ಬೆಂಗಳೂರು: ತಮ್ಮ ವೃತ್ತಿ ಜೀವನದಲ್ಲಿ ನಟ ಶಿವರಾಜ್ ಕುಮಾರ್ ಹಲವು ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈಗ ಎಸ್ ಆರ್ ಕೆ ಎಂಬ ಸಿನಿಮಾದಲ್ಲಿ ಶಿವಣ್ಣ ಮತ್ತೊಂದು ವಿಶಿಷ್ಟ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಎಸ್ ಆರ್ ಕೆಯಲ್ಲಿ ಸೆಂಚ್ಯುರಿ ಸ್ಟಾರ್ ನೃತ್ಯ ತರಬೇತುದಾರನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾವನ್ನು ಕಿರಣ್ ಕುಮಾರ್ ಸಿ.ಗೌಡ ನಿರ್ಮಾಣ ಮಾಡುತ್ತಿದ್ದಾರೆ. ಲಕ್ಕಿ ಗೋಪಾಲ್ ನಿರ್ದೇಶನ ಮಾಡುತ್ತಿದ್ದಾರೆ.
ಇದೇ ವೇಳೆ ಸಿನಿಮಾ ತಂಡ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ಮುಗಿಸಿದೆ, ಶಿವರಾಜ್ ಕುಮಾರ್ ಅವರ ಸತ್ಯ ಇನ್ ಲವ್ ಸಿನಿಮಾದಲ್ಲಿ ಸಾಹಸ ಸಂಯೋಜಿಸಿದ್ದ ಪೀಟರ್ ಹೆನ್ಸ್ ಮತ್ತೆ ಈ ಸಿನಿಮಾಗೆ ಸ್ಟಂಟ್ ನಿರ್ದೇಶಕರಾಗಿದ್ದಾರೆ. ನಟಸಾರ್ವಭೌಮದಲ್ಲೂ ಪುನೀತ್ ಗೆ ಪೀಟರ್ ಸ್ಟಂಟ್ ಮಾಸ್ಟರ್ ಆಗಿದ್ದಾರೆ.
ಸದ್ಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ, ಗಣೇಶ್ ಮತ್ತು ಜಾನಿ ಮಾಸ್ಟರ್ ಎಸ್ ಆರ್ ಕೆ ಡ್ಯಾನ್ಸ್ ಮಾಸ್ಟರ್ ಗಳಾಗಿದ್ದಾರೆ, ಏಪ್ರಿಲ್ ನಲ್ಲೇ ಪ್ರಾಜೆಕ್ಚ್ ಲಾಂಚ್ ಆಗಿದ್ದು ಶೀಘ್ರವೇ ಶೂಟಿಂಗ್ ಆರಂಭವಾಗಲಿದೆ.