ಬೆಂಗಳೂರು: ಮ್ಯಾಗ್ನಮ್ ಒಫಸ್ ಸಂಸ್ಥೆಯ ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಸಿನಿಮಾ ಡಬ್ಬಿಂಗ್ ಗಾಗ್ ನಟ ದರ್ಶನ್ ಆಕಾಶ್ ಸ್ಟುಡಿಯೋ ಗೆ ತೆರಳಿದ್ದಾರೆ. ಕಳೆದ ವಾರಾಂತ್ಯದಲ್ಲಿ ಡಬ್ಬಿಂಗ್ ನಲ್ಲಿ ಭಾಗವಹಿಸಿದ್ದರು.
ದರ್ಶನ್ ನಟನೆಯ 50ನೇ ಸಿನಿಮಾಗೆ ನಾಗಣ್ಣ ನಿರ್ದೇಶನ ನೀಡಿದ್ದಾರೆ, ಈ ಸಿನಿಮಾದಲ್ಲಿ ದರ್ಶನ್ ದುರ್ಯೋಧನನ ಪಾತ್ರ ನಿರ್ವಹಿಸಿದ್ದಾರೆ, ಮಾರ್ಚ್ 24 ರೊಳಗೆ ಸಂಪೂರ್ಣ ಡಬ್ಬಿಂಗ್ ಪೂರ್ಣ ಗೊಳಿಸುವುದಾಗಿ ಹೇಳಿರುವ ದರ್ಶನ್ ಮತ್ತೆ ಮಾರ್ಚ್ 24 ರಂದು ಭಾಗವಹಿಸಲಿದ್ದಾರೆ.
ಕುರುಕ್ಷೇತ್ರ ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್ ಆರಂಭವಾಗಿದ್ದು, ಪೊನ್ ಕುಮಾರ್ ನಿರ್ದೇಶನದ ಯಜಮಾನ ಸಿನಿಮಾದಲ್ಲಿ ದರ್ಶನ್ ನಟಿಸಿದ್ದಾರೆ. ಅಂಬರೀಷ್. ಅರ್ಜುನ್ ಸರ್ಜಾ, ರವಿಚಂದ್ರನ್, ರವಿ ಶಂಕರ್, ಸೋನು ಸೂದ್, ಮೇಘನಾ ರಾಜ್ ಸ್ನೇಹ, ನಿಖಿಲ್ ಗೌಡ ಹರಿಪ್ರಿಯಾ ಮುಂತದವರು ನಟಿಸಿದ್ದಾರೆ. ಗದಾಯುದ್ದ ಕಥೆ ಆಧರಿಸಿ ಸಿನಿಮಾ ತಯಾರಾಗಿದೆ, ವಿ. ಹರಿಕೃಷ್ಣ ಸಂಗೀತ ನೀಡಿದ್ದಾರೆ.