ಸುಮನ್ ನಗರ್ ಕರ್ , ಒಳಚಿತ್ರದಲ್ಲಿ ಪ್ರದೀಪ್ ವರ್ಮ 
ಸಿನಿಮಾ ಸುದ್ದಿ

ಪ್ರದೀಪ್ ವರ್ಮರ ಮುಂದಿನ ಚಿತ್ರ ಬ್ರಾಹ್ಮಿಯಲ್ಲಿ ಇಬ್ಬರು ನಾಯಕಿಯರು

ಊರ್ವಿ ಚಿತ್ರದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ ಪ್ರದೀಪ್ ವರ್ಮಾ ತಮ್ಮ ಎರಡನೇ ಪ್ರಾಜೆಕ್ಟ್ ....

ಊರ್ವಿ ಚಿತ್ರದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ ಪ್ರದೀಪ್ ವರ್ಮಾ ತಮ್ಮ ಎರಡನೇ ಪ್ರಾಜೆಕ್ಟ್ ಆರಂಭಿಸುತ್ತಿದ್ದಾರೆ. ಬ್ರಾಹ್ಮಿ ಎಂದು ಚಿತ್ರಕ್ಕೆ ಹೆಸರಿಡಲಾಗಿದ್ದು ಮಹಿಳಾ ಪ್ರಧಾನ ಚಿತ್ರದಲ್ಲಿ ಇಬ್ಬರು ಹೀರೋಯಿನ್ ಗಳಿರುತ್ತಾರೆ. ಸಂಗೀತ ಪ್ರಧಾನ ಚಿತ್ರವಿದು.

ಸುಮನ್ ನಗರ್ ಕರ್ ಮುಖ್ಯ ಪಾತ್ರ ವಹಿಸಿದರೆ ಎರಡನೇ ಹೀರೋಯಿನ್ ಗಾಗಿ ಚಿತ್ರತಂಡ ಹುಡುಕಾಟ ನಡೆಸುತ್ತಿದೆ. ಸ್ಯಾಂಡಲ್ ವುಡ್ ನ ಬೆಳದಿಂಗಳ ಬಾಲೆ ಎಂದು ಹೆಸರಾಗಿರುವ ಸುಮನ್ ನಗರ್ ಕರ್ ಪ್ರಸ್ತುತ ಅಮೆರಿಕಾ, ಭಾರತದ ಮಧ್ಯೆ ಓಡಾಡಿಕೊಂಡು ಇದ್ದಾರೆ. ನಿಷ್ಕರ್ಷ ನಟಿಯಾಗಿರುವ ಸುಮನ್ ನಗರ್ ಕರ್ ತಮ್ಮ ಹೆಸರಿನಲ್ಲಿ ಪ್ರೊಡಕ್ಷನ್ ಹೌಸ್ ನ್ನು ಆರಂಭಿಸಿದ್ದು ಬಬ್ರು ಎಂಬ ಹೆಸರಿನ ಸಿನಿಮಾದೊಂದಿಗೆ ಕೆಲಸ ಆರಂಭಿಸಿದ್ದಾರೆ.

ಈ ಸಿನಿಮಾವಿಡೀ ಅಮೆರಿಕದಲ್ಲಿ ಶೂಟ್ ಮಾಡಲಾಗಿದ್ದು ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ತಮ್ಮ ಬ್ರಾಹ್ಮಿ  ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಪ್ರದೀಪ್ ವರ್ಮ, ಇಲ್ಲಿ 42 ವರ್ಷದ ಮಹಿಳೆ ಮತ್ತು 20 ವರ್ಷದ ಯುವತಿ ಸ್ವತಂತ್ರ ಜೀವನ ನಡೆಸುವುದರ ಕುರಿತು ಕಥೆಯಿರುತ್ತದೆ. ಇವರ ಸಂಬಂಧ ಗುರು-ಶಿಷ್ಯೆಯ ರೀತಿ ಇರುತ್ತದೆ. ಏಕಲವ್ಯ ಕಥೆಯ ರೀತಿ ಎನ್ನುತ್ತಾರೆ.

ಚಿತ್ರದ ಶೂಟಿಂಗ್ ಮೇ ತಿಂಗಳಲ್ಲಿ ಆರಂಭವಾಗಲಿದೆಯಂತೆ. ಮಂಗಳೂರು, ಕರ್ನಾಟಕ-ಗೋವಾ ಗಡಿಯಲ್ಲಿ ಚಿತ್ರೀಕರಣ ನಡೆಯಲಿದೆ. ಅಭಿಷೇಕ್ ಅಯ್ಯಂಗಾರ್ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಗುರುಪ್ರಸಾದ್ ನಾರ್ನಾಡ್ ಅವರ ಛಾಯಾಗ್ರಹಣವಿರಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!