ಸಂಜಯ್ ದತ್ 
ಸಿನಿಮಾ ಸುದ್ದಿ

ತಮ್ಮ ಅನಧಿಕೃತ ಜೀವನ ಚರಿತ್ರೆ ವಿರುದ್ಧ ಕಾನೂನು ಕ್ರಮಕ್ಕೆ ಚಿಂತನೆ - ಸಂಜಯ್ ದತ್

ತಮ್ಮ ಅನಧಿಕೃತ ಜೀವನ ಚರಿತ್ರೆಗೆ ಸಂಬಂಧಿಸಿದಂತೆ ಲೇಖಕ ಯಾಸಿರ್ ಉಸ್ಮನ್ ಹಾಗೂ ಪ್ರಕಾಶಕರಾದ ಜಗ್ಗರ್ ನಾಟ್ ಬುಕ್ಸ್ ವಿರುದ್ಧ ಕಾನೂನು ಕ್ರಮದ ಚಿಂತನೆ ನಡೆಸಿರುವುದಾಗಿ ಬಾಲಿವುಡ್ ನಟ ಸಂಜಯ್ ದತ್ತ್ ತಿಳಿಸಿದ್ದಾರೆ.

ಮುಂಬೈ : ತಮ್ಮ ಅನಧಿಕೃತ ಜೀವನ ಚರಿತ್ರೆಗೆ ಸಂಬಂಧಿಸಿದಂತೆ ಲೇಖಕ ಯಾಸಿರ್ ಉಸ್ಮನ್  ಹಾಗೂ  ಪ್ರಕಾಶಕರಾದ ಜಗ್ಗರ್ ನಾಟ್ ಬುಕ್ಸ್ ವಿರುದ್ಧ ಕಾನೂನು ಕ್ರಮದ ಚಿಂತನೆ ನಡೆಸಿರುವುದಾಗಿ ಬಾಲಿವುಡ್ ನಟ ಸಂಜಯ್ ದತ್ತ್ ತಿಳಿಸಿದ್ದಾರೆ.

ಯಾಸಿರ್ ಉಸ್ಮನ್ ಬರೆದಿರುವ ಪುಸ್ತಕದಲ್ಲಿ ತಮ್ಮ ಕುಟುಂಬ ಹಾಗೂ ನನ್ನಗೆ ಅಪಮಾನ ಮಾಡಲಾಗಿದೆ  ಅದರಲ್ಲಿ ಯಾವುದೇ ಉತ್ತಮ ಅಂಶಗಳಿಲ್ಲ. ತಮ್ಮ ಅಧಿಕೃತ ಜೀವನ ಚರಿತ್ರೆ ಶೀಘ್ರದಲ್ಲಿಯೇ ಹೊರಬರಲಿದೆ. ಅದರಲ್ಲಿ ಎಲ್ಲಾ ಅಂಶಗಳು ಇರಲಿವೆ ಎಂದು ಅವರು ಟ್ವಿಟರ್ ನಲ್ಲಿ ಸ್ಪಷ್ಪಪಡಿಸಿದ್ದಾರೆ.  

ತಮ್ಮ ಜೀವನ ಚರಿತ್ರೆ ಬರೆಯಲು ಅಥವಾ ಮುದ್ರಿಸಲು ಯಾಸೀರ್ ಉಸ್ಮನ್  ಅವರೀಗಾಗಲೀ ಅಥವಾ ಜಗ್ಗರ್ ನಾಟ್ ಪ್ರಕಾಶಕರಿಗಾಗಲೇ ನಾನೂ ಯಾವುದೇ ಅನುಮತಿ ನೀಡಿರುವುದಿಲ್ಲ. ನಮ್ಮ ವಕೀಲರು ಜಗ್ಗರ್ ನಾಟ್ ಪ್ರಕಾಶಕರಿಗೆ ಕಾನೂನು ನೋಟಿಸ್ ಕಳುಹಿಸಿದ್ದಾರೆ ಎಂದು ಸಂಜಯ್ ದತ್ತ್ ಹೇಳಿದ್ದಾರೆ.

ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿರುವುದಾಗಿ ಸಂಜಯ್ ದತ್ತ್ ತಿಳಿಸಿದ್ದಾರೆ..

 
ಈ ಮಧ್ಯೆ  ಪುಸ್ತಕದಿಂದ ಸಂಜಯ್ ದತ್ತ್ ಬೇಸರಗೊಂಡಿದ್ದರೆ ಕ್ಷಮೆ ಯಾಚಿಸುವುದಾಗಿ ಜಗ್ಗರ್ ನಾಟ್ ಪ್ರಕಾಶಕ ಸಂಸ್ಥೆ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT