ಚಿತ್ರದಲ್ಲಿ ರಾಗಿಣಿ ದ್ವಿವೇದಿ 
ಸಿನಿಮಾ ಸುದ್ದಿ

ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಈಗ 'ಟೆರರಿಸ್ಟ್'

ದ ಟೆರರಿಸ್ಟ್ ಚಿತ್ರದ ಶೂಟಿಂಗ್ ನ್ನು ನಿರ್ದೇಶಕ ಪಿ ಸಿ ಶೇಖರ್ ಪೂರ್ಣಗೊಳಿಸಿದ್ದಾರೆ. ರಾಗಿಣಿ ದ್ವಿವೇದಿ ...

ದ ಟೆರರಿಸ್ಟ್ ಚಿತ್ರದ ಶೂಟಿಂಗ್ ನ್ನು ನಿರ್ದೇಶಕ ಪಿ ಸಿ ಶೇಖರ್ ಪೂರ್ಣಗೊಳಿಸಿದ್ದಾರೆ. ರಾಗಿಣಿ ದ್ವಿವೇದಿ ನಟಿಸಿರುವ ಚಿತ್ರವಿದು. ರೆಬೆಲ್ ಸ್ಟಾರ್ ಅಂಬರೀಷ್ ಚಿತ್ರದ ಫಸ್ಟ್ ಲುಕ್ ನ್ನು ನಿನ್ನೆ ಬಿಡುಗಡೆ ಮಾಡಿದರು.

ರಾಗಿಣಿಯವರು ಈ ಹಿಂದಿನ ಚಿತ್ರಗಳಲ್ಲಿ ಕಾಣಿಸಿಕೊಂಡ ರೀತಿಗಿಂತ ಸಂಪೂರ್ಣ ವಿಭಿನ್ನವಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮುಸ್ಲಿಂ ಹುಡುಗಿ ರೇಷ್ಮಾ ಮತ್ತವಳ ಕುಟುಂಬದವರ ಬಗೆಗಿನ ಕಥೆ ಇದಾಗಿದ್ದು ಭಯೋತ್ಪಾದನೆ ಬಗ್ಗೆ ಇಲ್ಲಿ ಹೇಳಲಾಗಿದೆ. ಭಯೋತ್ಪಾದನೆಯಲ್ಲಿ ನೇರವಾಗಿ ಭಾಗಿಯಾದವರು ಮತ್ತು ಅದರಿಂದ ಪ್ರಭಾವಕ್ಕೊಳಗಾದವರು ಎಂದು ಎರಡು ಭಾಗಗಳಿವೆ. ಎರಡನೇ ಭಾಗದವರು ಪರಿಸ್ಥಿತಿಗೆ ಸಿಕ್ಕಿ ಬಲಿಯಾಗುತ್ತಾರೆ. ಚಿತ್ರದುದ್ದಕ್ಕೂ ರಾಗಿಣಿ ಇರಲಿದ್ದು ಚಿತ್ರಕ್ಕೆ ಸಾಕಷ್ಟು ಪೂರ್ವ ತಯಾರಿ ನಡೆಸಲಾಗಿದೆ ಎಂದು ನಿರ್ದೇಶಕ ಪಿ ಸಿ ಶೇಖರ್ ಹೇಳಿದರು.

ಭಯೋತ್ಪಾದನೆ ವಿಷಯ ಬಂದಾಗ ಸಮಾಜದಲ್ಲಿ ಮಹಿಳೆಯರ ಮೇಲೆ ಅದು ಹೆಚ್ಚು ಪರಿಣಾಮ ಬೀರುತ್ತದೆ. ಅವರು ಸಾಕಷ್ಟು ಕಷ್ಟ ಅನುಭವಿಸುತ್ತಾರೆ. ಪಾತ್ರಕ್ಕೆ ರಾಗಿಣಿಯವರು ಉತ್ತಮ ಅನಿಸಿ ಅವರನ್ನು ಆಯ್ಕೆ ಮಾಡಿಕೊಂಡೆ ಎನ್ನುತ್ತಾರೆ ಶೇಖರ್.

ಚಿತ್ರಕ್ಕೆ ಎಸ್ ಪ್ರದೀಪ್ ವರ್ಮ ಅವರ ಸಂಗೀತ, ಮುರಳಿ ಕೃಷ್ಣ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್: ಸೋಮವಾರ ಸಂಜೆ ಪ್ರಮಾಣವಚನ ಸಾಧ್ಯತೆ, 18 ಸಚಿವರ ಸೇರ್ಪಡೆ ನಿರೀಕ್ಷೆ..!

ಅಂತ್ಯದತ್ತ ಸಾಗಿದ ಇಸ್ರೇಲ್-ಹಮಾಸ್ ಯುದ್ಧ: 14 ದಿನಗಳಲ್ಲಿ ಶಸ್ತ್ರಾಸ್ತ್ರ ಹಸ್ತಾಂತರಕ್ಕೆ ಹಮಾಸ್ ಒಪ್ಪಿಗೆ, ಶಾಂತಿ ಒಪ್ಪಂದ ಘೋಷಿಸಿದ ಟ್ರಂಪ್..!

ಸ್ವಂತ ವರ್ಚಸ್ಸಿನಿಂದ ಗೆದ್ದಿದ್ದೇವೆಂದು ಬೀಗುವವರು, ನೆಹರೂ ಕುಟುಂಬದ ಕುಡಿಯ ಎದುರು ಕೈ ಕಟ್ಟಿ ನಿಂತಿದ್ದಾರೆ..!

ಕಾವೇರಿ ವಿವಾದ: 'ಕರ್ನಾಟಕ ಬಂದ್' ಬಗ್ಗೆ ಚರ್ಚಿಸಲು ನಾಳೆ ಬೆಂಗಳೂರಿನಲ್ಲಿ ಕನ್ನಡ ಪರ ಸಂಘಟನೆಗಳ ಸಭೆ!

ಜಂತರ್ ಮಂತರ್ ಪ್ರತಿಭಟನೆ ವೇಳೆ ಪ್ರಧಾನಿ ಮೋದಿ ಕುರಿತು ಅವಹೇಳನಕಾರಿ ಹೇಳಿಕೆ: ನೋಯ್ಡಾದ ಮಹಿಳೆ ವಿರುದ್ಧ FIR ದಾಖಲು!