ಬೆಂಗಳೂರು: ವರನಟ ಡಾ. ರಾಜ್ ಕುಮಾರ್ ವಂಶದ ಮತ್ತೊಂದು ಕುಡಿ ಸ್ಯಾಂಡಲ್ ವುಡ್ ಎಂಟ್ರಿಗೆ ಸಿದ್ಧವಾಗಿದೆ, ರಾಜ್ ಪುತ್ರ ಪೂರ್ಣಿಮಾ ಮತ್ತು ನಟ ರಾಮ್ ಕುಮಾರ್ ಅವರ ಪುತ್ರ ಧಿರೇನ್ ರಾಮ್ ತಮ್ಮ ಚಿತ್ರಕ್ಕಾಗಿ ಕಥೆ ಫೈನಲ್ ಮಾಡಿದ್ದಾರೆ.
ಸಿನಿಮಾ ಸಂಬಂಧಿತ ಎಲ್ಲಾ ಕೆಲಸಗಳ ಬಗ್ಗೆ ತರಬೇತಿ ಪಡೆದುಕೊಂಡಿದ್ದಾರೆ, ಮೊದಲಾರ್ಧದ ಸ್ಕ್ರಿಪ್ಟ್ ಸಿದ್ದವಾಗಿದೆ, ಉಳಿದ ಅರ್ಧ ಕಥೆಗಾಗಿ ನಾನು ಕಾಯುತ್ತಿದ್ದು ಸಿನಿಮಾ ಅನೌನ್ಸ್ ಮೆಂಟ್ ಗಾಗಿ ಕಾಯುತ್ತಿರುವುದಾಗಿ ಧೀರೇನ್ ತಿಳಿಸಿದ್ದಾರೆ. ಸೂಕ್ತ ಸಮಯದಲ್ಲಿ ನಿರ್ದೇಶಕರು ಮತ್ತು ನಿರ್ಮಾಪಕರ ಜೊತೆ ಪ್ರಕಟಿಸುವುದಾಗಿ ಹೇಳಿದ್ದಾರೆ.
ಸ್ಯಾಂಡಲ್ ವುಡ್ ಎಂಟ್ರಿಗೆ ಯಾವ ರೀತಿ ತಯಾರಾಗಿದ್ದೀರಾ ಎಂಬ ಪ್ರಶ್ನೆಗ ಉತ್ತರಿಸಿದ ಅವರು, ನಾನು ಯಾವುದೇ ಪಾತ್ರ ಮಾಡಿದರೂ ಅದನ ನನಗೆ ಹಿತಕರವಾಗಿರಬೇಕು, ಯಾವ ನಿರ್ದೇಶಕ ಅಥವಾ ನಿರ್ಮಾಪಕ ಸಿನಿಮಾ ಮಾಡುತ್ತಿದ್ದಾರೆ ಎಂಬುದು ಮುಖ್ಯವಲ್ಲ. ಪಾತ್ರವನ್ನು ನಾನು ಅರ್ಥ ಮಾಡಿಕೊಂಡು, ನನಗೆ ತೃಪ್ತಿ ಸಿಗಬೇಕು, ಈ ಮೊದಲು ನಾನು ಎರಡು ಮೂರು ಕಥೆ ಕೇಳಿ ಈ ಕಥೆಯಿಂದ ಪ್ರಭಾವಿತನವಾಗಿದ್ದೇನೆ ಎಂದು ಹೇಳಿದ್ದಾರೆ.
ಕಾಲೇಜ್ ವಿದ್ಯಾರ್ಥಿಯಾಗಿ ಸಿನಿಮಾ ಗೆ ಎಂಟ್ರಿ ನೀಡುವ ಸಾಮಾನ್ಯ ಪಾತ್ರ ನನಗೆ ಇಷ್ಟವಲ್ಲ, ಅದು ಕೆಟ್ಟದಲ್ಲ ಆದರೆ ನನದೆ ಅದರಲ್ಲಿ ಆಸಕ್ತಿಯಿಲ್ಲ, ಅದು ನನಗೆ ಬೋರಿಂಗ್ ಎನಿಸುತ್ತದೆ. ಚಾಲೆಂಜ್ ಆಗಿರುವ ಪಾತ್ರ ನನಗೆ ಬೇಕು. ಜೊತೆಗೆ ದೈಹಿಕ ಮತ್ತು ಮಾನಸಿಕವಾಗಿ ಅಧಿಕ ಕೆಲಸವಿರಬೇಕು, ನಾನು ಹೇಳುತ್ತಿರುವುದು ಸರಿ ಇರಬಹುದು ಅಥವಾ ತಪ್ಪು ಇರಬಹುದು, ನಾನು ಜವಾಬ್ದಾರಿ ತೆಗೆದುಕೊಂಡ ಮೇಲೆ, ಸಿನಿಮಾ ನನ್ನ ಮತ್ತು ಸಿನಿಮಾ ತಂಡಕ್ಕೆ ಉಪಯೋಗವಾಗಬೇಕು.
ತಾವು ಆರಿಸಿಕೊಂಡಿರುವ ಕಥೆಯ ಬಗ್ಗೆ ಧೀರೇನ್ ತನ್ನ ತಂದೆ ಹಾಗೂ ತನ್ನ ಸಂಬಂಧಿಗಳಾದ ಶಿವರಾಜ್ ಕುಮಾರ್ ಮತ್ತು ರಾಘಧೇಂದ್ರ ರಾಜ್ ಕುಮಾರ್ ಅವರ ಜೊತೆ ಚರ್ಚಿಸುತ್ತೇನೆ ಎಂದು ಹೇಳಿದ್ದಾರೆ.