ಹಸೆಮಣೆ ಏರಲು ಸಿದ್ದವಾದ”ಬಿಗ್ ಬಾಸ್’ ಗೌತಮಿ ಗೌಡ 
ಸಿನಿಮಾ ಸುದ್ದಿ

ಹಸೆಮಣೆ ಏರಲು ಸಿದ್ದವಾದ”ಬಿಗ್ ಬಾಸ್’ ಗೌತಮಿ ಗೌಡ

ರಿಯಾಲಿಟಿ ಶೋ ಬಿಗ್ ಬಾಸ್ 3ನೇ ಆವೃತ್ತಿಯ ಸ್ಪರ್ಧಿ ಗೌತಮಿ ಗೌಡ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಬೆಂಗಳೂರು: ರಿಯಾಲಿಟಿ ಶೋ ಬಿಗ್ ಬಾಸ್ 3ನೇ ಆವೃತ್ತಿಯ ಸ್ಪರ್ಧಿ ಗೌತಮಿ ಗೌಡ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಝೀ ಕನ್ನಡದ ಚಿ ಸೌ ಸಾವಿತ್ರಿ ಧಾರಾವಾಹಿಯ ಮೂಲಕ ಪ್ರಸಿದ್ದರಾದ ನಟಿ ಗೌತಮಿ ಜನಪ್ರಿಯ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದ್ದರು.
ಬಹುಕಾಲದ ಗೆಳೆಯ ಜಾರ್ಜ್ ಕ್ರಿಸ್ಟಿ ಅವರೊಡನೆ ನಿಶ್ಚಿತಾರ್ಥ ಮಾಡಿಕೊಂಡಿರುವ ಗೌತಮಿ ಈ ಬಗ್ಗೆ ಫೇಸ್‌ಬುಕ್‌ನಲ್ಲಿ  ಸಂತಸ ಹಂಚಿಕೊಂಡಿದ್ದಾರೆ. "ಪ್ರೀತಿಪಾತ್ರರಾದವರು ಸಿಗುವುದು ಅದೃಷ್ಟ. ಅವರನ್ನೇ ವರಿಸುವುದು ನನ್ನ ಸೌಭಾಗ್ಯ. ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದು ವಿವಾಹದ ದಿನವನ್ನು ಶೀಘ್ರದಲ್ಲಿ ತಿಳಿಸುವೆನು. ನಿಮ್ಮೆಲ್ಲರ ಪ್ರೀತಿಯ ಹಾರೈಕೆ ಇರಲಿ" ಎಂದು ಬರೆದುಕೊಂಡಿದ್ದಾರೆ.
ಅಂತರ್ ಧರ್ಮೀಯರಾದ ಇವರ ವಿವಾಹಕ್ಕೆ ಇಬ್ಬರ ಕುಟುಂಬವೂ ಒಪ್ಪಿಗೆ ಸೂಚಿಸಿದೆ. ಮದುವೆ ದಿನ ಇನ್ನೂ ನಿಗದಿಯಾಗದಿದ್ದರೂ ಇದೇ ವರ್ಷ ಗೌತಮಿ ದಾಂಪತ್ಯ ಜೀವನ ಪ್ರಾರಂಭಿಸಲಿದ್ದಾರೆ ಎನ್ನುವುದು ಖಚಿತವಾಗಿದೆ.
ಗೌತಮಿ ಗೌಡ ತಮ್ಮ ನಿಶ್ಚಿತಾರ್ಥದ ಚಿತ್ರಗಲನ್ನು ಫೇಸ್‌ಬುಕ್‌,  ಇನ್ಸ್ ಸ್ಟಾಗ್ರಾಂಗಲಲ್ಲಿ ಹಂಚಿಕೊಂಡಿದ್ದಾರೆ.
ಚಿ ಸೌ ಸಾವಿತ್ರಿ, ಮುತ್ತಿನ ಪಲ್ಲಕ್ಕಿ ಧಾರಾವಾಹಿಗಳು,  ಪೂರ್ಣ ಸತ್ಯ, ಶಾದಿ ಭಾಗ್ಯ ಎನ್ನುವ ಚಲನಚಿತ್ರಗಳಲ್ಲಿ ಗೌತಮಿ ಗೌಡ ಅಭಿನಯಿಸಿದ್ದಾರೆ. ಇಂಜಿನಿಯರಿಂಗ್ ಶಿಕ್ಷಣ, ಪಡೆದಿರುವ ಈಕೆ ಶಾಸ್ತ್ರೀಯ ನೃತ್ಯದಲ್ಲಿ ಸಹ ಪಾರಂಗತರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iran ನಲ್ಲಿ ಕೊನೆಗೂ ಆಡಳಿತ ಬದಲಾವಣೆ! ಅಮೆರಿಕ, ಇಸ್ರೇಲ್ ಬಯಸಿದ್ದೇ ಒಂದು, ಆಗಿದ್ದು ಇನ್ನೊಂದು!

Op Sindoor: ವಿಶ್ವಭೂಪಟದಿಂದ ಪಾಕ್ ನಿರ್ನಾಮಕ್ಕೆ ಕೆಲವೇ ನಿಮಿಷಗಳ ಅಂತರದಲ್ಲಿದ್ದೆವು, ಆದ್ರೆ ಅವರು ತಡೆದರು...: ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ

ಭಾರತದಲ್ಲಿ ಇನ್ನೂ ಎರಡು ತಿಂಗಳಿಗೆ ಆಗುವಷ್ಟು ಕಚ್ಚಾ ತೈಲ ಇದೆ, ಆದರೆ...: ಬೆಲೆ ಏರಿಕೆಗೆ ಕೇಂದ್ರ ಪೀಠಿಕೆ?

ಬ್ಯಾಂಕ್ ವಂಚನೆ ಪ್ರಕರಣ: ಮಧ್ಯ ಪ್ರದೇಶ ಕಾಂಗ್ರೆಸ್ ಶಾಸಕ ರಾಜೇಂದ್ರ ಭಾರ್ತಿ ದೋಷಿ; ಜೈಲಿಗೆ ಶಿಫ್ಟ್

35 ರಾಷ್ಟ್ರಗಳನ್ನು ಒಟ್ಟುಗೂಡಿಸುತ್ತೇವೆ, ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯಲು ಕ್ರಮ ಕೈಗೊಳ್ಳುತ್ತೇವೆ: ಟ್ರಂಪ್ ಗೆ ಯುಕೆ ಪ್ರಧಾನಿ ಸೆಡ್ಡು!

SCROLL FOR NEXT