ಬೆಂಗಳೂರು: ’ಒಂದು ಮೊಟ್ಟೆಯ ಕಥೆ’ ಖ್ಯಾತಿಯ ರಾಜ್ ಬಿ. ಶೆಟ್ಟಿ ಗ್ಯಾಂಗ್ ಸ್ಟರ್ ಗಳ ಚಿತ್ರ ನಿರ್ದೇಶಿಸುತ್ತಾರೆನ್ನುವುದನ್ನು ಊಹಿಸಬಲ್ಲಿರಾ? ಹೌದು ಇದೀಗ ರಾಜ್ ತನ್ನ ಎರಡನೇ ಚಿತ್ರದ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. "ನಾನು ಇನ್ನೊಂದು ಒಳ್ಳೆಯ ಚಿತ್ರವನ್ನು ಪ್ರೇಕ್ಷಕರಿಗೆ ನೀಡಬೇಕಿದೆ.ಅದೂ ಸಹ ಮೊಟ್ಟೆಯ ಕಥೆಯಂತಿರದೆ ಭಿನ್ನವಾಗಿರಬೇಕು. ಅದಕ್ಕಾಗಿ ನಾನು ಈ ವಿಷಯವನ್ನು ಕೈಗೆತ್ತಿಕೊಂಡಿದ್ದೇನೆ" ಅವರು ಹೇಳಿದ್ದಾರೆ.
ತನ್ನ ಮೊದಲ ಚಿತ್ರದಲ್ಲಿ ರಾಜ್ ಗಲ್ಲಾ ಪೆಟ್ಟಿಗೆಯನ್ನು ಕೊಳ್ಳೆಹೊಡೆಯುವುದರೊಡನೆ ಲಕ್ಷಗಟ್ಟಲೆ ಹೃದಯಗಳನ್ನು ಸಹ ಗೆದ್ದಿದ್ದರು. ಅವರ ಮುಂಬರುವ ಚಿತ್ರದ ಬಗ್ಗೆ ಕುತೂಹಲಗೊಂಡಿದ್ದ ಎಕ್ಸ್ ಪ್ರೆಸ್ ಅವರನ್ನು ಮಾತನಾಡಿಸಿದಾಗ ಅವರು ನಮ್ಮ ಬಳಿ ಹೇಳಿಕೊಂಡಂತೆ ಅವರೀಗ ಅವರ ಸ್ನೇಹಿತರ ಊರಾದ ಮಂಗಳೂರಿನಲ್ಲಿದ್ದಾರೆ. ತನ್ನ ಎರಡನೇ ಚಿತ್ರಕ್ಕೆ ಚಿತ್ರಕಥೆ ಸಿದ್ದಪಡಿಸುತ್ತಿದ್ದಾರೆ.
ಕುತೂಹಲಕರವೆಂದರೆ ರಾಜ್ ಗೆ ಗ್ಯಾಂಗ್ ಸ್ಟರ್ ಗಳ ಕಥೆ ಬಲು ಇಷ್ಟವಂತೆ. "ನಾನು ಮಾರ್ಟಿನ್ ಸ್ಕಾರ್ಸೆಸೆ ಅವರ ದೊಡ್ಡ ಅಭಿಮಾನಿ. ಇದು ಗ್ಯಾಂಗ್ ಸ್ಟರ್ ಗಳ ಚಿತ್ರವಾಗಿದ್ದರೂ ಕಥೆಯು ಮಾನವೀಯತೆಯ ಎಳೆಯನ್ನೂ ಒಳಗೊಂಡಿದೆ.ನಾನಿದನ್ನು ಇನ್ನಷ್ಟು ಚೆನ್ನಾಗಿ ತೋರಿಸಲು ಇಚ್ಚಿಸಿದ್ದೇನೆ" ರಾಜ್ ಹೇಳಿದ್ದಾರೆ. ಭೌಗೋಳಿಕವಾಗಿಸಹ ಮಂಗಳೂರು ಗ್ಯಾಂಗ್ ಸ್ಟರ್, ಮರಳು ಮಾಫಿಯಾಗಳಂತಹಾ ಘಟನೆಗಳ ಕಥೆಯ ಅನ್ವೇಷಣೆಗೆ ಉತ್ತಮ ಸ್ಥಳವಾಗಿದೆ.
