ಅಮಿತಾಬ್ ಬಚ್ಚನ್, ಸುದೀಪ್, ರಿಷಬ್ ಶೆಟ್ಟಿ 
ಸಿನಿಮಾ ಸುದ್ದಿ

ಬಾಲಿವುಡ್ ಗೆ ರಿಷಬ್ ಶೆಟ್ಟಿ: ಅಮಿತಾಬ್ ಬಚ್ಚನ್, ಸುದೀಪ್ ಗಾಗಿ ಸಿನಿಮಾ!

: ನಟ ಸುದೀಪ್ ಹಾಗೂ ರಿಷಬ್ ಶೆಟ್ಟಿ ಒಟ್ಟಾಗಿ ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ, ..

ಬೆಂಗಳೂರು: ನಟ ಸುದೀಪ್ ಹಾಗೂ ರಿಷಬ್ ಶೆಟ್ಟಿ ಒಟ್ಟಾಗಿ ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ, ಇದರ ಬೆನ್ನಲ್ಲೇ ರಿಷಬ್ ಶೆಟ್ಟಿ ಸುದೀಪ್ ಗಾಗಿ ಎರಡು ಕಥೆ ಬರೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ,  
ಇದರಲ್ಲಿ ಒಂದು ಕಥೆ ಹಿಂದಿ ಕಥೆಯಾಗಿದ್ದು ಅಮಿತಾಬ್ ಬಚ್ಚನ್ ಮತ್ತು ಸುದೀಪ್ ಅವರಿಗಾಗಿ ಬರೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹಿಂದಿ ಕಥೆ ನಿರ್ದೇಶಕ ಪ್ರಪ್ರಥಮ ಕಥೆಯಾಗಿದೆ, ಅಂದರೆ ಮೊದಲ ಬಾರಿಗೆ ರಿಷಬ್ ಶೆಟ್ಟಿ 10 ನೇ ತರಗತಿಯಲ್ಲಿದ್ದಾಗ ಬರೆದ ಕಥೆ ಇದಾಗಿದ್ದು, ಅದನ್ನು ಮತ್ತೆ ಹೊಸ ಟ್ವಿಸ್ಟ್ ನೊಂದಿಗೆ ತರಲಾಗುತ್ತಿದೆ.
ರಿಷಬ್ ಶೆಟ್ಟಿ ಇನ್ನೂ ಬಿಗ್ ಬಿ ಅವರನ್ನು ಭೇಟಿ ಮಾಡಿ ಬೇಕಾಗಿದೆ, ಕಥೆಯನ್ನು ಸಂಕ್ಷಿಪ್ತವಾಗಿ ಕಳುಹಿಸಲಾಗಿದೆ, ನಂತರ ಅವರಿಗೆ ಕಥೆ ಹೇಳಬೇಕಾಗಿದೆ,. ಅಮಿತಾಬ್ ಮತ್ತು ಸುದೀಪ್ ಅವರನ್ನು ಒಟ್ಟಿಗೆ ಸಿನಿಮಾದಲ್ಲಿ  ಕರೆ ತರಬೇಕೇಂಬುದು ರಿಷಬ್ ಆಸೆ, ಹೀಗಾಗಿ ತಮ್ಮ ತಂಡದೊಂದಿಗೆ ಕಥೆ ತಯಾರಾಗುತ್ತಿದ್ದಾರೆ. ಅಮಿತಾಬ್ ಮತ್ತು ಸುದೀಪ್ ಇಬ್ಬರು ಗ್ರೀನ್ ಸಿಗ್ನಲ್ ನೀಡಿದ ನಂತರ ಅಧಿಕೃತವಾಗಿ ಎಲ್ಲಾ ಘೋಷಮೆ ಮಾಡಲಾಗುವುದು.
ನಿರ್ಮಾಪಕ ರಾಜೇಶ್ ಭಟ್ ರಿಷಬ್ ಅವರ ಕಥೆಯನ್ನು ಇಷ್ಟಪಟ್ಟಿದ್ದಾರೆಯ. ರಿಷಬ್ ಸದ್ಯ ಕಥೆಯನ್ನು ಹಿಂದಿಯಲ್ಲಿಯೇ ಬರೆಯುತ್ತಿದ್ದಾರೆ, ಆದರೆ ಕನ್ನಡ ಮತ್ತು ಹಿಂದಿ ಎರಡು ಭಾಷೆಯಲ್ಲಿಯೂ ಕತೆ ಬರೆಯಲು ನಿರ್ಧರಿಸಲಾಗಿದೆ, ಎರಡು ಪಾತ್ರಗಳಿಗೂ ಮಹತ್ವ ನೀಡಲಾಗುವುದು, ಆದರೆ ಈ ಬಗ್ಗೆ ರಿಷಬ್ ಶೆಟ್ಟಿ ಎಲ್ಲಿಯೂ ತುಟಿ ಬಿಚ್ಚಿಲ್ಲ, ಕಥೆಗೆ ಒಂದು ರೂಪ ದೊರೆಯುವವರೆಗೂ ಎಲ್ಲಿಯೂ ಮಾಹಿತಿ ನೀಡದಂತೆ ರಿಷಬ್ ನಿರ್ಬಂಧ ಹಾಕಿಕೊಂಡಿದ್ದಾರೆ.
ಅಮಿತಾಬ್ ಮತ್ತು ಸುದೀಪ್ ಈಗಾಗಲೇ ರಾಮ್ ಗೋಪಾಲ್ ವರ್ಮಾ ಅವರ ರನ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ, ಮತ್ತೊಮ್ಮೆ ಈ ಇಬ್ಬರು ನಟರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರಾ ಕಾದು ನೋಡಬೇಕು.
ಇನ್ನೂ ಇದೇ ವೇಳೆ ರಿಷಬ್ ಸುದೀಪ್ ಗಾಗಿ ಮತ್ತೊಂದು ಕಥೆ ಬರೆಯುತ್ತಿದ್ದಾರೆ, ಕಿರಿಕ್ ಪಾರ್ಟಿಗೂ ಮುನ್ನ ಇದಕ್ಕೆ ಕಮಿಟ್ ಆಗಿದ್ದರು, ಸುದೀಪ್ ಗಾಗಿ ರಿಷಬ್ ಅನುಪಮಾವಾದ ಕಥೆ  ಸಿದ್ದ ಪಡಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT