ಸಿನಿಮಾ ಸುದ್ದಿ

ಸೋಲುಗಳಿಂದ ಕಂಗೆಟ್ಟಾಗ ಆತ್ಮಹತ್ಯೆಗೆ ಚಿಂತಿಸುತ್ತಿದ್ದೆ: ಎಆರ್ ರೆಹಮಾನ್

Srinivas Rao BV
ಖ್ಯಾತ ಸಂಗೀತ ನಿರ್ದೇಶಕ, ಸಂಯೋಜಕ ಎಆರ್ ರೆಹಮಾನ್ ಅವರ ಸಾಧನೆಗಳು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಇಂದು ಅವರೊಬ್ಬ ಖ್ಯಾತ ಸಂಗೀತ ನಿರ್ದೇಶಕನಾಗಿರಬಹುದು ಆದರೆ ಎಳೆಯ ವಯಸ್ಸಿನಲ್ಲೇ ಆತ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುವಷ್ಟು ನೋವು ಎದುರಿಸಿದ್ದಾರೆ. 
ಹೌದು, ಸ್ವತಃ ಎಆರ್ ರೆಹಮಾನ್ ತಮ್ಮ ಜೀವನದ ಕಷ್ಟದ ದಿನಗಳನ್ನು ಹೇಳಿಕೊಂಡಿದ್ದಾರೆ.  ಎಆರ್ ರೆಹಮಾನ್ ಅವರ ಜೀವನ ಚರಿತ್ರೆಯನ್ನು ಕೃಷ್ಣ ತ್ರಿಲೋಕ್ ದಾಖಲಿಸಿದ್ದು, ಮುಂಬೈ ನಲ್ಲಿ ಪುಸ್ತಕ ಬಿಡುಗಡೆಯಾಗಿದೆ. ಈ ವೇಳೆ ಸಂದರ್ಶನ ನೀಡಿರುವ ಎಆರ್ ರೆಹಮಾನ್, ತಮ್ಮ ಜೀವನದ ಕಷ್ಟದ ದಿನಗಳನ್ನು ಹೇಳಿಕೊಂಡಿದ್ದಾರೆ. "ಸಿನಿಮಾ ಸಂಯೋಜಕರಾಗಿದ್ದ ನನ್ನ ತಂದೆ ಆರ್ ಕೆ ಶೇಖರ್ ಅವರನ್ನು 9 ನೇ ವಯಸ್ಸಿನಲ್ಲಿ ಕಳೆದುಕೊಂಡೆ, ಸಂಗೀತ ಉಪಕರಣಗಳನ್ನು ಬಾಡಿಗೆಗೆ ತೆಗೆದುಕೊಳ್ಳುತ್ತಿದ್ದೆವು. ಈ ಮೂಲಕ ಸಂಗೀತ ಕ್ಷೇತ್ರಕ್ಕೆ ಅತ್ಯಂತ ಸಣ್ಣ ವಯಸ್ಸಿನಲ್ಲೇ ಪ್ರವೇಶಿಸಿದೆ. 12-22 ವಯಸ್ಸಿನ ವೇಳೆಗೆ ಎಲ್ಲವನ್ನೂ ನೋಡಿಯಾಗಿತ್ತು, ಸಾಮಾನ್ಯದ ಸಂಗತಿಗಳನ್ನು ಮಾಡುವುದೆಂದರೆ ಬೇಸರವಾಗುತ್ತಿತ್ತು, ಸಾಮಾನ್ಯವಾದ ಸಂಗತಿಗಳನ್ನು ಮಾಡುವುದರಲ್ಲಿ ಆಸಕ್ತಿ ಇರಲಿಲ್ಲ. ಪ್ರಾರಂಭದ ದಿನಗಳಲ್ಲಿ ಎದುರಿಸಿದ ಕಷ್ಟಗಳು ಮುಂದೆ ಧೈರ್ಯವಂತನಾಗುವಂತೆ ಮಾಡಿದವು. 25 ವರ್ಷದವರೆಗೂ ನಾನು ಆತ್ಮಹತ್ಯೆ ಮಾಡಿಕೊಳ್ಳುವುದರ ಬಗ್ಗೆ ಚಿಂತಿಸುತ್ತಿದ್ದೆ ಎಂದು ಹೇಳಿದ್ದಾರೆ. 
SCROLL FOR NEXT