ಬೆಂಗಳೂರು: ಕಳೆದ ಮೂರು ವರ್ಷಗಳಿಂದ ರವಿ ಬಸ್ರೂರು ಕೆಜಿಎಫ್ ಸಿನಿಮಾ ಸಂಗೀತಕ್ಕಾಗಿ ಹಗಲಿರುಳು ದುಡಿಯುತ್ತಿದ್ದಾರೆ, ಪ್ರಪಂಚದ ವಿವಿಧ ಭಾಗಗಳ ಸುಮಾರು 400 ಕಲಾವಿದರು ಹಾಗೂ 20 ಸೌಂಡ್ ಪ್ರೊಡ್ಯೂಸರ್ ಗಳು ಕೆಜಿಎಫ್ ಗಾಗಿ ಕೆಲಸ ಮಾಡಿದ್ದಾರೆ, ಅಭಿಮಾನಿಗಳಲ್ಲಿ ಕೆಜಿಎಫ್ ಸಿನಿಮಾ ಸಂಗೀತ ಅತೀವ ಕುತೂಹಲ ಕೆರಳಿಸಿದೆ.
ರಿ ರೆಕಾರ್ಡಿಂಗ್ ಕೆಲಸ ಕೊನೆಯ ಹಂತದಲ್ಲಿದ್ದು, ಸಮಯ ಸಂಪೂರ್ಣವಾಗಿ ಕಳೆದು ಕೊಂಡಿದ್ದಾಗಿ ರವಿ ತಿಳಿಸಿದ್ದಾರೆ. ಜೊತೆಗೆ ಸಂಗೀತ ಸಂಯೋಜನೆ ಮಾಡುವಾಗ ರಾತ್ರಿ ಹಗಲಿನ ನಡುವೆ ಅವರಿಗೆ ಯಾವುದೇ ವ್ಯತ್ಯಾಸವಿರಲಿಲ್ಲವಂತೆ, ಈಗಾಗಲೇ ಮೂರು ಹಾಡುಗಳಿಗೆ ಸಂಗೀತ ಸಂಯೋಜನೆಯಾಗಿದ್ದು, ನಾಲ್ಕನೇ ಹಾಡು ಸೇರಿಸುವುದರ ಬಗ್ಗೆ ರವಿ ಇನ್ನೂ ಚಿಂತಿಸುತ್ತಿದ್ದಾರೆ.
ಒಂದು ವೇಳೆ ಕೆಜಿಎಫ್ ನನ್ನ ಕೊನೆ ಆಲ್ಬಂ ಆದರೆ ನಾನು ಇಲ್ಲಿಯವರೆಗೆ ಮಾಡಿದ್ದರ ಬಗ್ಗೆ ನನಗೆ ತೃಪ್ತಿಯಿದೆ, ಈ ಸಿನಿಮಾ ಒಂದು ಹೆಗ್ಗರುತಾಗಲಿದೆ ಎಂದು ನನ್ನ ಅನಿಸಿಕೆ, ತಮ್ಮ ಪಿಯಾನೋ ಇಲ್ಲದೇ ಅವರು ಎಂದು ಸೆಟ್ ಗೆ ಬಂದಿಲ್ಲವಂತೆ, ಕೆಜಿಎಫ್ ಸಿನಿಮಾಗಾಗಿಯೇ ಅವರು 3 ವರ್ಷಗಳ ಹಿಂದೆ ಪಿಯಾನೋ ಖರೀದಿಸಿದ್ದು, ಪ್ರತಿಯೊಂದು ಟ್ಯೂನ್ ಪಿಯಾನೋಯಿಂದಲೇ ಸಂಯೋಜಿಸಿದ್ದಾಗಿ ರವಿ ತಿಳಿಸಿದ್ದಾರೆ.,
ಕೆಜಿಎಫಿ ಸಿನಿಮಾದಲ್ಲಿ ರವಿ ಸಂಗೀತ ಸಂಯೋಜನೆಯಲ್ಲಿ ವಿಭಿನ್ನ ಪ್ರಯೋಗ ನಡೆಸಿದ್ದಾರೆ. ಕೆಜಿಎಫ್ ಸಂಗೀತ ಹಾಲಿವುಡ್ ಸಿನಿಮಾ ರೀತಿಯಲ್ಲಿದೆ, ಹಾಲಿವುಡ್ ನ ತಂತ್ರಜ್ಞರು ಮತ್ತು ಸೌಂಡ್ ಪ್ರೊಡ್ಯೂಸರ್ ಗಳ ಜೊತೆ ಚರ್ಚಿಸಿ ಸಂಗೀತ ಸಂಯೋಜನೆ ಮಾಡಿದ್ದಾರೆ, ನಾನು ಕೆಲವೇ ಸಿನಿಮಾಗಳಿಗೆ ಕೆಲಸ ಮಾಡಿದ್ದರೂ ನನ್ನ ಸಂಗೀತ ವಿನ್ಯಾಸ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದ್ದಾರೆ.
ಬಡ ಕುಟುಂಬದಿಂದ ಬಂದ ರವಿ ಸಂಗೀತ ನಿರ್ದೇಶಕರಾಗಲು ಹಲವು ಕಲ್ಲು ಮುಳ್ಳಿನ ಹಾದಿ ಎದುರಿಸಿ ಬರಬೇಕಾಯಿತು. ಬೆಂಗಳೂರಿಗೆ ಕಿ ಬೋರ್ಡ್ ಹಿಡಿದು ಬಂದ ರವಿ ಹಲವು ಅಪಮಾನಗಳನ್ನು ಎದುರಿಸಬೇಕಾಯಿತು. ಕಿಬೋರ್ಡ್ ಇವಾಗ ಕೆಲಸ ಮಾಡುವುದಿಲ್ಲ ಎಂದು ಹೇಳಿದ ಹೆಸರಾಂತ ಸಂಗೀತ ನಿರ್ದೇಶಕರುಗಳು ನನ್ನನ್ನು ವಾಪಸ್ ಕಳುಹಿಸಿದರು.
ಆ ವೇಳೆ ನಾನು ನನ್ನ ಜೀವನವನ್ನು ಕೊನೆಗೊಳಿಸಿಕೊಳ್ಳಬೇಕೆಂದು ನಿರ್ಧರಿಸಿದ್ದೆ,ಈ ವೇಳೆ ಯಾರೋ ಒಬ್ಬರು ನನ್ನನ್ನು ಅವಿನ್ಯೂ ರಸ್ತೆಯಲ್ಲಿರುವ ಆಭರಣ ಅಂಗಡಿಗೆ ಕರೆದುಕೊಂಡಿ ಹೋದರು, ಅಲ್ಲಿ ಒಬ್ಬರು ನನ್ನ ಫೇಸ್ ರೀಡಿಂಗ್ ಮಾಡಿ, ನನಗೆ ಉತ್ತಮ ಭವಿಷ್ಯವಿದೆ ಎಂದು ಹೇಳಿದರು. ಆ ಕ್ಷಣದಲ್ಲಿ ಬದುಕಲು ನನಗೆ ಹಣ ಬೇಕೆಬೇಕು ಎನಿಸಿತು, ನನ್ನ ಕಥೆ ಕೇಳಿದ ಅವರು ಹೊಸ ಕೀ ಬೋರ್ಡ್ ಕೊಂಡುಕೊಳ್ಳಲು 35 ಸಾವಿರ ಹಣ ನೀಡಿದರು, ಅಲ್ಲಿಂದ ನನ್ನ ಜೀವನ ಬದಲಾಗಿ ಹೋಯಿತು, ಅಂದಿನಿಂದ ಕಿರಣ್ ಎಂದಿದ್ದ ನನ್ನ ಹೆಸರನ್ನು ರವಿ ಎಂದು ಬದಲಿಸಿಕೊಂಡೇ, ಬಸ್ರೂರು ನನ್ನ ಊರಾಗಿದ್ದರಿಂದ ರವಿ ಬಸ್ರೂರು ಎಂದು ಬದಲಿಸಿಕೊಂಡೆ ಎಂದು ವಿವರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics