ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಕಾಳಾ' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಕಬಾಲಿ ಚಿತ್ರದ ಶೈಲಿಯಲ್ಲೇ ಕಾಲಾ ಕೂಡ ದಕ್ಷಿಣ ಭಾರತ ಸಿನಿರಂಗದಲ್ಲಿ ಹೊಸ ಹವಾ ಸೃಷ್ಟಿಸಿದೆ.
ಕಳೆದ ಫೆಬ್ರವರಿ 28ರಂದೇ ಚಿತ್ರದ ಟೀಸರ್ ಬಿಡುಗಡೆಯಾಗ ಬೇಕಿತ್ತಾದರೂ ಕಂಚಿಮಠದ ಶ್ರೀಗಳಾದ ಜಯೇಂದ್ರ ಸರಸ್ವತಿ ಅವರು ಬ್ರಹ್ಮೈಕ್ಯರಾದ ಹಿನ್ನಲೆಯಲ್ಲಿ ಟೀಸರ್ ಬಿಡುಗಡೆಯನ್ನು ಚಿತ್ರತಂಡ ಮುಂದಕ್ಕೆ ಹಾಕಿತ್ತು. ಈ ಬಗ್ಗೆ ರಜನಿಕಾಂತ್ ಆಳಿಯ ಧನುಷ್ ಅವರೂ ಕೂಡ ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು. ಅಂತೆಯೇ ಮಾರ್ಚ್ 2ರಂದು ಟೀಸರ್ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು.
ಅದರಂತೆ ಯೂಟ್ಯೂಬ್ ನಲ್ಲಿ ಇಂದು ಕಾಳಾ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಬರೊಬ್ಬರಿ 12 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಚಿತ್ರದ ನಾಯಕ ರಜನಿ ಕಾಂತ್ ಬ್ಲಾಕ್ ಆ್ಯಂಡ್ ಬ್ಲಾಕ್ ಡ್ರೆಸ್ನಲ್ಲಿ ಮಿಂಚಿದ್ದು ಅಭಿಮಾನಿಗಳಿಗೆ ಥ್ರಿಲ್ ಕೊಡುವಂತ ಡೈಲಾಗ್ ಇದೆ. ನಾನಾ ಪಾಟೇಕರ್ ವಿಲನ್ ರೋಲ್ನಲ್ಲಿ ಕಾಣಿಸಿಕೊಂಡಿದ್ದು, ಕಬಾಲಿ ನಿದೇರ್ಶಕ ಪ.ರಂಜಿತ್ ಕಾಳಾ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಿದ್ದಾರೆ.
ರಜನಿಕಾಂತ್ ಅಳಿಯ ಧನುಷ್ ಅವರ ವುಂಡರ್ಬಾರ್ ಫಿಲ್ಮ್ನಡಿ ಈ ಚಿತ್ರ ನಿರ್ಮಾಣವಾಗಿದೆ ಎಂದು ತಿಳಿದುಬಂದಿದೆ.