ಸಂಗ್ರಹ ಚಿತ್ರ 
ಸಿನಿಮಾ ಸುದ್ದಿ

ಆಸ್ಕರ್ಸ್ ಪ್ರಶಸ್ತಿ ಪ್ರದಾನ ವೇಳೆ ಶ್ರೀದೇವಿ, ಶಶಿ ಕಪೂರ್ ಗೆ ಗೌರವ

ವಿಶ್ವ ಸಿನಿಮಾ ರಂಗ ಅತ್ಯುನ್ನತ ಪ್ರಶಸ್ತಿ ಆಸ್ಕರ್ಸ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ವೇಳೆ ಬಾಲಿವುಡ್ ನ ದಿವಂಗತ ನಟರಾದ ನಟ ಶಶಿಕಪೂರ್ ಮತ್ತು ನಟಿ ಶ್ರೀದೇವಿ ಅವರನ್ನು ನೆನಪಿಸಿಕೊಂಡು ಗೌರವ ಸಲ್ಲಿಕೆ ಮಾಡಲಾಯಿತು.

ಹಾಲಿವುಡ್: ವಿಶ್ವ ಸಿನಿಮಾ ರಂಗ ಅತ್ಯುನ್ನತ ಪ್ರಶಸ್ತಿ ಆಸ್ಕರ್ಸ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ವೇಳೆ ಬಾಲಿವುಡ್ ನ ದಿವಂಗತ ನಟರಾದ ನಟ ಶಶಿಕಪೂರ್ ಮತ್ತು ನಟಿ ಶ್ರೀದೇವಿ ಅವರನ್ನು ನೆನಪಿಸಿಕೊಂಡು ಗೌರವ ಸಲ್ಲಿಕೆ ಮಾಡಲಾಯಿತು.
ಹಾಲಿವುಡ್ ನ ಡಾಲ್ಬಿ ಥಿಯೇಟರ್ ನಲ್ಲಿ 2018ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದ್ದು, ವಿಶ್ವ ಚಿತ್ರರಂಗ ಖ್ಯಾತನಾಮ ನಟ ನಟಿಯರು, ನಿರ್ದೇಶಕರು ಹಾಗೂ ನಿರ್ಮಾಪಕರು ಮತ್ತು ತಂತ್ರಜ್ಞರು ಪಾಲ್ಗೊಂಡಿದ್ದು, ಇಂದು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಜಯಿಸಿದ ಸಿನಿಮಾ ರಂಗದ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. 
ವಿಶ್ವದ ಅತ್ಯಂತ ಪ್ರತಿಷ್ಠಿತ ಆಸ್ಕರ್ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಆರಂಭವಾಗಿದ್ದು, ಹಾಸ್ಯ ನಟ ಜಿಮ್ಮಿ ಕಿಮ್ಮೆಲ್ ನಿರೂಪಕರಾಗಿರುವ ಕಾರ್ಯಕ್ರಮಕ್ಕೆ ಬಾಲಿವುಡ್ ದಿಗ್ಗಜರು ಮೆರುಗು ನೀಡಿದ್ದಾರೆ. ಇದು 90ನೆ ಅಕಾಡಮಿ ಪ್ರಶಸ್ತಿ ಪ್ರದಾನ ಸಮಾರಂಭವಾಗಿದೆ.
ಇನ್ನು ಈ ಅತ್ಯುನ್ನತ ಸಮಾರಂಭದಲ್ಲಿ ಈ ವರ್ಷ ನಿಧನರಾದ ಗಣ್ಯ ತಾರೆಯರಿಗೆ ನಮನ ಸಲ್ಲಿಕೆ ಮಾಡಲಾಗಿದ್ದು, ಅಂತೆಯೇ ಇತ್ತೀಚೆಗೆ ನಮ್ಮನ್ನಗಲಿದ ಬಾಲಿವುಡ್ ನ ಶಶಿಕಪೂರ್ ಹಾಗೂ ನಟಿ ಶ್ರೀದೇವಿ ಅವರಿಗೆ ಗೌರವ ಸಲ್ಲಿಕೆ ಮಾಡಲಾಯಿತು. ನಟ ಶಶಿಕಪೂರ್ ಅವರು 2017 ಡಿಸೆಂಬರ್ ನಲ್ಲಿ ನಿಧನರಾದರೆ, ನಟಿ ಶ್ರೀದೇವಿ ಇದೇ ಫೆಬ್ರವರಿಯಲ್ಲಿ ದುಬೈನಲ್ಲಿ ನಿಧನರಾಗಿದ್ದರು. ತಮ್ಮ ಕುಟುಂಬದ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟಿ ಶ್ರೀದೇವಿ ಆಕಸ್ಮಿಕವಾಗಿ ಬಾತ್ ರೂಂ ಟಬ್ ನಲ್ಲಿ ಬಿದ್ದು ಸಾವನ್ನಪ್ಪಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!