ನಟಿ ಸರಿತಾ 
ಸಿನಿಮಾ ಸುದ್ದಿ

'ಚಿಲ್ಲಂ' ಚಿತ್ರದ ಮೂಲಕ ಹಿರಿಯ ನಟಿ ಸರಿತಾ ಕನ್ನಡಕ್ಕೆ ವಾಪಸ್

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ “ಬೃಹಸ್ಪತಿ” ಚಿತ್ರದ ಬಳಿಕ ಕೆ. ಚಂದ್ರಕಲಾ ನಿರ್ದೇಶನದ “ಚಿಲಂ” ಚಿತ್ರದಲ್ಲಿ ನಟಿಸುತ್ತಿದ್ದಾರೆ. ...

ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ “ಬೃಹಸ್ಪತಿ” ಚಿತ್ರದ ಬಳಿಕ ಕೆ. ಚಂದ್ರಕಲಾ ನಿರ್ದೇಶನದ “ಚಿಲಂ” ಚಿತ್ರದಲ್ಲಿ ನಟಿಸುತ್ತಿದ್ದಾರೆ. 
ಈ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ  ಕ್ವಾಟ್ಲೆ ಚಿತ್ರವನ್ನು ನಿರ್ದೇಶಿಸಿದ್ದ ಚಂದ್ರಕಲಾ ಅವರು ಚಿಲಂ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಈ ಚಿತ್ರದಲ್ಲಿ ಮನೋರಂಜನ್ ಗಾಂಜಾ ಸ್ಮಗ್ಲರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಇನ್ನೂ ಈ ಚಿತ್ರದಲ್ಲಿ ಹಿರಿಯ ನಟಿ ಸರಿತಾ ಕೂಡ  ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನೀನಾಸಂ ಸತೀಶ್ ನಟನೆಯ ಅಯೋಗ್ಯ ಚಿತ್ರದಲ್ಲಿಯೂ ಅಭಿನಯಿಸುತ್ತಿರುವ ಸರಿತಾ ಚಿಲಂ ನಲ್ಲಿಯೂ ನಟಿಸಲಿದ್ದಾರೆ,
ಚಿಲಂ ಚಿತದಲ್ಲಿ ಉತ್ತಮ ಪಾತ್ರ ತರಲು ನಿರ್ದೇಶಕಿ ಚಂದ್ರಕಲಾ ತಯಾರಾಗಿದ್ದಾರೆ. ಚಿತ್ರದ ಕಥೆ ಕೇಳಿ ಸರಿತಾ ಕೂಡ ಉತ್ಸುಕರಾಗಿದ್ದಾರೆ, ಕಥೆ ಕೇಳಿಗದ ಮರುಕ್ಷಣವೇ ನಟನೆಗೆ ಒಪ್ಪಿಗೊಂಡರು ಎಂದು ಚಂದ್ರಕಲಾ ತಿಳಿಸಿದ್ದಾರೆಯ ತಮ್ಮ ಹುಟ್ಟು ಹಬ್ಬದ ನಂತರ ಜೂನ್ ತಿಂಗಳಿನಿಂದ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ. 
1975 ರಲ್ಲಿ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ ಸರಿತಾ ಸುಮಾರು 20 ಸಿನಿಮಾಗಳಲ್ಲಿ ನಟಿಸಿದ್ದಾರೆ. ಡಾ. ರಾಜ್ ಕುಮಾರ್ ಜೊತೆಯಲ್ಲಿ ಹೊಸಬೆಳಕು, ಚಲಿಸುವ ಮೋಡಗಳು, ಕಾಮನ ಬಿಲ್ಲು, ಭಕ್ತ ಪ್ರಹ್ಲಾದ, ಹಾಗೂ ವಿಷ್ಣು ವರ್ಧನ್ ಜೊತೆ ಮಲಯ ಮಾರುತ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!