ಒಂದಲ್ಲ ಎರಡಲ್ಲ ಫರ್ಸ್ಟ್ ಲುಕ್ 
ಸಿನಿಮಾ ಸುದ್ದಿ

'ಒಂದಲ್ಲ ಎರಡಲ್ಲ' ಸಿನಿಮಾ ನೋಡಿದವರು ಮುಗ್ದರಾಗುತ್ತಾರೆ: ಸತ್ಯ ಪ್ರಕಾಶ್

ರಾಮಾ ರಾಮಾ ರೇ ಯಂತ ಸದಭಿರುಚಿಯ ಸಿನಿಮಾ ನೀಡಿದ್ದ ಡಾ. ಸತ್ಯಪ್ರಕಾಶ್ ಸದ್ದಿಲ್ಲದೇ ತಮ್ಮ 2ನೇ ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿದ್ದಾರೆ...

ಬೆಂಗಳೂರು: ರಾಮಾ ರಾಮಾ ರೇ ಯಂತ ಸದಭಿರುಚಿಯ ಸಿನಿಮಾ ನೀಡಿದ್ದ ಡಾ. ಸತ್ಯಪ್ರಕಾಶ್ ಸದ್ದಿಲ್ಲದೇ ತಮ್ಮ 2ನೇ ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. 
37 ದಿನಗಳಲ್ಲಿ  ಒಂದಲ್ಲ-ಎರಡಲ್ಲ ಸಿನಿಮಾ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು ಸೋಮವಾರ ಫರ್ಸ್ಟ್ ಲುಕ್ ರಿಲೀಸ್ ಆಗಲಿದೆ.ಹುಡುಗನೊಬ್ಬನಿಗೆ ಬಾಲ ಇರುವ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಜೊತೆಗೆ ಹಸುವಿನ ರೀತಿಯ ಕಿವಿ ಮತ್ತು ಎರಡು ಕೊಂಬು ಇದೆ.
ಈ ಸಿನಿಮಾವನ್ನು ಮುಗ್ದ ಜನರು ಹಾಗೂ ಪ್ರೇಮಿಗಳು ಇಷ್ಟ ಪಡುತ್ತಾರೆ, ಸಿನಿಮಾ ನೋಡಿದ ಮೇಲೆ ಅವರು ಕೂಡ ಮುಗ್ಧರಾಗುತ್ತಾರೆ,
ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ನೀಡದ ಸತ್ಯ ಪ್ರಕಾಶ್ ಸಿನಿಮಾ ಪೋಸ್ಟರ್ ಎಲ್ಲವನ್ನೂ ಹೇಳುತ್ತದೆ ಎಂದು ತಿಳಿಸಿದ್ದಾರೆ. ಡಿ ಸತ್ಯ ಪ್ರಕಾಶ್ ಅವರು ಸಹ ನಿರ್ಮಾಪಕರಾಗಿದ್ದು, ಹೆಬ್ಬುಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ನಿರ್ಮಾಣದಲ್ಲಿ ಸಿನಿಮಾ ತಯಾರಾಗಿದೆ. ಸ್ಮಿತಾ ಉಮಾಪತಿ ಅವರ ಡಿ.ಎನ್  ಸಿನಿಮಾ ಬ್ಯಾನರ್ ನಲ್ಲಿ ಸಿನಿಮಾ ಸಿದ್ದವಾಗಿದೆ.
ರಾಮಾ ರಾಮಾ ರೇ ಸಿನಿಮಾ ತಂತ್ರಜ್ಞರೇ ಈ ಸಿನಿಮಾಗೂ ಕೆಲಸ ಮಾಡಿದ್ದಾರೆ. ಹೊಸ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ, ರೋಹಿತ್ ಪಾಂಡವಪುರ ವಿಲ್ಲನ್ ಪಾತ್ರದಲ್ಲಿ ನಟಿಸಿದ್ದು, ಮುಂದಿನ 20 ದಿನಗಳಲ್ಲಿ ಮೊದಲ ಕಾಪಿ ತಯಾರಾಗಿ ಆಗಸ್ಟ್ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel