ಬೀರ್‌ಬಲ್ ಟ್ರಯಾಲಜಿ 
ಸಿನಿಮಾ ಸುದ್ದಿ

ಹಲವು ಮೊದಲುಗಳನ್ನು ಸೃಷ್ಟಿಸಲಿರುವ 'ಬೀರ್‌ಬಲ್ ಟ್ರಯಾಲಜಿ'

ಶ್ರೀನಿವಾಸ ಕಲ್ಯಾಣ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದ್ದ ನಿರ್ದೇಶಕ, ನಟ ಎಂಜಿ ಶ್ರೀನಿವಾಸ್ ಇದೀಗ ಬೀರ್‌ಬಲ್ ಟ್ರಯಾಲಜಿ ಚಿತ್ರದ ಮೂಲಕ ಹಲವು...

ಶ್ರೀನಿವಾಸ ಕಲ್ಯಾಣ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದ್ದ ನಿರ್ದೇಶಕ, ನಟ ಎಂಜಿ ಶ್ರೀನಿವಾಸ್ ಇದೀಗ ಬೀರ್‌ಬಲ್ ಟ್ರಯಾಲಜಿ ಚಿತ್ರದ ಮೂಲಕ ಹಲವು ಮೊದಲುಗಳನ್ನು ಸೃಷ್ಟಿಸಲಿದ್ದಾರೆ. 
ಶ್ರೀನಿವಾಸ ಕಲ್ಯಾಣ ಚಿತ್ರ ರೊಮ್ಯಾಂಟಿಕ್-ಕಾಮಿಡಿ ಚಿತ್ರವಾಗಿತ್ತು. ಇದೀಗ ಬೀರ್‌ಬಲ್ ಒಂದೇ ಟೈಟಲ್ ಇಟ್ಟುಕೊಂಡು ಆ ಚಿತ್ರದ ಮೂರು ಸೀಕ್ವೆಲ್ ಗಳನ್ನು ತೆರೆಯ ಮೇಲೆ ತರಲು ಸಜ್ಜಾಗಿದ್ದಾರೆ. ಬೀರ್‌ಬಲ್ ಟ್ರಯಾಲಜಿಯ ಮೊದಲ ಹಂತದ ಕೇಸ್-1 ಫೈಂಡಿಂಗ್ ವಜ್ರಮುನಿ ಚಿತ್ರದ ಮೊದಲ ಹಂತದ ಚಿತ್ರೀಕರಣವನ್ನು ಮೈಸೂರಿನಲ್ಲಿ ಮುಗಿಸಿದ್ದಾರೆ. 
ಬೀರ್‌ಬಲ್ ಟ್ರಯಾಲಜಿಯಲ್ಲಿ ಮೊದಲ ಭಾಗ 'ಫೈಂಡಿಂಗ್ ವಜ್ರಮುನಿ', ಎರಡನೇ ಭಾಗದಲ್ಲಿ 'ಅವ್ರನ್ ಬಿಟ್ಟು ಇವ್ರನ್ ಬಿಟ್ಟು ಅವರ್ಯಾರು' ಮೂರನೇ ಭಾಗಕ್ಕೆ 'ತುರೆಮಣೆ' ಎಂದು ಸಬ್ ಟೈಟಲ್ ಇಡಲಾಗಿದೆ. ಈ ಚಿತ್ರದಲ್ಲಿ ಶ್ರೀನಿವಾಸ್ ಲಾಯರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. 
ಈ ಚಿತ್ರಕ್ಕಾಗಿ ಶ್ರೀನಿವಾಸ್ ಆತ್ಯಾಧುನಿಕ ತಂತ್ರಜ್ಞಾನದ ಕ್ಯಾಮೆರಾವನ್ನು ಬಳಸುತ್ತಿದ್ದಾರೆ. ಇನ್ನು ಚಿತ್ರಕ್ಕೆ ಬಾಲಿವುಡ್ ಸಂಗೀತ ನಿರ್ದೇಶಕ ಕಾಲಾಚರಣ್ ಸಂಗೀತ ಸಂಯೋಜಿಸುತ್ತಿದ್ದಾರೆ. ಜಾನ್ ಸೀನ ಚಿತ್ರಕ್ಕೆ ಬಂಡವಾಳ ಹೂಡಿರುವ ಟಿ ಆರ್ ಚಂದ್ರಶೇಖರ್ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಅಡಿಯಲ್ಲಿ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?