ದೀಪಿಕಾ ಮತ್ತು ರಣವೀರ್ ಸಿಂಗ್ 
ಸಿನಿಮಾ ಸುದ್ದಿ

ನನ್ನ ಸಂತೋಷವೇ ಪತ್ನಿ ದೀಪಿಕಾ: ರಣವೀರ್ ಸಿಂಗ್

ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಬಾಲಿವುಡ್ ಕ್ಯೂಟ್ ಜೋಡಿ ದೀಪಿಕಾ ಪಡುಕೋಣೆ ಹಾಗೂ ರಣಬೀರ್ ಸಿಂಗ್ ಅವರು ಸಂತಸದಲ್ಲಿ ತೇಲಾಡುತ್ತಿದ್ದು, ದೀಪಿಕಾ ಸಂತೋಷ ಬಿಟ್ಟರೆ ಬೇರಾವುದೂ ನನಗೆ ಬೇಕಿಲ್ಲ ಎಂದು ರಣಬೀರ್ ಸಿಂಗ್...

ನವದೆಹಲಿ: ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಬಾಲಿವುಡ್ ಕ್ಯೂಟ್ ಜೋಡಿ ದೀಪಿಕಾ ಪಡುಕೋಣೆ ಹಾಗೂ ರಣಬೀರ್ ಸಿಂಗ್ ಅವರು ಸಂತಸದಲ್ಲಿ ತೇಲಾಡುತ್ತಿದ್ದು, ದೀಪಿಕಾ ಸಂತೋಷ ಬಿಟ್ಟರೆ ಬೇರಾವುದೂ ನನಗೆ ಬೇಕಿಲ್ಲ ಎಂದು ರಣಬೀರ್ ಸಿಂಗ್ ಅವರು ಹೇಳಿದ್ದಾರೆ. 
ಫಿಲ್ಮ್ ಫೇರ್ ಜೊತೆಗಿನ ಸಂದರ್ಶದನಲ್ಲಿ ಮಾತನಾಡಿರುವ ರಣವೀರ್ ಸಿಂಗ್ ಅವರು, 6 ತಿಂಗಳ ಕಾಲ ನಾವಿಬ್ಬರೂ ಅರ್ಥ ಮಾಡಿಕೊಳ್ಳಲು ಆರಂಭಿಸಿದ್ದೆವು. ಈ ವೇಳೆ ನನ್ನ ಜೀವನ ಸಂಗಾತಿ ದೀಪಿಕಾ ಎಂಬುದು ತಿಳಿದಿತ್ತು. ಇದರಂತೆ ಇಬ್ಬರೂ ಪ್ರೀತಿಯನ್ನು ಮುಂದುವರೆಸಿದೆವು. ನಾವಿಬ್ಬರೂ ಪ್ರೀತಿ ಮಾಡಲು ಆರಂಭಿಸಿ 6 ವರ್ಷಗಳಾಗಿವೆ. ದೀಪಿಕಾ ಅತ್ಯಂತ ಒಳ್ಳೆಯ, ಪ್ರೀತಿಯ ಹುಡುಗಿ. ಆಕೆ ಸ್ವಭಾವವನ್ನು ಅತಿ ಬೇಗನೆ ಅರ್ಥ ಮಾಡಿಕೊಂಡೆ ಎಂದು ಹೇಳಿದ್ದಾರೆ. 
ಬಳಿಕ ಇಟಲಿಯಲ್ಲಿ ವಿವಾಹವಾಗಿದ್ದಕ್ಕೆ ಕಾರಣವೇನು ಎಂಬುದಕ್ಕೆ ಉತ್ತರಿಸಿದ ಅವರು, ಪ್ರೀತಿ ದೀಪಿಕಾಳ ಆಸೆ ನನಗೆ ಮುಖ್ಯ. ಆಕೆ ಇಷ್ಟಪಟ್ಟಂತೆ ಇಟಲಿಯಲ್ಲಿ ವಿವಾಹವಾದೆವು. ಆಕೆ ಬಯಸಿದ್ದಂತೆ, ಆಕೆ ಇಷ್ಟಪಟ್ಟಂತೆ ವಿವಾಹವಾದೆವು. ಪ್ರತೀ ಸಂತೋಷಕ್ಕೂ ಆಕೆ ಅರ್ಹಳು. ಆಕೆ ಇಷ್ಟಪಟ್ಟದನ್ನು ನೀಡಬೇಕು. ನಾನು ಆ ಸಂತೋಷಕ್ಕೆ ಅರ್ಹನಾಗಿದ್ದೇನೆ. ನನ್ನ ಸಂತೋಷವೇ ದೀಪಿಕಾ ಎಂದು ತಿಳಿಸಿದ್ದಾರೆ. 
6 ವರ್ಷಗಳ ಕಾಲ ಪ್ರೀತಿಯಿಲ್ಲಿ ಬಿದ್ದಿದ್ದ ಈ ಜೋಡಿ ನ.14 ರಂದು ಇಟಲಿಯಲ್ಲಿ ಕೊಂಕಣಿ ಸಂಪ್ರದಾಯದಂತೆ ವಿವಾಹ ಜೀವನಕ್ಕೆ ಕಾಲಿಟ್ಟರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?