿಂಗಳ ಮದ್ಯದಲ್ಲಿ ದರ್ಶನ್ ಶಬರಿಮಲೆ ಗೆ ತೆರಳಲಿದ್ದಾರೆ, ಅಲ್ಲಿಂದ ವಾಪಸ್ ಬಂದ ನಂತರ ಬಾಕಿ ಉಳಿದಿರುವ ಯಜಮಾನ ಸಿನಿಮಾದ ಮೂರು ಹಾಡುಗಳ ಚಿತ್ರೀಕರಣದಲ್ಲಿ ಭಾಗವಹಿಸಿ, ನಂತರ ಒಡೆಯರ್ ಸೆಟ್ ಗೆ ತೆರಳುವುದಾಗಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics