ಆದಿತ್ಯ 
ಸಿನಿಮಾ ಸುದ್ದಿ

ಈಗ ಯಾರು ಬೇಕಾದರೂ ಅಂಡರ್ ವರ್ಲ್ಡ್ ರಾಯಭಾರಿಯಾಗಬಹುದು: ಆದಿತ್ಯ

ಅಂಡರ್ ವರ್ಲ್ಡ್ ಕಥೆಗಳುಳ್ಳ ಹಲವು ಸಿನಿಮಾಗಳಲ್ಲಿ ನಟಿಸಿದ್ದೇನೆ, ಪದೇ ಪದೇ ಅದೇ ರೀತಿಯ ಕಥೆಗಳಲ್ಲಿ ಅಭಿನಯಿಸಿದ್ದೆ, ಈಗ ಯಾರಾದರೂ ಅಂಡರ್ ವರ್ಲ್ಡ್ ನ ಬ್ರಾಂಡ್ ...

ಬೆಂಗಳೂರು:  ಲಾಂಗು ಮಚ್ಚು ಹಿಡಿದು ಕೋಪಗೊಂಡ ಮುಖ ಮಾಡುವಂತ ಹಾಗೂ ಅಂಡರ್ ವರ್ಲ್ಡ್ ಗೆ ಸಂಬಂಧಿಸಿದ ಸಿನಿಮಾಗಳಿಂದ ದೂರವಿರಲು ನಟ ಆದಿತ್ಯ ನಿರ್ಧರಿಸಿದ್ದಾರೆ.
ಹಲವು ಸಮಯದ ಬ್ರೇಕ್ ನಂತರ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಹೊಸ ಪ್ರಯೋಗಾತ್ಮಕ ಸಿನಿಮಾ ಜೊತೆ ಆದಿತ್ಯ ಬಂದಿದ್ದಾರೆ,. ಮುಂದುವರಿದ ಅಧ್ಯಾಯ ಎಂಬ ಶೀರ್ಷಿಕೆಯುಳ್ಳ ಚಿತ್ರದಲ್ಲಿ ಆದಿತ್ಯ ನಟಿಸುತ್ತಿದ್ದಾರೆ, ಇದಕ್ಕೆ ಮಿಸ್ ಇನ್ ಜಿ ಲಿಂಕ್ ಎಂಬ ಟ್ಯಾಗ್ ಲೈನ್  ಇದೆ.
ಬಾಲು ಮಹೇಂದ್ರನ್ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಥ್ರಿಲ್ಲರ್ ಸಿನಿಮಾವಾಗಿದೆ, ಆದಿತ್ಯ ಅವರ ಹುಟ್ಟು ಹಬ್ಬದಂದು ಪ್ರಾಜೆಕ್ಟ್  ಅನ್ನು ಘೋಷಿಸಿದ್ದು, ಪೋಸ್ಚರ್ ರಿಲೀಸ್ ಮಾಡಲಾಗಿದೆ. ಜೂನ್ ತಿಂಗಳಿಂದ ಆದಿತ್ಯ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ.
ನಾನು ಸ್ವಲ್ಪ ವಿಭಿನ್ನವಾಗಿರುವ ಪಾತ್ರ ಮಾಡಬೇಕೆಂದಿದ್ದೇನೆ, ಅದಕ್ಕಾಗಿ ಮೊದಲ ಬಾರಿಗೆ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಅಂಡರ್ ವರ್ಲ್ಡ್ ಕಥೆಗಳುಳ್ಳ ಹಲವು ಸಿನಿಮಾಗಳಲ್ಲಿ ನಟಿಸಿದ್ದೇನೆ, ಪದೇ ಪದೇ ಅದೇ ರೀತಿಯ ಕಥೆಗಳಲ್ಲಿ ಅಭಿನಯಿಸಿದ್ದೆ, ಈಗ ಯಾರಾದರೂ ಅಂಡರ್ ವರ್ಲ್ಡ್ ನ ಬ್ರಾಂಡ್ ಅಂಬಾಸಿಡರ್ ಆಗಬಹುದು ನಾನು ಈಗಾಗಲೇ ಅದನ್ನು ಮಾಡಿದ್ದೇನೆ ಎಂದು ಹೇಳಿದ್ದಾರೆ.
ಚಕ್ರವರ್ತಿ ನಂತರ ಅಂಡರ್ ವರ್ಲ್ಡ್ ಗೆ ಸಂಬಂಧಿಸಿದ 18 ಕಥೆಗಳು ಬಂದಿದ್ದವು. ಆದರೆ ನಾನು ಅಂತಿಮವಾಗಿ ಮುಂದುವರೆದ ಅಧ್ಯಾಯ ಸಿನಿಮಾ ಒಪ್ಪಿಕೊಂಡಿದ್ದೇನೆ, ಒಬ್ಬ ನಟನಾಗಿ ನನ್ನನ್ನು ನಾನು ಕನ್ ವಿನ್ಸ್ ಮಾಡಿಕೊಳ್ಳಲಿಲ್ಲ ಎಂದರೇ ಪ್ರೇಕ್ಷಕರನ್ನು ಹೇಗೆ ಮನವೊಲಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್