ರಜನಿಯ ಕಾಲಾ ಚಿತ್ರದಲ್ಲಿ ನಟಿಸಿದ ’ಮಣಿ'ಗೆ 2 ಕೋಟಿ ರು.! 
ಸಿನಿಮಾ ಸುದ್ದಿ

ಬೀದಿ ನಾಯಿಗೆ ಬಂತು ಬಂಪರ್ ಬೆಲೆ: ರಜನಿಯ ಕಾಲಾ ಚಿತ್ರದಲ್ಲಿ ನಟಿಸಿದ ’ಮಣಿ'ಗೆ 2 ಕೋಟಿ ರು.!

Every dog has his own day ಎನ್ನುವ ಮಾತು ಇದೀಗ ನಿಜವಾಗಿದೆ ಎನಿಸುತ್ತಿದೆ. ಸೂಪರ್ ಸ್ಟಾರ್ ರಜನಿಕಾಂತ್ ಜತೆ ’ಕಾಲ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಬೀದಿ ನಾಯಿಗೆ ಇಂದು 2 ಕೋಟಿ ರೂ. ಬೆಲೆ ಬಂದಿದೆ!

ಚೆನ್ನೈ: Every dog has his own day ಎನ್ನುವ ಮಾತು ಇದೀಗ ನಿಜವಾಗಿದೆ ಎನಿಸುತ್ತಿದೆ.  ಸೂಪರ್ ಸ್ಟಾರ್ ರಜನಿಕಾಂತ್ ಜತೆ ’ಕಾಲ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಬೀದಿ ನಾಯಿಗೆ ಇಂದು 2 ಕೋಟಿ ರೂ. ಬೆಲೆ ಬಂದಿದೆ!
’ಮಣಿ’ ಹೆಸರಿನ ಈ ಬೀದಿ ನಾಯಿಗೆ ಅದರ  ಮಾಲಿಕ ಸೈಮನ್ ವಿಶೇಷ ತರಬೇತಿ ನೀಡಿದ್ದ ಸಂಬಂಧ ವೀಡಿಯೋ ಇದೀಗ ಲಭ್ಯವಾಗಿದೆ. ಎಕ್ಸ್ ಪ್ರೆಸ್ ಈ ವೀಡಿಯೋವನ್ನು ಪ್ರಕಟಿಸಿದ್ದು ಇದರಲ್ಲಿ ಚಿತ್ರ ನಿರ್ದೇಶಕ ಪ.ರಂಜಿತ್ ಮಣಿಯನ್ನು ಈ ಪಾತ್ರಕ್ಕೆ ಅಂತಿಮ ಗೊಳಿಸುವ ಮುನ್ನ ಸುಮಾರು 30 ಬೀದಿನಾಯಿಗಳ ಆಡಿಷನ್ ನಡೆಸಿದ್ದಾಗಿ ಹೇಳಿಕೊಂಡಿದ್ದಾರೆ.
"ಈ ನಾಯಿಯನ್ನು ಕಾಲಾ ಚಿತ್ರದ ಸೆಟ್ ನಲ್ಲಿ ಎಲ್ಲರೂ ’ಬಿಸ್ಕೆಟ್ ಮಣಿ’ ಎಂದೇ ಕರೆಯುತ್ತಿದ್ದರು. ಮಣಿ ತಲೈವ ರಜನಿಕಾಂತ್ ನೀಡುತ್ತಿದ್ದ ಬಿಸ್ಕೆಟ್ ಗಳಿಗೆ ಅದೆಷ್ಟು ಒಗ್ಗಿ ಹೋಗಿದ್ದ!" ಮಣಿಯ ತರಬೇತುದಾರ ಸೈಮನ್ ಹೇಳಿದ್ದಾರೆ.
ಸೈಮನ್ ಗೆ ಮಣಿಯನ್ನು ಮಾರಾಟ ಮಾಡುವುದಕ್ಕೆ ಇಷ್ಟವಿಲ್ಲ "ಮಣಿ ಬೀದಿಯಲ್ಲಿ ಸಿಕ್ಕಾಗ ನಾಯಿ ಅವರನ್ನು ಕಂಡು ಹೆದರಿತ್ತು, ಕಚ್ಚಲು ಸಹ ಮುಂದಾಗಿತ್ತು. ಆದರೆ ಈಗ ನನಗೆ ಒಳ್ಳೆಯ ಸ್ನೇಹಿತನಾಗಿದ್ದಾನೆ. ಮಣಿ ನನ್ನ ಕುಟುಂಬ ಸದಸ್ಯನಂತಿದ್ದಾನೆ.ಹಣ ನನಗೆ ಮುಖ್ಯವಲ್ಲ. ನಾನು ಬೆಳಿಗ್ಗೆ ಎದ್ದ ತಕ್ಷಣ ಮಣಿಯ ಮುಖ ನೊಡುತ್ತೇನೆ. ಹೀಗಿರಲು ನಾನು ಅವನನ್ನು ಬಿಟ್ಟಿರುವುದಾದರೂ ಹೇಗೆ?" ಸೈಮನ್ ಹೇಳಿದ್ದಾರೆ.
ರಜನಿಯ ಕಾಲ ಮಣಿಯ ಜೀವನದಲ್ಲಿ ಪ್ರಮುಖ ತಿರುವನ್ನು ತಂದಿದೆ.
ಕಬಾಲಿ ಬಳಿಕ ರಜನಿಕಾಂತ್ ಅಭಿನಯದ ಮಹತ್ವದ ಚಿತ್ರ ಕಾಲ. ಜೂನ್ 7ರಂದು ದೇಶದಾದ್ಯಂತ ಈ ಚಿತ್ರ ತೆರೆಕಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

Mysuru Rain: ಸಿಡಿಲು ಬಡಿದು ಬೆಂಗಳೂರಿನ ಟೆಕ್ಕಿ ಸಾವು

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

SCROLL FOR NEXT