ನನ್ನ ’ಬೋಲ್ಡ್’ ಇಮೇಜ್ ಕಾರಣ ಕಮರ್ಷಿಯಲ್ ಚಿತ್ರಗಳಲ್ಲಿ ನನಗೆ ಅವಕಾಶ ಸಿಗುತ್ತಿಲ್ಲ: ಸುಕೃತಾ ವಾಗ್ಲೆ 
ಸಿನಿಮಾ ಸುದ್ದಿ

ನನ್ನ 'ಬೋಲ್ಡ್' ಇಮೇಜ್ ನಿಂದಾಗಿ ಕಮರ್ಷಿಯಲ್ ಚಿತ್ರಗಳಲ್ಲಿ ಅವಕಾಶ ಸಿಗುತ್ತಿಲ್ಲ: ಸುಕೃತಾ ವಾಗ್ಲೆ

ನಟಿ ಸುಕೃಅತಾ ವಾಗ್ಲೆ ತಾನು ವೈವಿದ್ಯಮಯ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ

ಬೆಂಗಳೂರು: ನಟಿ ಸುಕೃಅತಾ ವಾಗ್ಲೆ ತಾನು ವೈವಿದ್ಯಮಯ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ. "ಸ್ಯಾಂಡಲ್ ವುಡ್ ನಂತಹ ಉದ್ಯಮದಲ್ಲಿ ಅಥವಾ ಯಾವುದೇ ಭಾಷೆಯ ಚಿತ್ರರಂಗದಲ್ಲಿ ನಾಯಕಿಯರು ತಮ್ಮ ವೈವಿಧ್ಯತೆಯನ್ನು  ತೋರಿಸುವ, ನಾಯಕಿಯನ್ನೇ ಕೇಂದ್ರವಾಗುಳ್ಳ ಪಾತ್ರಗಳು ಸಿಗುವುದು ಬಲು ಅಪರೂಪ" ಎಂದಿದ್ದಾರೆ
ಆಕೆಯ ಹೊಸ ಚಿತ್ರ ಮೇಘ ಅಲಿಯಾಸ್ ಮ್ಯಾಗಿ’ ವಿಶಾಲ್ ಪುಟ್ಟಣ್ಣ ನಿರ್ದೇಶನದಲ್ಲಿ ಮೂಡಿ ಬಂದಿದ್ದು ಈ ವಾರ ತೆರೆ ಕಾಣಲಿದೆ. "ಈ ಚಿತ್ರದಲ್ಲಿ ನಾಯಕಿಯು ಖಳನಾಯಕಿಯ ಪಾತ್ರದಲ್ಲಿದ್ದು ಕನ್ನಡದಲಿ ಇಂತಹಾ ಕಥೆಗಳು ಅತ್ಯಂತ ಅಪರೂಪ. ಆಕೆ ಯ ದ್ವೇಷದ ಕಥೆಗಳನ್ನು ಈ ಚಿತ್ರ ಹೊಂದಿದ್ದು  ಇದು ನಾಯಕಿಯಾಗಿ ಬೇರೆಲ್ಲ ಚಿತ್ರಗಳಿಗಿಂತ ವಿಭಿನ್ನ ಪಾತ್ರ." ನಟಿ ಹೇಳಿದ್ದಾರೆ.
’ಜಟ್ಟ’ ಚಿತ್ರದಿಂದ ಸ್ಯಾಂಡಲ್ ವುಡ್ ಪ್ರವೇಶಿಸಿದ ನಟಿ ಸುಕೃತಾ ತಾನು ’ಬೋಲ್ಡ್’ ಪಾತ್ರಗಳಿಗೆ ಸರಿಯಾಗಿ ಫಿಟ್ ಆಗುತ್ತೇನೆಂದು ನಂಬುತ್ತಾರೆ."ಮೇಘ ಅಲಿಯಾಸ್ ಮ್ಯಾಗಿಯಲ್ಲಿ ನನ್ನ ಪಾತ್ರ ಖಂಡಿತವಾಗಿಯೂ ಮಹಿಳಾ ಪ್ರಧಾನವಾದ ಪಾತ್ರವಾಗಿದ್ದು ತನ್ನ ವೃತ್ತಿಜೀವನದಲ್ಲಿ ಒಮ್ಮೆ ಅಭಿನಯಿಸಬೇಕೆಂದು ಹಂಬಲಿಸಿದ್ದ ಪಾತ್ರವಾಗಿತ್ತು"
ವಿಶೇಷವೆಂದರೆ ಸುಕೃತಾ ಕಮರ್ಷಿಯಲ್ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. "ನನಗೆ ಕಮರ್ಷಿಯಲ್ ಚಿತ್ರಗಳಿಂದ ಹೆಚ್ಚು ಅವಕಾಶ ಸಿಕ್ಕಿಲ್ಲ, ಅಂತಹಾ ಚಿತ್ರ ನಿರ್ಮಾಪಕರು ನನ್ನ ಬಳಿ ಬರುವುದಕ್ಕೆ ಸಾಕಷ್ಟು ಯೋಚಿಸುತ್ತಾರೆ. ನಾನು ಅಂತಹಾ ಪಾತ್ರಗಳಿಗೆ ಸೂಟ್ ಆಗಲಾರೆ ಎನ್ನುವುದು ಅವರಿಗೆ ಗೊತ್ತು": ನನ್ನ ಪಾಲಿಗೆ ’ಹುಲ್ಲು ಎಂದಿಗೂ ಹಸಿರಾಗಿರುತ್ತದೆ’ ಎನ್ನುವಂತೆ ನಾನು ಯಾವಾಗಲೂ ವಿಶಿಷ್ಟ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ, ಅಥವಾ ಅಂತಹಾ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ನನಗೆ ಅವಕಾಶ ದೊರೆಯುತ್ತದೆ" ಸುಕೃತಾ ಹೇಳಿದ್ದಾರೆ.
ಮೇಘಾ ಅಲಿಯಾಸ್ ಮ್ಯಾಗಿ ಬಗ್ಗೆ ಹೇಳುವ ಸುಕೃತಾ "ನಾನು ನನ್ನ ಅಭಿನಯಕ್ಕಾಗಿ ವಿಮರ್ಶಕರಿಂದ ಮೆಚ್ಚುಗೆ ಗಳಿಸುತ್ತೇನೆ ಎನ್ನುವುದು ಸತ್ಯ, ಆದರೆ ಅಂತಿಮವಾಗಿ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಗೆಲುವು ಕಾಣುವುದೆ ಎಲ್ಲವೆ ಎನ್ನುವುದರ ಮೇಲೆ ಅವಲಂಬಿತವಾಗಿದೆ" ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT