ಸೂರಜ್ ಕುಮಾರ್ 
ಸಿನಿಮಾ ಸುದ್ದಿ

ಸೂರಜ್ ಎನ್ನುವ ಹೊಸ ನಟನ ಕೈಯಲ್ಲಿದೆ ಎರಡು ಚಿತ್ರಗಳು

ಸೂರಜ್ ಕುಮಾರ್ ಅದೃಷ್ಟವಂತರಂತೆ ಕಾಣುತ್ತಿದ್ದಾರೆ. ಇನ್ನೂ ಒಂದೂ ಚಿತ್ರದಲ್ಲಿ ಕಾಣಿಸಿಕೊಳ್ಳದಿದ್ದರೂ ಇದಾಗಲೇ ಎರಡು ಚಿತ್ರಗಳು ಇವರ ಕೈಯಲ್ಲಿದೆ.

ಬೆಂಗಳೂರು: ಸೂರಜ್ ಕುಮಾರ್ ಅದೃಷ್ಟವಂತರಂತೆ ಕಾಣುತ್ತಿದ್ದಾರೆ. ಇನ್ನೂ ಒಂದೂ ಚಿತ್ರದಲ್ಲಿ ಕಾಣಿಸಿಕೊಳ್ಳದಿದ್ದರೂ ಇದಾಗಲೇ ಎರಡು ಚಿತ್ರಗಳು ಇವರ ಕೈಯಲ್ಲಿದೆ.
"ನಾನು ಕಳೆದ ವಾರಾಂತ್ಯದಲ್ಲಿ ನನ್ನ ಮೊದಲ ಚಲನಚಿತ್ರಕ್ಕೆ ಸಹಿ ಹಾಕಿದ್ದೇನೆ ಮತ್ತು ಮುಂಬರುವ ದಿನಗಳಲ್ಲಿ ಮತ್ತೊಂದು ಚಿತ್ರವನ್ನು ಅಂತಿಮಗೊಳಿಸಲಿದ್ದೇವೆ" ಎಂದು ಸುರಜ್ ಹೇಳಿದ್ದಾರೆ
ಸೂರಜ್ ಸಹಿ ಹಾಕಿರುವ ಮೊದಲ ಚಿತ್ರ ಗೀತರಚನೆಕಾರರಾದ ಸಂತೋಷ್ ನಾಯಕ್ ಅವರಿಗೆ ಸೇರಿದೆ. ಸಂತೋಷ್ ಈ ಚಿತ್ರದ ಮೂಲಕ ಪ್ರಥಮ ಬಾರಿಗೆ ನಿರ್ದೇಶಕರಾಗುತ್ತಿದ್ದಾರೆ."ಅವರು ಗೀತರಚನೆಕಾರರಾಗಿ ಪ್ರಸಿದ್ದರಾಗಿದ್ದಾರೆ. ಹೆಬ್ಬುಲಿ, ಚೌಕಗಳಂತಹಾ ಚಿತ್ರಕ್ಕೆ ಗೀತರಚನೆ ಮಾಡಿದ್ದಾರೆ. ಆದರೆ ಇದು ಅವರ ಪ್ರಥಮ ನಿರ್ದೇಶನದ ಚಿತ್ರ. ಕಲಾತ್ಮಕ ಹಾಗೂ ನಾಟಕೀಯತೆ ಬೆರೆತ ಕಥೆಯನ್ನು ವರು ಆಯ್ಕೆ ಮಾಡಿಕೊಂಡಿದ್ದಾರೆ.
"ಚಿತ್ರಕ್ಕೆ ಗುರುಕಿರಣ್ ಸಂಗೀತವಿದೆ. ಏತನ್ಮಧ್ಯೆ, ನಿರ್ಮಾಪಕರು ಪೋಷಕ ನಟರು ಮತ್ತು ತಂತ್ರಜ್ಞರು ಸೇರಿದಂತೆ ಉಳಿದ ಸಿಬ್ಬಂದಿಯನ್ನು ಅಂತಿಮಗೊಳಿಸಬೇಕಿದೆ.ಇನ್ನೊಂದು ತಿಂಗಳಲ್ಲಿ ಎಲ್ಲಾ ಸಿದ್ದತೆಗಳು ಪೂರ್ಣಗೊಂಡು ನಾವು ಚಿತ್ರೀಕರಣಕ್ಕೆ ತೆರಳಲಿದ್ದೇವೆ" ಸೂರಜ್ ಹೇಳಿದರು.
ಇದೇ ವೇಳೆ ಸೂರಜ್ ಎರಡನೇ ಚಿತ್ರದ ಕುರಿತಂತೆ ಮಾತುಕತೆ ನಡೆಸಿದ್ದಾರೆ. ಈ ಚಿತ್ರವನ್ನು ಕಥಾ ವಿಚಿತ್ರ ಖ್ಯಾತಿಯ  ಅನೂಪ್ ಆಂಥೋನಿ ನಿರ್ದೇಶಿಸುತ್ತಿದ್ದಾರೆ."ನಾನು ಒಪ್ಪಿಕೊಳ್ಳುತ್ತಿರುವ ಎರಡೂ ಚಿತ್ರಗಳು ಆಸಕ್ತಿದಾಯಕ ಕಥೆಯನ್ನೊಳಗೊಂಡಿದೆ.ಯಾವ ಚಿತ್ರ ಮೊದಲು ಪ್ರಾರಂಭಗೊಳ್ಳಲಿದೆ ಕಾದು ನೋಡಬೇಕು." ಅವರು ಹೇಳೀದರು.
ಸಂತೋಷ್ ನಾಯಕ್ ಅವರ ಚಿತ್ರದಲ್ಲಿ ಕಾಲೇಜು ಹುಡುಗನಾಗಿ ಕಾಣಿಸಿಕೊಳ್ಳಲಿರುವ ಸೂರಜ್ ಪಾತ್ರಕ್ಕೆ ವಿಭಿನ್ನ ಛಾಯೆಗಳಿದೆಯಂತೆ.
"ಅನೂಪ್ ಚಿತ್ರವು ಪಕ್ಕಾ ಸ್ಥಳೀಯ ಸಂಬಾಷಣೆ ಹೊಂದಿದೆ.ಎರಡೂ ಚಿತ್ರಗಳು ನನಗೆ ಹೊಸ ಅನುಭವವಾಗಿದೆ. ನಾನು ಈ ಎರಡೂ ಚಿತ್ರಗಳಲ್ಲಿ ಉತ್ಸಾಹದಿಂದ ಅಭಿನಯಿಸುತ್ತೇನೆ"
ಸೂರಜ್, ವರನಟ ರಾಜ್ ಲುಮಾರ್ ಕುಟುಂಬಕ್ಕೆ ಸೇರಿದವರಾಗಿದ್ದು ಇವರ ತಂದೆ ಎಸ್.ಎ. ಶ್ರೀನಿವಾಸ್, ಪಾರ್ವತಮ್ಮ ರಾಜ್ ಕುಮಾರ್ ಅವರ ಸೋದರರಿದ್ದಾರೆ. ಹೀಗಾಗಿ ಅವರಿಗೆ ಚಿತ್ರರಂಗದ ನಂಟೂ ಇದೆ ಎನ್ನುವುದು ವಿಶೇಷ. ಹಾಗೆಯೇ ಈ ಹೊಸ ನಟನಿಗೆ ದರ್ಶ್ನ ಸಹ ಪ್ರೋತ್ಸಾಹ ನೀಡಿ ಹುರಿದುಂಬಿಸಿದ್ದಾರಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT