ಶಿವರಾಜ್ ಕುಮಾರ್ ಅವರ ಮೊದಲ ವೆಬ್ ಸಿರೀಸ್ ವಿದೇಶದಲ್ಲಿ ಶೂಟಿಂಗ್
ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ನಟನೆಯ ಜೊತೆಗೆ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ತಮ್ಮ ಪುತ್ರಿ ನಿವೇದಿತಾ ಜೊತೆ ‘ಶ್ರೀಮುತ್ತು’ ಹೆಸರಿನ ನಿರ್ಮಾಣ ಸಂಸ್ಥೆ ...
ಬೆಂಗಳೂರು: ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ನಟನೆಯ ಜೊತೆಗೆ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ತಮ್ಮ ಪುತ್ರಿ ನಿವೇದಿತಾ ಜೊತೆ ‘ಶ್ರೀಮುತ್ತು’ ಹೆಸರಿನ ನಿರ್ಮಾಣ ಸಂಸ್ಥೆ ತೆರೆದಿರುವ ಶಿವರಾಜ್ಕುಮಾರ್, ಮೊದಲ ಹಂತವಾಗಿ ‘ಮಾನಸ ಸರೋವರ’ ಧಾರಾವಾಹಿ ನಿರ್ಮಾಣ ಮಾಡುತ್ತಿದ್ದಾರೆ.
ಇದೀಗ ಆ ಸಂಸ್ಥೆ ಮೂಲಕ ವೆಬ್ ಸರಣಿ ನಿರ್ಮಿಸಲು ಶಿವರಾಜ್ಕುಮಾರ್ ಮುಂದಾಗಿದ್ದಾರೆ. ಈ ಹಿಂದೆ ಆರ್.ಜೆ. ಪ್ರದೀಪ್ ಅವರ ‘ಸಖತ್ ಸ್ಟುಡಿಯೋ’ ಬ್ಯಾನರ್ನಲ್ಲಿ ‘ಲೂಸ್ ಕನೆಕ್ಷನ್’ ವೆಬ್ ಸಿರೀಸ್ ನಿರ್ಮಾಣವಾಗಿತ್ತು. ಯೂಟ್ಯೂಬ್ನಲ್ಲೂ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿತ್ತು.
ಅದನ್ನು ನೋಡಿರುವ ಶಿವಣ್ಣ ತಮ್ಮದೇ ಹೋಮ್ ಬ್ಯಾನರ್ ನಲ್ಲಿ ವೆಬ್ ಸರಣಿ ಮಾಡಲು ಮುಂದಾಗಿದ್ದಾರೆ. ವಿದೇಶದಲ್ಲಿಯೇ ಬಹುತೇಕ ಚಿತ್ರೀಕರಣ ನಡೆಯಲಿದೆ. ಈಗಾಗಲೇ ಲೊಕೇಷನ್ ಸಹ ಆಯ್ಕೆ ಮಾಡಿಕೊಳ್ಳಲಾಗಿದ್ದು, ಧಾರಾವಾಹಿ, ಸಿನಿಮಾ ಹಾಗೂ ನಿರೂಪಣೆಯಲ್ಲಿ ತೊಡಗಿಸಿಕೊಂಡಿರುವ ಹಲುವು ಕಲಾವಿದರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.