ಮೊದಲ 'ಬಾಂಡ್ ಗರ್ಲ್' ಯುನೈಸ್ ಗೇಸನ್ ನಿಧನ
ಹೆಸರಾಂತ ಹಾಲಿವುಡ್ ನಟಿ, ಪ್ರಥಮ ’ಬಾಂಡ್ ಗರ್ಲ್’ ಯುನೈಸ್ ಗೇಸನ್ ಜೂನ್ 8ರಂದು ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.
ವಾಷಿಂಗ್ ಟನ್: ಹೆಸರಾಂತ ಹಾಲಿವುಡ್ ನಟಿ, ಪ್ರಥಮ ’ಬಾಂಡ್ ಗರ್ಲ್’ ಯುನೈಸ್ ಗೇಸನ್ ಜೂನ್ 8ರಂದು ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.
1962ರಲ್ಲಿ ತೆರೆಕಂಡ "ಜೇಮ್ಸ್ ಬಾಂಡ್"ಫ್ರ್ಯಾಂಚೈಸ್ ಸ್ಟಾರ್ಟರ್ "ಡಾ ನೋ" ನಲ್ಲಿ ಸೀನ್ ಕಾನರಿ ಜತೆಗೆ ’ಬಾಂಡ್ ಗರ್ಲ್’ ಆಗಿ ಕಾಣಿಸಿಕೊಂಡಿದ್ದ ಗೇಸನ್ ನಿಧನರಾಗಿದ್ದಾರೆಂದು ವೆರೈಟಿ ವರದಿ ಮಾಡಿದೆ.
ಜೇಮ್ಸ್ ಬಾಂಡ್ ಚಲನಚಿತ್ರ ನಿರ್ಮಾಪಕ ಮೈಕೆಲ್ ಜಿ. ವಿಲ್ಸನ್ ಮತ್ತು ಬಾರ್ಬರಾ ಬ್ರೊಕೊ ಜೇಮ್ಸ್ ಬಾಂಡ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಸಂಬಂಧ ಪೋಸ್ಟ್ ಮಾಡಿದ್ದಾರೆ.
'ಡಾ ನೋ' ಮತ್ತು 'ಫ್ರಮ್ ರಷ್ಯಾ ವಿತ್ ಲವ್’ ನಲ್ಲಿ ಸೀನ್ ಕಾನರಿ ಜತೆ ಕಾಣಿಸಿಕೊಂಡಿದ್ದ ಮೊಟ್ಟಮೊದಲ 'ಬಾಂಡ್ ಗರ್ಲ್' ಯುನೈಸ್ ಗೇಸನ್ ವಿಧಿವಶರಾಗಿದ್ದಾರೆ ಎಂದು ತಿಳಿಸಲು ನಾವು ವಿಷಾದಿಸುತ್ತೇವೆ’ ಅವರು ಟ್ವೀಟ್ ಮಾಡಿದ್ದಾರೆ.
ಗೇಸನ್ ಬಾಂಡ್ ಸರಣಿಯ ಎರಡು ಚಿತ್ರಗಳಲ್ಲಿ ಖಾಣಿಸಿಕೊಂಡ ಏಕೈಕ ಬಾಂಡ್ ಗರ್ಲ್ ಆಗಿದ್ದರೆನ್ನುವುದು ವಿಶೇಷ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.