ಹೈದರಾಬಾದ್: ಪ್ರಸಿದ್ಧ ತೆಲುಗು ನಟನೊಬ್ಬ ನನ್ನ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದರು ಎಂದು ನಟಿ ರಾಧಿಕಾ ಆಪ್ಟೆ ಹೇಳಿದ್ದಾರೆ. ಇತ್ತೀಚೆಗೆ ನೇಹಾ ಧೂಪಿಯಾ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಧಿಕಾ ಆಪ್ಟೆ ಘಟನೆ ವಿವರಣೆ ನೀಡಿದ್ದಾರೆ.
ತೆಲುಗು ಸಿನಿಮಾ ಶೂಟಿಂಗ್ ನ ಮೊದಲ ದಿನ ನಾನು ಸೆಟ್ ನಲ್ಲಿದ್ದೆ, ಹುಷಾರಿಲ್ಲದ ಕಾರಣ ನಾನು ಮಲಗಿದ್ದೆ, ಈ ವೇಳೆ ಸಹನಟ ಪಕ್ಕದಲ್ಲಿ ನಡೆದು ಹೋದರು, ನನಗೆ ಅವರ ಬಗ್ಗೆ ಗೊತ್ತೇ ಇರಲಿಲ್ಲ, ಈ ವೇಳೆ ಆತ ನನ್ನ ಕಾಲುಗಳಿಗೆ ಕಚಗುಳಿಯಿಟ್ಟ, ಆತ ಪ್ರಭಾವಶಾಲಿ ಎಂಬುದಾಗಿ ಕೇಳಲ್ಪಟ್ಟಿದ್ದೆ.
ತಕ್ಷಣವೇ ಎದ್ದ ನಾನು ಆತನ ಕೆನ್ನೆಗೆ ಹೊಡೆದೆ. ಯಾವತ್ತೂ ಇದನ್ನು ಮತ್ತೆ ಮಾಡಬೇಡಿ ಎಂದು ಕೋಪದಿಂದ ಕೂಗಿದೆ, ಅದನ್ನು ನಿರೀಕ್ಷಿಸದ ಆತನಿಗೆ ಆಘಾತ ಉಂಟಾಯಿತು, ಅದಾದ ನಂತರ ಆತ ಮತ್ತೆ ನನ್ನ ಮುಟ್ಟಲಿಲ್ಲ ಎಂದು ಕಬಾಲಿ ನಟಿ ತಿಳಿಸಿದ್ದಾರೆ.
ಆದರೆ ರಜನಿಕಾಂತ್ ಜೊತೆ ನಟಿಸುವಾಗ ನನಗೆ ಉತ್ತಮ ಅನುಭವವಾಯಿತು. ರಜನೀಕಾಂತ್ ಅದ್ಭುತ ಮಾನವೀಯ ಮೌಲ್ಯಯುಳ್ಳ ವ್ಯಕ್ತಿ ಎಂದು ಹೇಳಿರುವ ಅವರು, ಅದಾದ ನಂತರ ಬೇರೆ ಯಾವುದೇ ಈ ರೀತಿಯ ಘಟನೆ ನಡೆದಿಲ್ಲ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos