ಅಂಬರೀಷ್ 
ಸಿನಿಮಾ ಸುದ್ದಿ

ಬರೋಬ್ಬರೀ 17 ವರ್ಷ ವುಡ್ ಲ್ಯಾಂಡ್ಸ್ ಹೋಟೆಲ್ ನ ರೂಂ '412' ಅಂಬಿ ತವರು ಮನೆಯಂತಾಗಿತ್ತು ಏಕೆ?

ನಗರದ ರಿಚ್ಮಂಡ್ ಸರ್ಕಲ್ ನಲ್ಲಿರುವ ವುಡ್ ಲ್ಯಾಂಡ್ಸ್ ಹೋಟೆಲ್ ನ 412 ಸಂಖ್ಯೆಯ ಕೊಠಡಿ ಸುಮಾರು 17 ವರ್ಷಗಳ ಕಾಲ ನಟ ಅಂಬರೀಷ್ ಅವರಿಗೆ ಮನೆಯಂತಿತ್ತು,

ಬೆಂಗಳೂರು: ನಗರದ ರಿಚ್ಮಂಡ್ ಸರ್ಕಲ್ ನಲ್ಲಿರುವ ವುಡ್ ಲ್ಯಾಂಡ್ಸ್ ಹೋಟೆಲ್ ನ 412 ಸಂಖ್ಯೆಯ ಕೊಠಡಿ ಸುಮಾರು 17 ವರ್ಷಗಳ ಕಾಲ ನಟ ಅಂಬರೀಷ್ ಅವರಿಗೆ ಮನೆಯಂತಿತ್ತು,  ತಮ್ಮ ಹೊಸ ಮನೆಗೆ ಶಿಫ್ಟ್ ಆಗುವವರೆಗೂ ಅಂಬರೀಷ್ ಅಲ್ಲಿಯೇ ವಾಸವಿದ್ದರು. ಶೇ. ರಷ್ಟು ಬಾಡಿಗೆಯನ್ನು ಸಿನಿಮಾ ನಿರ್ಮಾಪಕರು ಪಾವತಿಸುತ್ತಿದ್ದರು.
ವುಡ್ ಲ್ಯಾಂಡ್ಸ್ ಹೋಟೆಲ್ ನ 4ನೇ ಫ್ಲೋರ್  ವಿಐಪಿಗಳಿಗೆ ಮೀಸಲಾಗಿತ್ತು.  ಹಲವು ನಿರ್ಮಾಪಕರು ಪಂಚಾತಾರಾ ಹೋಟೆಲ್ ಗಳಿಗೆ ಶಿಫ್ಟ್ ಆಗುವಂತೆ ಅಂಬರೀಷ್ ಬಳಿ ಹೇಳಿದ್ದರು. ಆದರೆ ಅಂಬಿ ಯಾವಾಗಲೂ ವುಡ್ ಲ್ಯಾಂಡ್ ಹೋಟೆಲ್ ನಲ್ಲಿಯೇ ಇರಲು ಬಯಸುತ್ತಿದ್ದರು ಎಂದು ಹೋಟೆಲ್ ಸಂಸ್ಥಾಪಕ ಕೃಷ್ಣ ರಾವ್ ಅವರ ಪುತ್ರ ವಾಸುದೇವ ರಾವ್ ಹೇಳಿದ್ದಾರೆ.
ಮತ್ತೊಬ್ಬ ನಟ ಡಾ. ವಿಷ್ಣು ವರ್ಧನ್ ಕೂಡ ಸುಮಾರು 10 ವರ್ಷಗಳ ಕಾಲ ವುಡ್ ಲ್ಯಾಂಡ್ ಹೋಟೆಲ್ ನಲ್ಲಿದ್ದರು, ಅಂಬರೀಷ್ ಕುಟುಂಬಕ್ಕೂ ವುಡ್ ಲ್ಯಾಂಡ್ ಹೋಟೆಲ್ ಗೂ ಆತ್ಮೀಯ ಸಂಬಂಧವಿತ್ತು. ಅಂಬರೀಷ್ ತಾತ ಪೀಟಿಲು ಚೌಡಯ್ಯ ಕೂಡ  ಚೆನ್ನೈ ನ ವುಡ್ ಲ್ಯಾಂಡ್ ಹೊಟೇಲ್ ನಲ್ಲೇ ಇರಲು ಬಯಸುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.
ಅಂಬರೀಷ್ ನನ್ನ ತಂದೆಗೆ ಆತ್ಮೀಯರಾಗಿದ್ದರು. ಅವರು ಹೋಟೆಲ್ ನಿಂದ ಮನೆಗೆ ತಮ್ಮ ವಾಸ್ತವ್ಯ ಶಿಫ್ಟ್ ಮಾಡಿದ ಮೇಲೂ ಆಗಾಗ್ಗೆ ಬಂದು ಹೊಟೇಲ್ ಗೆ ಭೇಟಿ ನೀಡುತ್ತಿದ್ದರು. ಪ್ರತಿಯೊಬ್ಬರನ್ನು ಪ್ರೀತಿಸುತ್ತಿದ್ದ ಉತ್ತಮ ಮನುಷ್ಯ, ಅವರಿಗೆ ಹಣ ಎಂದು ಮುಖ್ಯವಾಗಿರಲಿಲ್ಲ,
ವುಡ್ ಲ್ಯಾಂಡ್ ಹೋಟೆಲ್ ನಲ್ಲಿ ಅಂಬರೀಷ್ ದಿನಕ್ಕೆ ನಾಲ್ಕು ಬಾರಿ ಊಟ ಮಾಡುತ್ತಿದ್ದರು. ಅದನ್ನೇ ಅವರು ಮನೆಯಲ್ಲೂ ಕೂಡ ಮುಂದುವರೆಸಿದರು. ನನ್ನ ಜೊತೆ ಅವರು ಹೆಚ್ಚಿನ ಸಮಯ ಕಳೆಯುವಂತೆ ಹೇಳುತ್ತಿದ್ದರು. ಅವರಿಗೆ ಸಸ್ಯಾಹಾರದ ಬ್ರೇಕ್ ಫಾಸ್ಟ್ ಇಷ್ಟ ಆಗುತ್ತಿತ್ತು. ಬೇರೆ ಮನೆಗಳಿಗೆ ಹೋದಾಗ ವಿಭಿನ್ನ ರೀತಿಯ ಆಹಾರ ಸೇವಿಸುತ್ತಿದ್ದ ಅಂಬರೀಷ್ ವುಡ್ ಲ್ಯಾಂಡ್ಸ್ ನಲ್ಲಿ ಸಸ್ಯಹಾರಿ ಉಪಹಾರ ಅವರ ಫೇವರಿಟ್ ಆಗಿತ್ತು, ಅವರನ್ನು ನಾವು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹರಿಯಾಣದಲ್ಲೂ ಮತಗಳ್ಳತನ: ರಾಹುಲ್ ಹೇಳಿಕೆ ಆಧಾರರಹಿತ ಎಂದ ಚುನಾವಣಾ ಆಯೋಗ

ಸಶಸ್ತ್ರ ಪಡೆಗಳಲ್ಲಿ 'ಮೀಸಲಾತಿ'ಗೆ ಒತ್ತಾಯ: ಅರಾಜಕತೆ ಸೃಷ್ಟಿಸಲು ರಾಹುಲ್ ಪ್ರಯತ್ನ- ರಾಜನಾಥ್ ಸಿಂಗ್ ಆರೋಪ

ಆಪ್ತಮಿತ್ರನಿಗೆ ಕೈ ಕೊಡ್ತಾ ಭಾರತ? ಡಿಸೆಂಬರ್ ನಿಂದ ರಷ್ಯಾ ಕಚ್ಚಾ ತೈಲ ಆಮದು ಕಡಿತ; ಒಪ್ಪಂದದಿಂದ ಹಿಂದೆ ಸರಿದ ಕಂಪನಿಗಳು

ನ್ಯೂಯಾರ್ಕ್‌ನಲ್ಲಿ ನೆಹರೂರನ್ನು ಹೊಗಳಲಾಯಿತು, ಆದರೆ ಭಾರತ ಅವಮಾನಿಸುತ್ತಿದೆ: ಪ್ರಿಯಾಂಕಾ

ನ್ಯೂಯಾರ್ಕ್ ಅಂಗಳದಲ್ಲಿ ನಿಂತು Nehru ಮಾತು ಉಲ್ಲೇಖ; ಟ್ರಂಪ್​ಗೆ ಎಚ್ಚರಿಕೆ ಕೊಟ್ಟ ಜೊಹ್ರಾನ್ ಮಮ್ದಾನಿ: Video

SCROLL FOR NEXT