ದೀಪ್ತಿ ಸಾತಿ-ಚಿರಂಜೀವಿ ಸರ್ಜಾ
ನಿಖಿಲ್ ಕುಮಾರ್ ಅಭಿನಯದ ಜಾಗ್ವರ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದ ದೀಪ್ತಿ ಸಾತಿ ಇದೀಗ ರಾಜ ಮಾರ್ತಾಂಡ ಚಿತ್ರದಲ್ಲಿ ಚಿರಂಜೀವಿ ಸರ್ಜಾಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.
ಟೈಸನ್ ಮತ್ತು ಕ್ರ್ಯಾಕ್ ಚಿತ್ರಗಳ ನಿರ್ದೇಶಕ ಕೆ ರಾಮ್ ನಾರಾಯಣ್ ಆ್ಯಕ್ಷನ್ ಕಟ್ ಹೇಳುತ್ತಿರುವ ರಾಜಮಾರ್ತಾಂಡ ಚಿತ್ರದಲ್ಲಿ ಚಿರಂಜೀವಿ ಸರ್ಜಾ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಚಿರಂಜೀವಿ ಸರ್ಜಾ ಮೂವರು ನಾಯಕಿಯರೊಂದಿಗೆ ರೊಮ್ಯಾನ್ಸ್ ಮಾಡಲಿದ್ದಾರಂತೆ. ಆ ಪೈಕಿ ದೀಪ್ತಿ ಸಾತಿ ಮತ್ತು ಟಗರು ಮೂಲಕ ಸೆನ್ಸೆಷನ್ ಸೃಷ್ಟಿಸಿರುವ ತ್ರಿವೇಣಿ ರಾವ್ ಎರಡನೇ ನಾಯಕಿ. ಇನ್ನು ಮೂರನೇ ನಾಯಕಿ ಹೆಸರು ಬಹಿರಂಗವಾಗಿಲ್ಲ.
ಅಮ್ಮ ಐ ಲವ್ ಯೂ ಚಿತ್ರದ ಚಿತ್ರೀಕರಣ ಮುಗಿಸಿರುವ ಚಿರಂಜೀವಿ ಸರ್ಜಾ ರಾಜ ಮಾರ್ತಾಂಡ ಚಿತ್ರದಲ್ಲಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದು ಮೈಸೂರಿನಲ್ಲಿ ಚಿತ್ರೀಕರಣ ನಡೆಸುತ್ತಿದೆ.
ದೀಪ್ತಿ ಸಾತಿ 2015ಕ್ಕೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಕೇವಲ 3 ವರ್ಷದ ಅವಧಿಯಲ್ಲಿ ಮಲಯಾಳಂ, ಕನ್ನಡ, ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.