ಸಿನಿಮಾ ಸುದ್ದಿ

ನಟ ಅಜಿತ್ ನನ್ನು 18 ಕಿಮೀ ದೂರದವರೆಗೂ ಹಿಂಬಾಲಿಸಿದ ಆ ಅಭಿಮಾನಿ ಕೇಳಿದ್ದೇನು?

Raghavendra Adiga
ಚೆನ್ನೈ: ತಮಿಳಿನ ಖ್ಯಾತ ನಟ ಅಜಿತ್ ಅಭಿಮಾನಿಗಳನ್ನು ಗೌರವಿಸುತ್ತಾರೆ, ಪ್ರೀತಿಸುತ್ತಾರೆ ಎಂದು ಎಲ್ಲರಿಗೆ ತಿಳಿದ ವಿಚಾರ. ಹಾಗೆಯೇ ಅಭಿಮಾನಿಗಳು ಸಹ ಅವರನ್ನು ಸಾಕಷ್ಟು ಇಷ್ಟಪಡುತ್ತಾರೆ. ಆದರೆ ಕೆಲವೊಮ್ಮೆ ಕೆಲವೊಬ್ಬ ಅಭಿಮಾನಿಗಳು ಅವರೊಡನೆ ಒಂದು ಫೋಟೋ ತೆಗೆಸಿಕೊಳ್ಳುವುದಕ್ಕಾಗಿ ಎಂತಹಾ ಅಪಾಯಕರ ಕೆಲಸಕ್ಕೆ ಸಹ ಕೈಹಾಕುತ್ತಾರ ಎನ್ನುವುದು ಅಚ್ಚರಿಯ ಸತ್ಯ.
ಅಂತಹದೇ ಒಂದು ವಿಚಿತ್ರ ಘಟನೆ ಇದು. ಗಣೇಶ್ ಎನ್ನುವ ನಟ ಆಜಿತ್ ಅವರ ಕಟ್ಟಾ ಅಭಿಮಾನಿಯೊಬ್ಬ ಅವರೊಡನೆ ಫೋಟೋ ತೆಗೆಸಿಕೊಳ್ಳುವುದಕ್ಕಾಗಿ ಅವರ ಕಾರನ್ನು ಸುಮಾರು 18 ಕಿಲೋಮೀಟರ್ಗಳಷ್ಟು ದೂರದಿಂದ ಹಿಂಬಾಲಿಸಿಕೊಇಂಡು ಬಂದಿದ್ದಾನೆ! ಹೀಗೆಂದು ಅವನೇ ತನ್ನ ಫೇಸ್ ಬುಕ್ ಪೋಸ್ಟ್ ನಲ್ಲಿ ಹೇಳಿಕೊಂಡಿದ್ದಾರೆ.
ಈ ಹಿಂದೆ ಆತ ಅಜಿತ್ ಜತೆಗೆ ಫೋಟೋ ತೆಗೆಸಿಕೊಳ್ಳುವ ಸಾಕಷ್ಟು ಅವಕಾಶವನ್ನು ಕೈಚೆಲ್ಲಿದ್ದಾಗಿ ಗಣೇಶ್ ಹೇಳಿದ್ದು ಈ ಬಾರಿ ಚೆನ್ನೈ ವೊಮಾನ ನಿಲ್ದಾಣದಿಂದ ಅವರ ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದಾಗಿ ವಿವರಿಸಿದ್ದಾನೆ.
"ನವೆಂಬರ್ 10ರ ರಾತ್ರಿ ಅಜಿತ್ ಅವರನ್ನು ನಾನು ಚೆನ್ನೈ ವಿಮಾನ ನಿಲ್ದಾಣದಲ್ಲಿ ನೋಡಿದೆ. ಆದರೆ ಜನಸಂದಣಿಯ ನಡುವೆ ಇದ್ದ ಅಜಿತ್ ಸಮೀಪಕ್ಕೆ ನಾನು ತೆರಳುವುದಕ್ಕೆ ಆಗಿರಲಿಲ್ಲ. ಹೀಗಾಗಿ ನಾನು ಅವರ ಕಾರನ್ನು ಹಿಂಬಾಲಿಸಲು ನಿರ್ಧರಿಸಿದೆ. ಸುಮಾರು 18 ಕಿಮೀ. ದೂರದವರೆಗೆ ಕಾರನ್ನು ಹಿಂಬಾಲಿಸಿದ ಬಳಿಕ ನಟ ಅಜಿತ್ ಕಾರಿನ ಚಾಲಕ ನನ್ನನ್ನು ಕರೆದಿದ್ದಾರೆ.
ಅಜಿತ್ ಸಮೀಪಕ್ಕೆ ತೆರಳಿದ ಗಣೇಶ್ ಗೆ ನಟ ಅವನ ಹೆಸರನ್ನು ಕೇಳಿದ್ದಾರೆ. ಅಲ್ಲದೆ ಇಂತಹಾ ಅಪಾಯಕಾರಿ ಕೆಲಸಕ್ಕೆ ಇನ್ನು ಮುಂದೆ ಕೈಹಾಕಬಾರದೆಂದು ಬುದ್ದಿ ಮಾತನ್ನೂ ಹೇಳಿದ್ದಾರೆ.
ಇದಕ್ಕೆ ಪ್ರತಿಯಾಗಿ ಗಣೇಶ್ ಅನಟ ಅಜಿತ್ ಅವರ ಕ್ಷಮೆ ಕೇ:ಳಿದ್ದಾರೆ, ಅಜಿತ್ ಜತೆಗೆ ಫೊಟೋ ತೆಗೆಸಿಕೊಂಡ ಗಣೇಶ್ ಅವರ ಮುಂದಿನ ಚಿತ್ರ "ವಿಶ್ವಾಸಮ್" ಯಶಸ್ಸಿಗಾಗಿ ಶುಭ ಹಾರೈಸಿದ್ದಾರೆ.
ಅಂದಹಾಗೆ ಅಜಿತ್ "ವಿಶ್ವಾಸಮ್" ಚಿತ್ರದ ತಮ್ಮ ಪಾಲಿನ ಶೂಟಿಂಗ್ ಅನ್ನು ಇದಾಗಲೇ ಸಂಪೂರ್ಣಗೊಳಿಸಿದ್ದು ಚಿತ್ರ ಜನವರಿಯಲ್ಲಿ ತೆರೆಗೆ ಬರಲಿದೆ.
SCROLL FOR NEXT