ಸಿನಿಮಾ ಸುದ್ದಿ

'ಪುಣ್ಯಕೋಟಿ' ಯ ಕಥೆ ಹೇಳಲಿರುವ ರಕ್ಷಿತ್ ಶೆಟ್ಟಿ

Sumana Upadhyaya

ಬೆಂಗಳೂರು: ಉಳಿದವರು ಕಂಡಂತೆ ಎಂಬ ಚಿತ್ರದ ನಿರ್ದೇಶನದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಭರವಸೆಯ ನಿರ್ದೇಶಕ ಮತ್ತು ನಟನಾಗಿ ಹೊಸ ಪ್ರೇಕ್ಷಕ ವರ್ಗವನ್ನೇ ಸೃಷ್ಟಿಸಿ ನೆಲೆ ಕಂಡುಕೊಂಡ ರಕ್ಷಿತ್ ಶೆಟ್ಟಿ ಇದೀಗ ಎರಡನೇ ಚಿತ್ರವನ್ನು ನಿರ್ದೇಶಿಸಲು ನಟಿಸಲು ಮುಂದಾಗಿದ್ದಾರೆ, ಅದು ಪುಣ್ಯಕೋಟಿ.

ಸ್ವತಃ ರಕ್ಷಿತ್ ಶೆಟ್ಟಿ ಅವರೇ ಕಥೆ ಬರೆದು ನಿರ್ದೇಶನ ಮಾಡುತ್ತಿರುವ ಸುಮಾರು 300 ವರ್ಷಗಳ ಹಿಂದಿನ ಸ್ಥಿತಿಗತಿ, ವಾತಾವರಣವನ್ನು ನೆನಪಿಸುವ ಚಿತ್ರವಾಗಿರುತ್ತದೆ. ಈ ವಿಚಾರವನ್ನು ರಕ್ಷಿತ್ ಶೆಟ್ಟಿ ಆಪ್ತ ಗೆಳೆಯ ರಿಷಬ್ ಶೆಟ್ಟಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಗೆಳೆಯನಿಗೆ ಶುಭಾಶಯ ಕೋರಿದ್ದಾರೆ.

ಸುಮಾರು 100 ಕೋಟಿ ರೂಪಾಯಿ ಬಜೆಟ್ ನಲ್ಲಿ ತಯಾರಾಗುತ್ತಿರುವ ಅದ್ದೂರಿ ತಾರಾಗಣದ ಚಿತ್ರವಿದು ಎನ್ನಲಾಗುತ್ತಿದೆ. ಮುಂದಿನ ವರ್ಷದ ಅಂತ್ಯದ ವೇಳೆಗೆ ಚಿತ್ರೀಕರಣ ಆರಂಭವಾಗುವ ಸಾಧ್ಯತೆಯಿದೆ.

SCROLL FOR NEXT