ಅಪೂರ್ವ 
ಸಿನಿಮಾ ಸುದ್ದಿ

'ವಿಕ್ಟರಿ 2' ಹಾಡಿಗೆ ನಟಿ ಅಪೂರ್ವ ಹೆಜ್ಜೆ!

ನಟ ಶರಣ್ ಅಭಿನಯದ ಬಹುನಿರೀಕ್ಷಿತ ಚಿತ್ರ "ವಿಕ್ಟರಿ 2" ನ "ಕುಟ್ಟು ಕುಟ್ಟು ಕುಟ್ಟಪ್ಪ" ಹಾಡು ಇದೀಗ ಸಾಮಜಿಕ ಜಾಲತಾಣ ಸೇರಿಹಲವು ಚಾಟ್ ಬಜ್ ಗಳಲ್ಲಿ ಅಗ್ರಸ್ಥಾನದಲ್ಲಿದೆ

ಬೆಂಗಳೂರು: ನಟ ಶರಣ್ ಅಭಿನಯದ ಬಹುನಿರೀಕ್ಷಿತ ಚಿತ್ರ "ವಿಕ್ಟರಿ 2" ನ "ಕುಟ್ಟು ಕುಟ್ಟು ಕುಟ್ಟಪ್ಪ" ಹಾಡು ಇದೀಗ ಸಾಮಜಿಕ ಜಾಲತಾಣ ಸೇರಿಹಲವು ಚಾಟ್ ಬಜ್ ಗಳಲ್ಲಿ ಅಗ್ರಸ್ಥಾನದಲ್ಲಿದೆ. ಶರಣ್ ಜತೆ ಅಭಿನಯಿಸಿದ ನಟಿ ಅಪೂರ್ವ ಅವರ ನೃತ್ಯ ಎಲ್ಲಾ ಚಿತ್ರಪ್ರೇಮಿಗಳ ಗಮನ ಸೆಳೆದಿದೆ. ನಾವು ಇದಾಗಲೇ ಇಂತಹಾ ಅಭಿನಯ ನೀಡಿದ ನಮ್ಮ ನಟಿಯರನ್ನು ಕಾಂಡಿದ್ದರೂ ಅಪೂರ್ವ ಈ ನಿರ್ದಿಷ್ಟ ಹಾಡಿನಲ್ಲಿ ಕಾಣಿಸಿಕೊಂಡ ರೀತಿ ನಿಜಕ್ಕೂ ವಿಭಿನ್ನವಾಗಿತ್ತು.
ನಾವು ಅಪೂರ್ವ ಅವರ ಈ ವಿಶಿಷ್ಟ ನೃತ್ಯದ ಕುರಿತು ಅವರನ್ನೇ ಕೇಳಿದಾಗ ನಾನು ನನ್ನ ಚೊಚ್ಚಲ ಚಿತ್ರ ಮಾಡಿದ ಬಳಿಕ ಕ್ರೇಜಿ ಸ್ಟಾರ್ ರವಿಚಂದ್ರನ್ ನನಗೆ ನೀನು ನಾಯಕಿಯಾಗಬೇಕಾದಲ್ಲಿ ನೃತ್ಯದ ವಿಭಿನ್ನ ಪ್ರಕಾರಗಳ ಪ್ರಯೋಗಗಳು ಕಲಿಯುವುದು ಅಗತ್ಯ ಎಂದಿದ್ದರು.ನಾನು ಮೊದಲಿನಿಂದ ನೃತ್ಯವನ್ನು ಇಷ್ಟಪಟ್ಟವಳಾಗಿದ್ದು ಅವರ ಮಾತಿನ ಬಳಿಕ ನಾನು ಮೂರು ತಿಂಗಳ ಕಾಲ ನೃತ್ಯ ತರಗತಿಗೆ ಸೇರಿದೆ. ಅಲ್ಲಿ ನಾನು ಹಲವು ಶಿಅಲಿಯ ನೃತ್ಯವನ್ನು ಅಭ್ಯಸಿಸಿದೆ. ಇದು ನನಗೆ ವಿಕ್ಟರಿಯಲ್ಲಿ ನೆರವಿಗೆ ಬಂದಿತು." ಅವರು ಹೇಳಿದ್ದಾರೆ.
ಹರಿ ಸಂತೋಷ್ ನಿರ್ದೇಶನದ ಈ ಚಿತ್ರಕ್ಕೆ ಧನಂಜಯ್ ನೃತ್ಯ ಸಂಯೋಜನೆ ಮಾಡಿದ್ದಾರೆ.
"ಸಾಮಾನ್ಯವಾಗಿ ಹೀರೋ (ನಾಯಕ ನಟ) ಮಾತ್ರ ಇಂತಹಾ ನೃತ್ಯವನ್ನು ಪ್ರದರ್ಶಿಸುತ್ತಾರೆ.ಆದರೆ ಇಲ್ಲಿ ನನಗೆ ಈ ಅವಕಾಅ ಒದಗಿತು. ಮತ್ತು ನಾನು ಇದನ್ನು ಯಶಸ್ವಿಯಾಗಿ  ಬಳಸಿಕೊಂಡಿರುವುದು ನನಗೆ ಖುಷಿ ತಂದಿದೆ.ಅಂದಹಾಗೆ ಇದು ನನ್ನ ಮೊದಲ ಪ್ರಯತ್ನವಾಗಿರುವ ಕಾರಣ ನನಗೆ ಕಾಲುನೋವು ಕಾಣಿಸಿಕೊಂಡಿತ್ತು. ಆದರೆ ಇದೆಲ್ಲದರ ಹೊರತಾಗಿ ಒಳ್ಳೆ ಚಿತ್ರತಂಡದಿಂದ ನನಗೆ ಉತ್ತಮ ಬೆಂಬಲ ಸಿಕ್ಕಿದೆ, ನನ್ನ ಆತ್ಮವಿಶ್ವಾಸ ಇಮ್ಮಡಿಯಾಗಿದೆ" ಪುನೀತ್ ರಾಜ್ ಕುಮಾರ್ ಕನಡದಲ್ಲಿನ ಒಬ್ಬ ಉತ್ತಮ ನೃತ್ಯಪಟುವಾಗಿದ್ದು ಅವರ ಪ್ರದರ್ಶನ ಶೈಯನ್ನು ನಾವು ಅನುಸರಿಸಬೇಕು" ಅಪೂರ್ವ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಕೊಡಗು: 100 ಎಕರೆ ಅರಣ್ಯ ವಲಯದಲ್ಲಿ ಬೌದ್ಧಧರ್ಮ ಜೊತೆಗೆ ಪರಿಸರ ಸಂರಕ್ಷಣೆ ಮಾಡುತ್ತಿರುವ 'ಕರ್ಮ ಕರ್ಗ್ಯು ಮಠ!

SCROLL FOR NEXT