ರಮೇಶ್ ಅರವಿಂದ್ 
ಸಿನಿಮಾ ಸುದ್ದಿ

ಇಮ್ರಾನ್ ಸರ್ದಾರಿಯಾ ನಿರ್ದೇಶನದ ಥ್ರಿಲ್ಲರ್ ಚಿತ್ರದಲ್ಲಿ ರಮೇಶ್ ಅರವಿಂದ್ ನಟನೆ!

ಸ್ಯಾಂಡಲ್ವುಡ್ ನ ನಟ, ನಿರ್ದೇಶಕ ರಮೇಶ್ ಅರವಿಂದ್ ಎಷ್ಟು ವರ್ಕೋಹಾಲಿಕ್ ಎಂದರೇ ಒಂದಲ್ಲ ಒಂದು ಚಿತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.

ಸ್ಯಾಂಡಲ್ವುಡ್ ನ ನಟ, ನಿರ್ದೇಶಕ ರಮೇಶ್ ಅರವಿಂದ್ ಎಷ್ಟು ವರ್ಕೋಹಾಲಿಕ್ ಎಂದರೇ ಒಂದಲ್ಲ ಒಂದು ಚಿತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. 
ನೃತ್ಯ ನಿರ್ದೇಶನದಿಂದ ಸ್ವತಂತ್ರ ನಿರ್ದೇಶನಕ್ಕೆ ಹೊರಳಿದ ಇಮ್ರಾನ್ ಸರ್ದಾರಿಯಾ ಅವರ ಮುಂಬರುವ ಥ್ರಿಲ್ಲಿರ್ ಚಿತ್ರವೊಂದರಲ್ಲಿ ನಟಿಸಲು ರಮೇಶ್ ಅರವಿಂದ್ ಮುಂದಾಗಿದ್ದಾರೆ.  ಇನ್ನು ಇಮ್ರಾನ್ ಸದ್ಯ ಚಿತ್ರಕತೆ ಬರೆಯುವುದರಲ್ಲಿ ಬ್ಯುಸಿಯಾಗಿದ್ದಾರೆ. 2018ರ ದ್ವಿತೀಯಾರ್ಧದಲ್ಲಿ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ. 
ಸದ್ಯ ರಮೇಶ್ ಅರವಿಂದ್ ಹಿಂದಿಯ ಕ್ವೀನ್ ಚಿತ್ರದ ರಿಮೇಕ್ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದಾರೆ. ದಕ್ಷಿಣ ಭಾರತದ ಮೂರು ಭಾಷೆಗಳಲ್ಲಿ ಚಿತ್ರ ತಯಾರಾಗಲಿದೆ. ಕನ್ನಡದಲ್ಲಿ ಪಾರುಲ್ ಯಾದವ್, ತೆಲುಗಿನಲ್ಲಿ ತಮನ್ನಾ ಭಾಟಿಯಾ ಮತ್ತು ತಮಿಳಿನಲ್ಲಿ ಕಾಜೋಲ್ ಅಗರವಾಲ್ ಅಭಿನಯಿಸುತ್ತಿದ್ದಾರೆ. 
ಇದರ ಜತೆಗೆ ರಾಧಿಕಾ ಕುಮಾರಸ್ವಾಮಿ ನಿರ್ಮಿಸಿ ನಟಿಸುತ್ತಿರುವ ಭೈರಾದೇವಿ ಚಿತ್ರದಲ್ಲಿ ರಮೇಶ್ ಅರವಿಂದ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ರಮೇಶ್ ಅರವಿಂದ್ ಅವರ ಈ ಹಿಂದಿನ ಜವಾಬ್ದಾರಿಗಳನ್ನೆಲ್ಲಾ ಮುಗಿಸಿದ ನಂತರ ಇಮ್ರಾನ್ ಸರ್ದಾರಿಯಾ ಈ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT