ವಿ. ಪ್ರಿಯಾ ಚೊಚ್ಚಲ ಕನ್ನಡ ಚಿತ್ರದಲ್ಲಿ ರಾಧಿಕಾ ಪಂಡಿತ್, ನಿರೂಪ್ ಭಂಡಾರಿ ಜೋಡಿ 
ಸಿನಿಮಾ ಸುದ್ದಿ

ವಿ. ಪ್ರಿಯಾ ಚೊಚ್ಚಲ ಕನ್ನಡ ಚಿತ್ರದಲ್ಲಿ ರಾಧಿಕಾ ಪಂಡಿತ್, ನಿರೂಪ್ ಭಂಡಾರಿ ಜೋಡಿ

ನಟಿ ರಾಧಿಕಾ ಪಂಡಿತ್ ಅಭಿಮಾನಿಗಳು ಅವರನ್ನು ಮತ್ತೆ ಬೆಳ್ಳಿ ಪರದೆಯ ಮೇಲೆ ಕಾಣಲು ಹಂಬಲಿಸುತ್ತಿದ್ದಾರೆ. ಅಂತಹಾ ಅಭಿಮಾನಿಗಳಿಗೆ ಇಲ್ಲೊಂದು ಪ್ರಮುಖ ಸುದ್ದಿ ಇದೆ.

ಬೆಂಗಳೂರು: ನಿರ್ದೇಶಕಿ ಪ್ರಿಯಾ  ಇದೀಗ ಬಹುಕಾಲದ ಬಳಿಕ ಕನ್ನಡ ಚಿತ್ರ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಕೆಲ ಸಮಯ ಸಂಕಲನ ಕಾರ್ಯದಲ್ಲಿ ತೊಡಗಿದ್ದ ಇವರಿಗೆ ತಾವು ತಯಾರಿಸಬೇಕಾದ ಚಿತ್ರದ ಭಾಗಗಳ ಸ್ಪಷ್ಟ ಕಲ್ಪನೆ ಮೂಡಿದೆಯಂತೆ.
ನಟಿ ರಾಧಿಕಾ ಪಂಡಿತ್ ಅಭಿಮಾನಿಗಳು ಅವರನ್ನು ಮತ್ತೆ ಬೆಳ್ಳಿ ಪರದೆಯ ಮೇಲೆ ಕಾಣಲು ಹಂಬಲಿಸುತ್ತಿದ್ದಾರೆ. ಅಂತಹಾ ಅಭಿಮಾನಿಗಳಿಗೆ ಇಲ್ಲೊಂದು ಪ್ರಮುಖ ಸುದ್ದಿ ಇದೆ. ರಾಕ್ ಲೈನ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ 2017ರಲ್ಲಿ ಪ್ರಾರಂಭವಾಗಿದ್ದ ಚಿತ್ರದ ಚಿತ್ರೀಕರಣ ಇದೀಗ ಅಂತಿಮ ಹಂತ ತಲುಪಿದೆ. ಚಿತ್ರತಂಡ ಬೆಂಗಲೂರಿನಲ್ಲಿದ್ದು ಅಂತಿಮ ಘಟ್ಟದ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ.
ನಟಿ ರಾಧಿಕಾ ಪಂಡಿತ್ ವಿವಾಹದ ಬಳಿಕ ಮೊದಲ ಬಾರಿಗೆ ನಟಿಸುತ್ತಿರುವ ಈ ಚಿತ್ರಕ್ಕೆ ಇನ್ನೂ ಹೆಸರನ್ನಿಟ್ಟಿಲ್ಲ. ವಿ. ಪ್ರಿಯಾ ನಿರ್ದೇಶನದ ಚೊಚ್ಚಲ ಕನ್ನಡ ಚಿತ್ರ ಇದಾಗಿದ್ದು ನಿರೂಪ್ ಭಂಡಾರಿ ರಾಧಿಕಾಗೆ ಜೋಡಿಯಾಗಿ  ಕಾಣಿಸಿಕೊಳ್ಳಲಿದ್ದಾರೆ. "ನಿರೂಪ್ ಭಂಡಾರಿ ಇಂದಿನಿಂದ ಸೆಟ್ ನಲ್ಲಿ ಇರಲಿದ್ದು ರಾಧಿಕಾ ಮುಂದಿನ ವಾರ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ" ಪ್ರಿಯಾ ಹೇಳಿದ್ದಾರೆ.
ಚಿತ್ರೀಕರಣ ಬಹಳ ವಿಳಂಬವಾದದ್ದರ ಕುರಿತಂತೆ ಮಾತನಾಡಿದ ಪ್ರಿಯಾ ಇದೊಂದು ಯೋಜಿತ ಚಿತ್ರ ಎಂದಿದ್ದಾರೆ. "ಶೂಟಿಂಗ್ ಹೇಗೆ ನಡೆಯಬೇಕೆನ್ನುವುದನ್ನು ನಾನು ಯೋಜಿಸಿದ್ದೆ, ಕಾಲಾವಕಾಶ ಬೇಕಾಗಿತ್ತು. ಚಿತ್ರೀಕರಣದ ಎಂಭತ್ತು ಶೇಕಡಾ ಮುಗಿದ ಬಳಿಕ ನಾನು ಚಿತ್ರೀಕರಣ ಇನ್ನೆಷ್ಟು ಉಳಿದಿದೆ, ಯಾವ ದೃಶ್ಯ ಹೇಗೆ ಬಂದಿದೆ ತಿಳಿದುಕೊಳ್ಳಲು ನಾನು ಎಡಿಟಿಂಗ್ (ಸಂಕಲನ) ಕಾರ್ಯಕ್ಕೆ ತೊಡಗಿದೆ. ನಾವಿನ್ನು ಹಾಡಿನ ಚಿತ್ರೀಕರಣ ನಡೆಸಲಿದ್ದು ಅದು ಸಹ ಒಂದು ಹಾಡಿನ ಹೊರತಾಗಿ ಉಳಿದೆಲ್ಲವೂ ನಗರದಲ್ಲಿಯೇ ನಡೆಯಲಿದೆ." ಅವರು ಹೇಳಿದ್ದಾರೆ.
ಖ್ಯಾತ ಚಿತ್ರ ನಿರ್ದೇಶಕ ಮಣಿರತ್ನಂ ಅವರಲ್ಲಿ ಸಹಾಯಕ ನಿರ್ದೇಶಕಿಯಾಗಿ ಮೂರು ತಮಿಳು ಚಿತ್ರಗಳಲ್ಲಿ ಕೆಲಸ ಮಾಡಿರುವ ಪ್ರಿಯಾ ಕನ್ನಡ ಚಿತ್ರ ನಿರ್ದೇಶನಕ್ಕಾಗಿ ಆಯ್ದುಕೊಂಡಿದ್ದದ್ದು ಸಂಪೂರ್ಣ ಕೌಟುಂಬಿಕ ಕಥಾಹಂದರವಿರುವ ಚಿತ್ರಕಥೆಯನ್ನು.ಎನ್ನುವುದು ವಿಶೇಷ."ಇದೊಂದು ಅದ್ಭುತ ಅನುಭವ" ಎನ್ನುವ ಪ್ರಿಯಾ  "ಈ ಚಿತ್ರದ  ನೈಜ ಸೌಂದರ್ಯವಿರುವುದು ಇದರ ಟೀಂ ವರ್ಕ್ ನಲ್ಲಿ.ಒಳ್ಳೆಯ ಚಿತ್ರವನ್ನು ಹೊರತಂದಾಗ ಎಲ್ಲರ ಸಹಕಾರ ಅಗತ್ಯ. ಅದು ನಿರ್ಮಾಪಕರು, ನಟರು ಮತ್ತು ತಂತ್ರಜ್ಞರ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ವಿಶೇಷವಾಗಿ ಚಿತ್ರದ ಛಾಯಾಗ್ರಾಹಕಿ ಪ್ರೀತಾ (ಜಯರಾಮ್) ಅವರ ಹೆಸರನ್ನು ಹೇಳಬೇಕು. ಒಟ್ಟಾರೆ ಇದುವರೆಗೆ ನಡೆದ ಎಲ್ಲಾ ಪ್ರಕ್ರಿಯೆಯು ಒಂದು ಸುಂದರ ಅನುಭವವಾಗಿದೆ."
ಸಧ್ಯ ಎಲ್ಲಾ ಕಲಾವಿದರ ಡಬ್ಬಿಂಗ್ ಕಾರ್ಯ ನಡೆಸುತ್ತಿರುವ ಪ್ರಿಯಾ ಅನೂಪ್ ಭಂಡಾರಿ ಸಂಗೀತದ ಕುರಿತಂತೆ ಉತ್ಸಾಹ ತೋರಿದ್ದಾರೆ."ಇದೊಂದು ವಿಭಿನ್ನ ಶೈಲಿಯ ಆಲ್ಬಂ ಆಗಲಿದೆ.ಅನೂಪ್ ರಾಗಗಳಿಗೆ ತಾರುಣ್ಯದ ಮೆರುಗನ್ನು, ಸುಗಂಧವನ್ನು ಸೇರಿಸಿದ್ದಾರೆ. ವಿಜಯ್ ಪ್ರಕಾಶ್ ಗಾಯನದಲ್ಲಿ ಮೂಡಿಬರುವ  ಹಾಡನ್ನು ಕೇಳುವುದಕ್ಕೆ ನಾನು ಉತ್ಸಾಹದಲ್ಲಿದ್ದೇನೆ"  ಅವರು ಹೇಳಿದರು.
ಚಿತ್ರದ ಫಸ್ಟ್ ಲುಕ್ ಹೊರತರುವ ವೇಳೆಗೆ ಚಿತ್ರದ ಸಂಬಂಧ ಇನ್ನಷ್ಟು ಹೆಚ್ಚಿನ ಮಾಹಿತಿ ನೀಡುವುದಾಗಿ ಪ್ರಿಯಾ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!

ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಆದಾಯ ಹಂಚಿಕೆ: GST ಮಂಡಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ

ಸ್ಟಿಂಗ್‌ ಆಪರೇಷನ್‌ ಬಗ್ಗೆ ಬೇರೆಯವರು ಮಾತನಾಡುವ ಆಗಿಲ್ಲ ಎನ್ನಲು ನೀವೇನು ಸರ್ವಾಧಿಕಾರಿಯೇ ಪ್ರಿಯಾಂಕ್‌ ಖರ್ಗೆ..?

1 ವರ್ಷ ಗ್ಯಾರಂಟಿ ಯೋಜನೆಗಳ ನಿಲ್ಲಿಸಿ, ಹಣವನ್ನು ರೈತರಿಗೆ ನೀಡಿ: ರಾಜ್ಯ ಸರ್ಕಾರಕ್ಕೆ ದಿಂಗಾಲೇಶ್ವರ ಶ್ರೀಗಳ ಆಗ್ರಹ

ಬೆಂಗಳೂರು: ನಮ್ಮ ಮೆಟ್ರೋ ರೈಲಿನಲ್ಲಿ 18 ನಿಮಿಷದಲ್ಲಿ ಜೀವಂತ ಹೃದಯ ಸಾಗಾಟ!