ರಾಜರಥದಲ್ಲಿ 'ಮುಂದೆ ಬನ್ನಿ ಇನ್ನೂ ಮುಂದೆ ಬನ್ನಿ' ಹಾಡು!
1983 ರಲ್ಲಿ ಬೆಂಕಿಯಲ್ಲಿ ಅರಳಿದ ಹೂವು ಸಿನಿಮಾದಲ್ಲಿ ಕಮಲ ಹಾಸನ್ ಬಸ್ ಕಂಡಕ್ಚರ್ ಆಗಿ ನಟಿಸಿದ್ದ ಮುಂದೆ ಬನ್ನಿ ಇನ್ನೂ ಮುಂದೆ ಬನ್ನಿ ಹಾಡನ್ನು ರಾಜರಥ ಸಿನಿಮಾದಲ್ಲಿ ..
ಬೆಂಗಳೂರು: ಅನುಪ್ ಭಂಡಾರಿ ನಿರ್ದೇಶನದ ರಾಜರಥ ದ್ವಿಭಾಷಾ ಚಿತ್ರ ಇನ್ನೆರಡು ವಾರದಲ್ಲಿ ರಿಲೀಸ್ ಆಗಲಿದೆ. ಮಾರ್ಚ್ 23 ರಂದು ಸಿನಿಮಾ ಬಿಡುಗಡೆಯಾಗಲಿದ್ದು, ಆಡಿಯೋ ರಿಲೀಸ್ ಮಾಡಲಾಗಿದೆ.
1983 ರಲ್ಲಿ ಬೆಂಕಿಯಲ್ಲಿ ಅರಳಿದ ಹೂವು ಸಿನಿಮಾದಲ್ಲಿ ಕಮಲ ಹಾಸನ್ ಬಸ್ ಕಂಡಕ್ಚರ್ ಆಗಿ ನಟಿಸಿದ್ದ ಮುಂದೆ ಬನ್ನಿ ಇನ್ನೂ ಮುಂದೆ ಬನ್ನಿ ಹಾಡನ್ನು ರಾಜರಥ ಸಿನಿಮಾದಲ್ಲಿ ಅಳವಡಿಸಲಾಗಿದೆ,
ಹಾಡನ್ನು ರಿಕ್ರಿಯೇಷನ್ ಮಾಡಲಾಗಿದ್ದು, ಅನೂಪ್ ಭಂಡಾರಿ ಮತ್ತು ಆವಂತಿಕಾ ಶೆಟ್ಟಿ ನಟಿಸಿದ್ದಾರೆ, ಅನೂಪ್ ಭಂಡಾರಿಯೇ ಈ ಹಾಡಿಗೆ ಹಿನ್ನೆಲೆ ಗಾಯನ ನೀಡಿದ್ದು, ನಟ ಯಶ್ ಮಾರ್ಚ್ 5 ರಂದು ಆಡಿಯೋ ಬಿಡುಗಡೆ ಮಾಡಲಿದ್ದಾರೆ.
ಈ ಹಾಡನ್ನು ಏಕೆ ಆರಿಸಿಕೊಂಡೆ ಎಂಬ ಬಗ್ಗೆ ಅನೂಪ್ ಭಂಡಾರಿ ಹೆಚ್ಚಿನ ಮಾಹಿತಿ ನೀಡಲಿಲ್ಲ, ಮೂಲ ಹಾಡನ್ನು ಬಸ್ ನಲ್ಲಿ ಚಿತ್ರೀಕರಿಸಲಾಗಿತ್ತು, ನಮ್ಮ ಸಿನಿಮಾ ರಾಜರಥ ಬಸ್ ಕುರಿತದ್ದಾಗಿದೆ,ಆದರೆ ಈ ಹಾಡನ್ನು ಸಿನಿಮಾದಲ್ಲಿ ಅಳವಡಿಸಿಕೊಳ್ಳಲು ಬಹ ದೊಡ್ಡ ಕಾರಣವಿದೆ ಎಂದು ಹೇಳಿದ್ದಾರೆ,
ಈ ಹಾಡಿಗೆ ಜನಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ, ಬಾಲಿವುಡ್ ನ ಜಗ್ಗಾ ಜಾಸೂಸ್ ಸಿನಿಮಾದಲ್ಲಿ ಕೆಲಸ ಮಾಡಿದ್ದ ರಜತ್ ಪೊದಾರ್ ಈ ಸಿನಿಮಾಗೆ ವಿನ್ಯಾಸ ಮಾಡಿದ್ದಾರೆ,. ಕಲರ್ ಪುಲ್ ಡ್ರೆಸ್ ನೀತಾ ಶೆಟ್ಟಿ ಮಾಡಿದ್ದಾರೆ,
ರವಿಶಂಕರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಶೃತಿ ಹರಿಹರನ್ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.