ಪ್ರಾರಂಭದಲ್ಲಿ ಥ್ರಿಲ್ಲರ್ ಕಥೆಯನ್ನು ಮಾಡಬೇಕೆಮ್ದುಕೊಂಡಿದ್ದ ನಿರ್ದೇಶಕ ಕಡೆಗೆತನ್ನ ನಿರ್ಧಾರ ಬದಲಿಸಿದ್ದಾರೆ "ಇದಕ್ಕೆ ಸಾಕಷ್ಟು ತಯಾರಿ ಅಗತ್ಯವಿದೆ. ನಾನು ಅವಸರಪಡುವುದಿಲ್ಲ, ಮುಂದಿನ ವರ್ಷ ಈ ಚಿತ್ರದ ಚಿತ್ರೀಕರಣ ಪ್ರಾರಂಭಗೊಳ್ಳಲಿದೆ. ಒಂದು ವೇಳೆ ಇದೇ ವರ್ಷ ಯೋಜನೆ ಕೈಗೆತ್ತಿಕೊಳ್ಳುವುದಾದರೂ ನನಗೆ ನಾಲ್ಕು ತಿಂಗಳು ಕಾಲಾವಕಾಶ ಬೇಕುಇದೆ"
ತನ್ನ ಎರಡನೇ ಚಿತ್ರಕ್ಕೆ ಮಧ್ಯಂತರದವರೆಗಿನ ಕಥೆಯಷ್ಟೇ ಸಿದ್ದವಾಗಿದೆ ಎನ್ನುವ ನಿರ್ದೇಶಕ "ಮೊಟ್ಟೆಯ ಕಥೆ ಒಂದು ಅಚ್ಚರಿ, ನಾನು ರೊಮ್ಯಾಂಟಿಕ್ ಕಾಮಿಡಿ ಕಥೆ ಹೆಣೆಯುವಲ್ಲಿ ಅಷ್ಟೇನೂ ಪಳಗಿದವನಲ್ಲ. ಮೊಟ್ಟೆಯ ಕಥೆ ಬರೆವಾಗಲೂ ನನಗದು ಇಷ್ಟು ಚೆನ್ನಾಗಿ ಬರುತ್ತದೆನ್ನುವ ನಿರೀಕ್ಷೆ ಇರಲಿಲ್ಲ
"ಚಿತ್ರ ಹಿಟ್ ಅಥವಾ ಪ್ಲಾಪ್ ಏನೇ ಆಗುವುದಾದರೆ ಆಗಲಿ, ನಾನು ಹೊಸ ಶೈಲಿ, ಹೊಸ ಪಾತ್ರಗಳ ಅನ್ವೇಷಣೆ ನಡೆಸುತ್ತಲೇ ಇರುತ್ತೇನೆ"ಅವರು ಹೇಳಿದ್ದಾರೆ.
ರಾಜ್ ನಟನಾಗಿ ಸಹ ಸಾಕಷ್ಟು ಬ್ಯುಸಿ ಇದ್ದಾರೆ. ’ತುರ್ತು ನಿರ್ಗಮನ’, ’ಅಮ್ಮಚ್ಚಿ ಎಂಬ ನೆನಪು’, ’ಮೇಬಜಾರ್’ ನಂತಹಾ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅವರು "ಸಧ್ಯ ಮೊಟ್ಟೆಯ ಕಥೆಯಂತಹಾ ಚಿತ್ರ ನನ್ನ ಮನಸ್ಸಿನಲ್ಲಿಲ್ಲ. ಮುಂದೆ ನೋಡಬೇಕು. ಇದೀಗ ಕೆ;ಲ ಗ್ಯಾಂಗ್ ವಾರ್ ಗಳನ್ನು ನೀವು ನನ್ನಿಂದ ನಿರೀಕ್ಷಿಸಬಹುದು" ಎ<ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos