ಶೃತಿ ಹರಿಹರನ್ 
ಸಿನಿಮಾ ಸುದ್ದಿ

ಸುದೀಪ್, ಸುಹಾಸಿನಿ ಜೊತೆ ನಟಿಸುತ್ತಿರುವುದು ಅದೃಷ್ಟದ ಅವಕಾಶ: ಶೃತಿ ಹರಿಹರನ್

ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದಲ್ಲಿ ಸುದೀಪ್ ಎದುರು ಶೃತಿ ಹರಿಹರನ್ ನಟಿಸುತ್ತಿದ್ದಾರೆ. ಅಂಬರೀಷ್ ಗೆ ನಾಯಕಿಯಾಗಿ ಸುಹಾಸಿನಿ ಅಭಿನಿಸುತ್ತಿದ್ದಾರೆ...

ಬೆಂಗಳೂರು: ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದಲ್ಲಿ  ಸುದೀಪ್ ಎದುರು ಶೃತಿ ಹರಿಹರನ್ ನಟಿಸುತ್ತಿದ್ದಾರೆ. ಅಂಬರೀಷ್ ಗೆ ನಾಯಕಿಯಾಗಿ ಸುಹಾಸಿನಿ ಅಭಿನಿಸುತ್ತಿದ್ದಾರೆ.
ಇದೇ ಮೊದಲ ಬಾರಿಗೆ ಶೃತಿ ಹರಿಹರನ್ ಕಿಚ್ಚ ಸುದೀಪ್ ಜೊತೆಗೆ ನಟಿಸುತ್ತಿದ್ದಾರೆ. ಸುಹಾಸಿನಿಯ ಸಣ್ಣ ವಯಸ್ಸಿನ ಪಾತ್ರದಲ್ಲಿ ಶೃತಿ ಅಭಿನಯಿಸುತ್ತಿದ್ದಾರೆ.
ಗುರುದತ್ತ ಗಾಣಿಗ ನಿರ್ದೇಶನದ ಸಿನಿಮಾದಲ್ಲಿ ಅಂಬರೀಷ್ ಅವರ ಯಂಗರ್ ವರ್ಸನ್ ನಲ್ಲಿ ಸುದೀಪ್ ಸುಹಾಸಿನಿ ಯಂಗರ್ ವರ್ಸನ್ ನಲ್ಲಿ ಶೃತಿ ಹರಿಹರನ್ ನಟಿಸುತ್ತಿದ್ದಾರೆ.
ಗುರು ಬಗ್ಗೆ ನನಗೆ ಗೊತ್ತಿದೆ, ಅವರು ಈ ಮೊದಲು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು, ಈ ಸಿನಿಮಾದಲ್ಲಿ ನನಗೆ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ ಎಂದು ಹೇಳಿದ್ದಾರೆ, ಈ ಸಿನಿಮಾದಲ್ಲಿ ಸುಹಾಸಿನಿ ಅವರು ನಟಿಸುತ್ತಿರುವುದು ನನಗೆ ಹೆಚ್ಚಿನ ಉತ್ಸಾಹ ತಂದಿದೆ. ಈ ಸಿನಿಮಾದಲ್ಲಿ ಶೃತಿ 1970 ರ ದಶಕದ ಪಾತ್ರ ನಿರ್ವಹಿಸುತ್ತಿದ್ದಾರೆ.
ಈ ಸಿನಿಮಾ ನನ್ನ ಕಾಲೇಜು ದಿನಗಳನ್ನು ನೆನಪಿಗೆ ತರುತ್ತಿದೆ, ಅಂದಿನ ದಿನಗಳಲ್ಲಿ ಎರಡು ಜಡೆ ಜೊತೆಗೆ ಹೂವು ಹಾಕುವುದು ಸ್ಟೈಲ್, ಆ ಕಾಲದ ಸ್ಟೈಲ್ ನಲ್ಲಿ ಸುಂದರವಾಗಿ ಕಾಣುವುದು ನನಗೆ ತುಂಬಾ ಇಷ್ಟ.ಅಂದಿನ ದಿನಗಳಲ್ಲಿ ಮೊಬೈಲ್ ಇರಲಿಲ್ಲ, ಪ್ರೀತಿ ಹೆಚ್ಚು ಶುದ್ದ ಹಾಗೂ ಮುಗ್ಧತೆಯಿತ್ತು, ಆ ರೀತಿಯ ಪಾತ್ರ ಈ ಸಿನಿಮಾದಲ್ಲಿದೆ, ಸುದೀಪ್ ಎದುರು ನನ್ನ ನಟನೆ ಐಸ್ ಮೇಲಿನ ಕೇಕ್ ನಂತೆ ಎಂದಿದ್ದಾರೆ.
ಸುಹಾಸಿನಿ ಅವರ ಅಮೃತ ವರ್ಷಿಣಿ ನನ್ನ ಆಲ್ ಟೈಮ್ ಫೇವರಿಟ್, ಆ ರೀತಿಯ ಮತ್ತೊಂದು ಸಿನಿಮಾ ಮತ್ತೊಂದು ಬಂದಿಲ್ಲ, ಆ ರೀತಿ ಪಾತ್ರವನ್ನು ಮತ್ಯಾರು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ, ಆವರ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳುವ ಅವಕಾಶ ನನಗೆ ಸಿಕ್ಕಿಲ್ಲ, ಈ ಮೊದಲು ನಾನು ಅವರನ್ನು ಭೇಟಿ ಮಾಡಿದ್ದೆ. ಲೂಸಿಯಾ, ಗೋದಿಬಣ್ಣ ಸಾಧಾರಣ ಮೈಕಟ್ಟು, ವಿಸ್ಮಯ, ಸೋಲೋ ಮುಂತಾದ ಸಿನಿಮಾಗಳನ್ನು ನೋಡಿ ನನ್ನ ಬಗ್ಗೆ  ಮೆಚ್ಚುಗೆಯ ಮಾತುಗಳನ್ನಾಡಿದರು, ಅವರ ಬಾಡಿ ಲಾಂಗ್ವೇಜ್ ವಿಭಿನ್ನ, ಅದಕ್ಕಾಗಿ ನಾನು ಹೊಂದಿಕೊಳ್ಳುತ್ತಿದ್ದೇನೆ ಎಂದು ಶೃತಿ ವಿವರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