ಮಣಿರತ್ನಂ 
ಸಿನಿಮಾ ಸುದ್ದಿ

ಖ್ಯಾತ ನಿರ್ದೇಶಕ ಮಣಿರತ್ನಂ ಅವರಿಗೆ ಬೆದರಿಕೆ ಕರೆ : ಪೊಲೀಸ್ ಭದ್ರತೆ

ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಮಣಿರತ್ನಂ ಅವರಿಗೆ ಕಿಡಿಗೇಡಿಗಳಿಂದ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಚೆನ್ನೈನ ಅಭಿರಾಮಪುರದಲ್ಲಿರುವ ಮಣಿರತ್ನಂ ಅವರ ...

ಚೆನ್ನೈ:  ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಮಣಿರತ್ನಂ ಅವರಿಗೆ ಕಿಡಿಗೇಡಿಗಳಿಂದ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಚೆನ್ನೈನ ಅಭಿರಾಮಪುರದಲ್ಲಿರುವ ಮಣಿರತ್ನಂ ಅವರ ನಿವಾಸಕ್ಕೆ ಪೊಲೀಸರು ದೌಡಾಯಿಸಿದ್ದಾರೆ.
ಈ ಸಂಬಂಧ  ನಿರ್ದೇಶಕ ಮಣಿರತ್ನಂ ದೂರು ದಾಖಲಿಸಿದ್ದಾರೆ.
ಬಾಂಬ್​ಸ್ಕ್ವಾಡ್​​​ಮನೆಯನ್ನು ಪರಿಶೀಲನೆ ಮಾಡಿದ್ದು, ಅವರ ಮನೆ ಹಾಗೂ ಕಚೇರಿಗೆ  ಭದ್ರತೆ ಹೆಚ್ಚಿಸಲಾಗಿದೆ. 
ಮಣಿರತ್ನಂ ಅವರ ಇತ್ತೀಚಿನ ಚೆಕ್ಕ ಚೀವಂತ ವಾನಂ ಚಿತ್ರದಲ್ಲಿನ ವಿವಾದಾತ್ಮಕ ಸಂಭಾಷಣೆಯೇ ಈ ಬಾಂಬ್ ಬೆದರಿಕೆಗೆ ಕಾರಣ ಎಂದು ಹೇಳಲಾಗಿದೆ. ಈ ಸಿನಿಮಾದಲ್ಲಿನ ಕೆಲವು ವಿವಾದಾತ್ಮಕ ಸಂಭಾಷಣೆಗಳನ್ನು ತೆಗೆದು ಹಾಕಬೇಕೆಂದು ಬೆದರಿಕೆ ಹಾಕಲಾಗಿದೆ. 
ಸೆಪ್ಟಂಬರ್ 28 ರಂದು ಬಿಡುಗಡೆಯಾದ ಚೆಕ್ಕ ಚೀವಂತ ವಾನಂ ಚಿತ್ರದಲ್ಲಿ ನಟರಾದ ಅರವಿಂದ ಸ್ವಾಮಿ, ಸಿಂಬು ವಿಜಯ್ ಸೇತುಪತಿ, ಅರುಣ್ ವಿಜಯ್,  ಜ್ಯೋತಿಕಾ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ..

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್