ಬಾಲಿವುಡ್ ನಟ ಅಮಿತಾಭ್ ಬಚ್ಚನ್ 
ಸಿನಿಮಾ ಸುದ್ದಿ

ವಕೀಲ ಉಡುಗೆಗೆ ಅಗೌರವ: ನಟ ಅಮಿತಾಭ್ ಬಚ್ಚನ್'ಗೆ ಬಾರ್ ಕೌನ್ಸಿಲ್ ನೋಟಿಸ್

ವಕೀಲ ಉಡುಗೆಗೆ ಅವಗೌರವ ತೋರಿದ ಹಿನ್ನಲೆಯಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರಿಗೆ ದೆಹಲಿ ಬಾರ್ ಕೌನ್ಸಿಲ್ ಶುಕ್ರವಾರ ನೋಟಿಸ್ ಜಾರಿ ಮಾಡಿದೆ...

ನವದೆಹಲಿ: ವಕೀಲ ಉಡುಗೆಗೆ ಅವಗೌರವ ತೋರಿದ ಹಿನ್ನಲೆಯಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರಿಗೆ ದೆಹಲಿ ಬಾರ್ ಕೌನ್ಸಿಲ್ ಶುಕ್ರವಾರ ನೋಟಿಸ್ ಜಾರಿ ಮಾಡಿದೆ. 
ಜಾಹೀರಾತೊಂದರಲ್ಲಿ ನಟ ಅಮಿತಾಭ್ ಬಚ್ಚನ್ ಅವರು ವಕೀಲ ಉಡುಗೆಗೆ ಅಗೌವರ ಸೂಚಿಸಿದೆ ಎಂದಿರುವ ಬಾರ್ ಕೌನ್ಸಿಲ್, ಅಮಿತಾಭ್ ಬಚ್ಚನ್ ಸೇರಿ, ಎವರೆಸ್ಟ್ ಮಸಾಲೆ, ಜಾಹೀರಾತು ಪ್ರಸಾರ ಮಾಡಿದ್ದ ಯೂಟ್ಯೂಬ್ ಹಾಗೂ ಇತರೆ ಮಾಧ್ಯಮಗಳಿಗೆ ನೋಟಿಸ್ ಜಾರಿ ಮಾಡಿದೆ.
ಅನುಮತೆ ಪಡೆಯದೆ ಜಾಹೀರಾತಿನಲ್ಲಿ ಪಾಲ್ಗೊಂಡಿರುವವರೆಲ್ಲರೂ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ ಎಂದು ತಿಳಿದುಬಂದಿದೆ. 
ಜಾಹೀರಾತು ವೇಳೆ ವಕೀಲ ಉಡುಗೆಗಳನ್ನು ಬಳಸುವುದಕ್ಕೂ ಮುನ್ನ ನೀವು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿಲ್ಲ. ಅಧಿಕಾರ ಮತ್ತು ವಿವೇಚನೆ ಇಲ್ಲದೆಯೇ ಜಾಹೀರಾತು ನಿರ್ಮಿಸಿ, ಅದನ್ನು ಪ್ರಸಾರ ಮಾಡಿರುವ ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಇಂತಹ ಎಲ್ಲಾ ಜಾಹೀರಾತುಗಳಿಗೆ ಸಂಬಂಧಿಸಿದ ಚಟುವಟಿಗಳನ್ನು ಕೂಡಲೇ ನಿಲ್ಲಿಸಬೇಕು. ಬಾರ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ದೇಶದ ಇತರೆ ಎಲ್ಲಾ ವಕೀಲ ಸಂಘಗಳಿಗೆ ಇನ್ನು ಮುಂದೆ ವಕೀಲರ ಉಡುಗೆಗೆ ಅವಗೌರವ ತೋರುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಡಬೇಕು. 10 ದಿನಗಳೊಳಗಾಗಿ ನೋಟಿಸ್'ಗೆ ಉತ್ತರ ನೀಡಬೇಕೆಂದು ನೋಟಿಸ್ ನಲ್ಲಿ ತಿಳಿಸಲಾಗಿದೆ. 
ಜಾಹೀರಾತಿನಲ್ಲಿ ಅಮಿತಾಭ್ ಬಚ್ಚನ್ ಅವರು ಡ್ರೆಸ್ಸಿಂಗ್ ರೂಂನಲ್ಲಿ ವಕೀಲ ಉಡುಪಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಬಚ್ಚನ್ ಇರುವ ಸ್ಥಳಕ್ಕೆ ಬರುವ ಇಬ್ಬರು ನಟರು ಪಾವ್ ಭಾಜಿ ನೀಡುತ್ತಾರೆ. ಅದನ್ನು ಸವಿದ ಬಚ್ಚನ್ ಅವರು ಅದರಲ್ಲಿ ಬಳಸಲಾಗಿರುವ ಎವರೆಸ್ಟ್ ಮಸಾಲಾವನ್ನು ಹೊಗಳುತ್ತಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬೆಳಗಾವಿ: ಬೀದಿ ನಾಯಿಗಳ ಅಟ್ಟಹಾಸ, 2 ವರ್ಷದ ಬಾಲಕಿ ಮೇಲೆ ಭೀಕರ ದಾಳಿ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

SCROLL FOR NEXT