ರೆಬೆಲ್ ಸ್ಟಾರ್ ಅಂಬರೀಷ್ 
ಸಿನಿಮಾ ಸುದ್ದಿ

ನಟ ಅಂಬರೀಷ್ ಗೆ 'ಮಂಡ್ಯದ ಗಂಡು' ಎಂಬ ಬಿರುದು ಕೊಟ್ಟಿದ್ದು ಯಾರು ಗೊತ್ತೇ?

ರೆಬೆಲ್ ಸ್ಟಾರ್ ಅಂಬರೀಷ್ ಗೆ ಮಂಡ್ಯದ ಗಂಡು ಬಿರುದು ಕೊಟ್ಟಿದ್ದು ನಾನೆ. ಅವರ ಸಾವು ನನಗೆ ನೋವು ತಂದಿದೆ. ಅವರದ್ದು ಇನ್ನು ಚಿಕ್ಕ ವಯಸ್ಸು ಎಂದು ಮಾಜಿ ಸಂಸದ, ...

ಮಂಡ್ಯ:  ರೆಬೆಲ್ ಸ್ಟಾರ್ ಅಂಬರೀಷ್ ಗೆ ಮಂಡ್ಯದ ಗಂಡು ಬಿರುದು ಕೊಟ್ಟಿದ್ದು ನಾನೆ. ಅವರ ಸಾವು ನನಗೆ ನೋವು ತಂದಿದೆ. ಅವರದ್ದು ಇನ್ನು ಚಿಕ್ಕ ವಯಸ್ಸು ಎಂದು ಮಾಜಿ ಸಂಸದ, ಕಾವೇರಿ ನೀರಾವರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ. ಮಾದೇಗೌಡ ಅಂಬಿ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಅಂಬರೀಷ್​ ಅವರು ಮೃದು ಸ್ವಭಾವದ ವ್ಯಕ್ತಿ. ಅವರ ಜತೆ ತುಂಬಾ ಒಡನಾಟ ಹೊಂದಿದ್ದೆ. ಅಲ್ಲದೆ, ಅವರ ತಂದೆಯೊಂದಿಗೂ ನನಗೆ ಒಡನಾಟವಿತ್ತು. ಅವರು ರಾಜಕೀಯವಾಗಿಯೂ ಹೆಸರು ಮಾಡಿದ್ದರು. ಅವರ ಸಾವಿನಿಂದ ರಾಜ್ಯಕ್ಕೆ, ದೇಶಕ್ಕೆ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.
ರಾಜಕೀಯದಲ್ಲಿ ಸಚಿವರಾಗಿಯೂ ಅಂಬಿ ಹೆಸರು ಮಾಡಿದ್ದರು. ಅವರು ನಮ್ಮ ಊರಿನವರು. ಹಾಗಾಗಿ ಅವರ ಕುಟುಂಬದ ಜತೆ ಒಡನಾಟ ಇತ್ತು ಎಂದು ಮಾದೇಗೌಡ ಸ್ಮರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!