ಹರಿಯಾಣ: ಕುಸ್ತಿಪಟು ರಾವಲ್'ರಿಂದ ಪೆಟ್ಟು ತಿಂದು ಆಸ್ಪತ್ರೆಗೆ ದಾಖಲಾಗಿರುವ ನಟಿ ರಾಖಿ ಸಾವಂತ್ ಅವರು, ದಾಳಿ ಹಿಂದೆ ತನುಶ್ರೀ ದತ್ತಾ ಅವರ ಕೈವಾಡವಿದೆ ಎಂದು ಮಂಗಳವಾರ ಆರೋಪಿಸಿದ್ದಾರೆ.
ಘಟನೆ ಕುರಿತಂತೆ ರಾಖಿ ಸಾವಂತ್ ಅವರು ಪ್ರತಿಕ್ರಿಯೆ ನೀಡಿರುವ ವಿಡಿಯೋವೊಂದು ಇದೀಗ ಟ್ವಿಟರ್ ನಲ್ಲಿ ಹರಿದಾಡುತ್ತಿದ್ದು, ವಿಡಿಯೋದಲ್ಲಿ ರಾಖಿಯವರು ತನುಶ್ರೀ ದತ್ತಾ ವಿರುದ್ಧ ಆರೋಪ ಮಾಡಿದ್ದಾರೆ.
ಡ್ಯಾನ್ಸ್ ಮಾಡಲೆಂದಷ್ಟೇ ರಿಂಗ್ ಒಳಗೆ ಹೋಗಿದ್ದೆ. ಆದರೆ, ಆಕೆ ಇದ್ದಕ್ಕಿದ್ದಂತೆ ನನ್ನನ್ನು ಎತ್ತಿ ಎಸೆದಳು. ನಾನೇನು ಕುಸ್ತಿಪುಟವಲ್ಲ. ಆಕೆ ಯಾವ ಕಾರಣಕ್ಕೆ ಹಾಗೆ ವರ್ತಿಸಿದಳು ಎಂಬುದು ನನಗೂ ಗೊತ್ತಿಲ್ಲ. ಬಹುಶಃ ನನ್ನನ್ನು ಸಾಯಿಸಲು ತನುಶ್ರೀಯವರು ಕುಸ್ತಿಪಟುವಿಗೆ ಹಣ ನೀಡಿರಬಹುದು. ನನಗೆ ಬೆನ್ನು ತೀವ್ರವಾಗಿದೆ ಎಂದು ಹೇಳಿಕೊಂಡಿದ್ದಾರೆ.