ಸಿಂಬು 
ಸಿನಿಮಾ ಸುದ್ದಿ

ಗೋಡೆ ಮೇಲೆ ಮೃತ ಅಭಿಮಾನಿಯ ಪೋಸ್ಟರ್ ಅಂಟಿಸಿದ ಸಿಂಬು!

ಕಾವೇರಿ ವಿಚಾರವಾಗಿ ಮಾತನಾಡಿ ಕನ್ನಡಿಗರ ಮನ ಗೆದ್ದಿದ್ದ ಕಾಲಿವುಡ್ ನಟ ಸಿಂಬು ಇದೀಗ ಮೃತಪಟ್ಟ ಅಭಿಮಾನಿಗೆ ಗೌರವ ಸಲ್ಲಿಸುವ ಸಲುವಾಗಿ ಗೋಡೆ ಮೇಲೆ ಆತನ...

ಚೆನ್ನೈ: ಕಾವೇರಿ ವಿಚಾರವಾಗಿ ಮಾತನಾಡಿ ಕನ್ನಡಿಗರ ಮನ ಗೆದ್ದಿದ್ದ ಕಾಲಿವುಡ್ ನಟ ಸಿಂಬು ಇದೀಗ ಮೃತಪಟ್ಟ ಅಭಿಮಾನಿಗೆ ಗೌರವ ಸಲ್ಲಿಸುವ ಸಲುವಾಗಿ ಗೋಡೆ ಮೇಲೆ ಆತನ ಪೋಸ್ಟರ್ ಗಳನ್ನು ಅಂಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 
ಕಳೆದ ವಾರ ಚೆನ್ನೈನಲ್ಲಿ ಸಿಂಬು ಅವರ ಅಪ್ಪಟ ಅಭಿಮಾನಿ ಮದನ್ ಮೃತಪಟ್ಟಿದ್ದರು. ಮದನ್ ಮೃತಪಟ್ಟಿದ್ದ ಸಮಯದಲ್ಲಿ ಸಿಂಬು ಮಣಿರತ್ನಂ ನಿರ್ದೇಶನದ ಸಿನಿಮಾದ ಶೂಟಿಂಗ್ ಗಾಗಿ ಬೇರೆ ಕಡೆ ಹೋಗಿದ್ದರು. ಹಾಗಾಗಿ ಸಿಂಬು ಅವರಿಗೆ ತನ್ನ ಅಭಿಮಾನಿ ನಿಧನ ಹೊಂದಿರುವ ವಿಷಯ ತಿಳಿದಿರಲಿಲ್ಲ. 
ಸಿಂಬು ಶೂಟಿಂಗ್ ಮುಗಿಸಿ ರಾತ್ರಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಮದನ್ ಗೆಳೆಯರು ರಸ್ತೆ ಬಳಿ ಆತನ ಪೋಸ್ಟರ್ ಅಂಟಿಸುತ್ತಿದ್ದರು. ಇದನ್ನು ಗಮನಿಸಿದ ಸಿಂಬು ಕೂಡಲೇ ಕಾರಿನಿಂದ ಇಳಿದು ರಸ್ತೆ ಬದಿಯ ಗೋಡೆಗೆ ತನ್ನ ಅಭಿಮಾನಿಯ ಪೋಸ್ಟರ್ ಗಳನ್ನು ಅಂಟಿಸಿದ್ದಾರೆ. 
ಅಪ್ಪಟ ಅಭಿಮಾನಿಯ ನಿಧನಕ್ಕೆ ಸಿಂಬು ಬೇಸರ ವ್ಯಕ್ತಪಡಿಸಿದ್ದಾರೆ. ಮದನ್ ಸಿಂಬು ಫ್ಯಾನ್ ಕ್ಲಬ್ ನಲ್ಲಿ ಹೆಚ್ಚು ಗುರುತಿಸಿಕೊಂಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಬಹು ಅಂಗಾಂಗ ವೈಫಲ್ಯದಿಂದ ಗಾಯಕಿ ಆಶಾ ಭೋಸ್ಲೆ ನಿಧನ': ಬ್ರೀಚ್ ಕ್ಯಾಂಡಿ ಆಸ್ಪತ್ರೆ ಸ್ಪಷ್ಟನೆ

ಪ್ರತಿ ಪಂದ್ಯಕ್ಕೂ ಬನ್ನಿ... ನೀವು ನನ್ನ ಅದೃಷ್ಟ: IPLನಲ್ಲಿ ಶತಕ ಸಿಡಿಸಿ ವಿನಮ್ರ ಮನವಿ ಮಾಡಿದ ಸಂಜು ಸ್ಯಾಮ್ಸನ್, Video!

'ಇರಾನ್‌ಗೆ ಸಮವಸ್ತ್ರ, ಅಮೆರಿಕಕ್ಕೆ ಸೂಟ್': ಶಾಂತಿ ಮಾತುಕತೆಗೂ ಮುನ್ನ ಗಮನಸೆಳೆದ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಉಡುಗೆ!

ಬೇಡ ಬೇಡ ಹೀಗೆಲ್ಲಾ ಮಾಡಬೇಡಿ: ರಸ್ತೆಯಲ್ಲೇ ಗಳಗಳನೆ ಅತ್ತ ನಟಿ ರಮ್ಯಾ

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

SCROLL FOR NEXT