ಬೆಂಗಳೂರು: ಕೆಲವು ದಿನಗಳ ನಂತರ ಶೂಟಿಂಗ್ ಸೆಟ್ ನಲ್ಲಿ ತಮಗಾದ ಭಯಾನಕ ಅನುಭವದ ಬಗ್ಗೆ ನಟಿ ಸೋನು ಪಾಟೀಲ್. ಹೇಳಿದ್ದಾರೆ.
ಜೂ.22 ರಂದು ಚಿತ್ರ ತೆರೆಕಾಣುತ್ತಿದ್ದು, ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರಂತೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯ ಕಳೆಯುವವರು ಈ ಸಿನಿಮಾ ನೋಡಲೇಬೇಕಂತೆ. ‘ಅನೇಕರು ಫೇಸ್ಬುಕ್ ಹಾಗೂ ವಾಟ್ಸ್ಆಪ್ಗಳಲ್ಲಿ ಸದಾ ಮುಳುಗಿರುತ್ತಾರೆ. ಅಂಥವರು ‘ಕೆಲವು ದಿನಗಳ ನಂತರ’ ಚಿತ್ರವನ್ನು ವೀಕ್ಷಿಸಲೇ ಬೇಕು. ಆನ್ಲೈನ್ಗೆ ಅಂಟಿಕೊಳ್ಳುವ ಬದಲು ಮತ್ತಾವ ರೀತಿಯಲ್ಲಿ ಸಮಯವನ್ನು ಸದ್ಬಳಕೆ ಮಾಡಿಕೊಳ್ಳಬಹುದು ಎಂಬುದನ್ನು ಹೇಳುತ್ತಿದ್ದೇವೆ’ ಎನ್ನುತ್ತಾರೆ.
ಕೆಲವು ದಿನಗಳ ನಂತರ ಹಾರರ್ ಚಿತ್ರ ವಾಗಿದೆ. ಅಚ್ಚರಿಯ ವಿಚಾರ ಏನೆಂದರೆ ಚಿತ್ರತಂಡಕ್ಕೆ ಶೂಟಿಂಗ್ ವೇಳೆ ಹಾರರ್ ಅನುಭವ ಆಗಿತ್ತಂತೆ. ‘ನನ್ನ ವೃತ್ತಿಜೀವನದಲ್ಲಿ ಇದು ಮೊದಲ ಹಾರರ್ ಚಿತ್ರ. ಚಿತ್ರದ ಬಹುತೇಕ ಶೂಟಿಂಗ್ ರಾತ್ರಿ ವೇಳೆಯೇ ನಡೆದಿತ್ತು. ಚಿತ್ರೀಕರಣ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ನಾನು ತಲೆ ತಿರುಗಿ ಬಿದ್ದೆ. ಕಣ್ಣು ಬಿಟ್ಟು ನೋಡಿದಾಗ ಆಸ್ಪತ್ರೆಯಲ್ಲಿದ್ದೆ. ಯಾಕೆ ಹೀಗಾಯಿತು ಎಂಬ ಪ್ರಶ್ನೆಗೆ ಈವರೆಗೂ ಉತ್ತರ ಸಿಕ್ಕಿಲ್ಲ. ಶುಭಾ ಪೂಂಜಾ, ಪವನ್, ಲೋಕೇಶ್ ಮತ್ತು ದ್ರಾವ್ಯಾ ಶೆಟ್ಟಿ ಮತ್ತಿತರರು ನಟಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos