ರಾಧಿಕಾ ಕುಮಾರಸ್ವಾಮಿ 
ಸಿನಿಮಾ ಸುದ್ದಿ

'ಭೈರಾದೇವಿ'ಗಾಗಿ ಅಘೋರಿ ರೂಪ ತಳೆದ ರಾಧಿಕಾ ಕುಮಾರಸ್ವಾಮಿ!

ರಾಧಿಕಾ ಕುಮಾರಸ್ವಾಮಿ ಇದೀಗ ಅಘೋರಿ ರೂಪದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಮಾಲ್ ಮಾಡುತ್ತಿದ್ದಾರೆ. ಅವರ ಮುಂಬರುವ ಚಿತ್ರ "ಭೈರಾದೇವಿ" ಅಲ್ಲಿನ ಕಾಳಿ ಅವತಾರದ ಲುಕ್....

ಬೆಂಗಳೂರು: ರಾಧಿಕಾ ಕುಮಾರಸ್ವಾಮಿ ಇದೀಗ ಅಘೋರಿ ರೂಪದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಮಾಲ್ ಮಾಡುತ್ತಿದ್ದಾರೆ. ಅವರ ಮುಂಬರುವ ಚಿತ್ರ "ಭೈರಾದೇವಿ" ಅಲ್ಲಿನ ಕಾಳಿ ಅವತಾರದ ಲುಕ್ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿದ್ದು ಇದರಲ್ಲಿ ಆಕೆ ಅಘೋರಿ ಗೆಟಪ್ ನಲ್ಲಿ ವಿಜ್ರಂಭಿಸಿದಾರೆ.
ಶ್ರೀಜಿ ನಿರ್ದೇಶನದ ಈ ಚಿತ್ರ ರಾಧಿಕಾ ಕುಮಾರಸ್ವಾಮಿ ಅವರ ಹೋಮ್ ಬ್ಯಾನರ್ ಶಮಿಕಾ ಎಂಟರ್ ಪ್ರೈಸಸ್ ಲಾಂಛನದಡಿ ಮೂಡಿಬರುತ್ತಿದೆ.ವಿಶೇಷವೆಂದರೆ ಈ ಚಿತ್ರದಲ್ಲಿ ರಮೇಶ್ ಅರವಿಂದ್ ಪೋಲೀಸ್ ಅಧಿಕಾರಿ ಪಾತ್ರ ನಿರ್ವಹಿಸಿದ್ದಾರೆ.
ಥ್ರಿಲ್ಲರ್ ಜತೆಗೆ ಕೌಟುಂಬಿಕ ಮನೋರಂಜನೆ ಚಿತ್ರ ಸಹ ಆಗಿರುವ ಭೈರಾದೇವಿ ಚಿತ್ರದಲ್ಲಿ ರಾಧಿಕಾ ಒಂದು ಹಾಡು ಹಾಗೂ ಕೆಲ ದೃಶ್ಯಗಳಲ್ಲಿ ಕಾಳಿಯಾಗಿ ಕಾಣಿಸಿದರೆ ಮತ್ತೆ ಚಿತ್ರದುದ್ದಕ್ಕೂ ಅಘೋರಿ ಸ್ವರೂಪದಲ್ಲಿ ಇರಲಿದ್ದಾರೆ. ಇನ್ನು ಪ್ರಖ್ಯಾತ ಖಳನಟ ರವಿ ಶಂಕರ್ ಸಹ ಚಿತ್ರದಲ್ಲಿದ್ದು ಅವರು ರಾಧಿಕಾ ಅವರಿಗೆ ಅಘೋರಿಗಳ ಗುರುವಾಗಿ ಪಾತ್ರ ನಿರ್ವಹಿಸಿದ್ದಾರೆ.
ಇನ್ನೂ ವಿಶೇಷವೆಂದರೆ ರಾಧಿಕಾ ಅಘೋರಿ ರೂಪದಲ್ಲಿ ಕಾಣಿಸಿಕೊಳ್ಳುವುದಕ್ಕಾಗಿ ಸುದೀರ್ಘ ನಾಲ್ಕು ಗಂಟೆಗಳ ಕಾಲ ಮೇಕಪ್ ಮಾಡಿಸಿಕೊಂಡಿದ್ದಾರೆ! ಚಿತ್ರದ ಎಂಬತ್ತು ಶೇಕಡಾ ಚಿತ್ರೀಕರಣ ಮುಗಿದಿದ್ದು ಇದೀಗ ಕೆಲ ಹಾಡಿನ ದೃಶ್ಯಗಳನ್ನು ಚಿತ್ರತಂಡ ಚಿತ್ರೀಕರಿಸುವಲ್ಲಿ ನಿರತವಾಗಿದೆ.
ಶ್ರೀಜಿ ಚಿತ್ರ ನಿರ್ದೇಶನ ಮಾಡುವುದರೊಡನೆ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಬಾಷಣೆಗಳನ್ನು ಸಹ ಬರೆದಿದ್ದಾರೆ. ಈ ಚಿತ್ರಕ್ಕೆ  ಜೆಎಸ್ ವಾಲಿ  ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Chalo Supreme Court: ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯಕಾಂತ್; ಸುಪ್ರೀಂ ಕೋರ್ಟ್‌ನತ್ತ ಇಂಡಿಯಾ ಬ್ಲಾಕ್ ಮೆರವಣಿಗೆ!

ಅತಿಯಾಗಿ ಭಯ ಹುಟ್ಟಿಸಬೇಡಿ, ನಿಮ್ಮ ಹೆದರಿಕೆಗೆ ಬಗ್ಗಲ್ಲ: ಗಾಯದ Video ಶೇರ್​ ಮಾಡಿ ಪೊಲೀಸರಿಗೆ ಆಮೀರ್ ಖಾನ್ ಸೊಸೆ ತಿರುಗೇಟು!

CJP ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಟ ಇಮ್ರಾನ್ ಖಾನ್​ಗೆ ಬಿಗ್ ಶಾಕ್; ಗಡಿಪಾರು ಸಾಧ್ಯತೆ

ಯುವತಿ ಮೇಲೆ ಅತ್ಯಾಚಾರ ಆರೋಪ: ಹುಣಸಮಾರನಹಳ್ಳಿ ಮಠದ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಬಂಧನ

ಹಾರ್ಮೊಜ್ ಮೇಲೆ ಈಗಲೂ ನಮ್ಮದೇ ನಿಯಂತ್ರಣ: ವಾಸ್ತವಕ್ಕೂ ಅಮೆರಿಕ ಹೇಳಿಕೆಗಳಿಗೂ ತಾಳೆಯಾಗುವುದಿಲ್ಲ- ಇರಾನ್